ಸೋಲಿನ ಸರಪಳಿಯಿಂದ ಡೆಲ್ಲಿ ಕ್ಯಾಫಿಟಲ್ಸ್ ಹೊರಬರಲಿದೆ: ಸೌರವ್ ಗಂಗೂಲಿ ವಿಶ್ವಾಸ
2023ರ ಐಪಿಎಲ್ ಆವೃತ್ತಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಈವರೆಗೆ ಅತ್ಯಂತ ಕಹಿ ಅನುಭವ ನೀಡಿದ್ದು ಈವರೆಗೆ ಒಂದೂ ಗೆಲುವಿನ ರುಚಿ ಕಂಡಿಲ್ಲ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ನಾಲ್ಕರಲ್ಲಿಯೂ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ ತಂಡದ ಈ ಪ್ರದರ್ಶನದ ಬಗ್ಗೆ ಡಿಸಿ ಫ್ರಾಂಚೈಸಿಯ ನಿರ್ದೇಶಕ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು ಕಮ್‌ಬ್ಯಾಕ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಯುವ ತಂಡವಾಗಿದ್ದು ಪೂರ್ಣಪ್ರಮಾಣದ ನಾಯಕ ರಿಷಭ್ ಪಂತ್ ಅಲಭ್ಯತೆಯಲ್ಲಿ ಆಡುತ್ತಿದೆ. ಹೀಗಾಗಿ ಗೆಲುವಿನ ಲಯವನ್ನು ಕಂಡುಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಈ ಕಳಪೆ ಆರಂಭದಿಂದ ಹೊರಗೆ ಬಂದರೆ ಮಾತ್ರವೇ ಗೆಲುವು ಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ ಸೌರವ್ ಗಂಗೂಲಿ.

ಕಳೆದ ಮಂಗಳವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಂಕಪಟ್ಟಿಯಲ್ಲಿ ಕೆಳಸ್ಥಾನದಲ್ಲಿದ್ದ ಎರಡು ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯೆ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಅನುಭವಿಸುವ ಮೂಲಕ ಸೋಲಿನ ಸರಪಳಿ ಮುಂದುವರಿಸಿದರೆ ಮುಂಬೈ ಇಂಡಿಯನ್ಸ್ ಮೊದಲ ಗೆಲುವಿನ ರುಚಿ ಕಂಡಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ ಆರ್‌ಸಿಬಿ ತ
"ಇಲ್ಲಿಂದ ತಂಡ ಪುಟಿದೇಳಲು ಅದ್ಭುತವಾದ ಅವಕಾಶವಿದೆ. ಬೆಂಗಳೂರಿನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಯುವ ಆಟಗಾರರು ಲಯಕ್ಕೆ ಮರಳಲು ಅದ್ಭುತ ಅವಕಾಶವಿದೆ. ಕಮ್‌ಬ್ಯಾಕ್‌ಗೆ ಮರಳಲು ದಾರಿಯನ್ನು ಕಂಡುಕೊಳದ್ಳಬೇಕಿದೆ. ಇದು ಎಲ್ಲರಿಗೂ ಆಗುತ್ತದೆ. ಸುದೀರ್ಘ ಕಾಲ ಆಡಿದಾಗ ಇಂತಾ ಸಂದರ್ಭಗಳು ಉಂಟಾಗುತ್ತದೆ. ಇದರಿಂದ ಹೊರಗೆ ಬರಲು ತಮ್ಮದೇ ದಾರಿಯನ್ನು ಕಂಡುಕೊಳ್ಳಬೇಕು" ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನ ಲಯಕ್ಕೆ ಮರಳಬೇಕಾದರೆ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶಣ ನೀಡಲೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಯಶ್ ಧುಲ್, ಫಿಲ್ ಸಾಲ್ಟ್, ಸರ್ಫರಾಜ್ ಖಾನ್, ಮನೀಶ್ ಪಾಂಡೆ, ರಿಲೀ ರೋಸೌವ್, ರಿಪಾಲ್ ಪಟೇಲ್, ರೋವ್ಮನ್ ಪೊವೆಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಮನ್ ಖಾನ್, ವಿಕ್ಕಿ ಒಸ್ತ್ವಾಲ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಅಭಿಷೇಕ್ ಪೊರೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications