Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs RR IPL 2024: ಸಂಜು ಏಕಾಂಗಿ ಹೋರಾಟ ವ್ಯರ್ಥ; ಕೊನೆಗೂ ಗೆದ್ದು ಬೀಗಿದ ಡೆಲ್ಲಿ

ಮೇ 7 ಮಂಗಳವಾರ, ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 56ನೇ ಪಂದ್ಯದಲ್ಲಿ ರಾಜಸ್ತಾನ್‌ ರಾಯಲ್ಸ್‌ (ಆರ್‌ಆರ್‌) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ಭರ್ಜರಿ ಗೆಲವು ಸಾಧಿಸಿದೆ.

ಡೆಲ್ಲಿ ಎದುರು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ಮಾಡಿದ ಸಂಜು ಸ್ಯಾಮ್ಸನ್‌ ಹೋರಾಟ ರಾಜಸ್ತಾನಕ್ಕೆ ಗೆಲುವು ತಂದು ಕೊಡುವಲ್ಲಿ ವ್ಯರ್ಥವಾಯಿತು. ನಿಗದಿತ 20 ಓವರ್‌ಗಳಲ್ಲಿ ರಾಜಸ್ತಾನ 8 ವಿಕೆಟ್‌ಗಳನ್ನು ಕಳೆದುಕೊಂಡು 201 ರನ್‌ ಗಳಿಸಿತು. ಹೀಗಾಗಿ ಡೆಲ್ಲಿ 20 ರನ್‌ಗಳ ಜಯ ಕಂಡಿತು.

Delhi Capitals win against Rajasthan Royals IPL 2024 56th Match Report

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ 222 ರನ್‌ ಬೃಹತ್‌ ಗುರಿ ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್‌ಗೆ ಆರಂಭದಲ್ಲೇ 4 ರನ್‌ ಗಳಿಸಿದ ಯಶಸ್ವಿ ಜೈಸ್ವಾಲ್, ಖಲೀಲ್ ಅಹ್ಮದ್ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡು ನಿರಾಸೆ ಮೂಡಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಸಂಜು ಸ್ಯಾಮ್ಸನ್‌ ಅವರು ಜೋಸ್ ಬಟ್ಲರ್ ಜೊತೆಗೂಡಿ ಉತ್ತಮ ರನ್‌ ಕಲೆ ಹಾಕಿದರು.

ಈ ಜೋಡಿ ಆರ್ಧಶತಕದ ಜೊತೆಯಾಟವಾಡಿತು. ಬಳಿಕ ಜೋಸ್ ಬಟ್ಲರ್ 1 ಸಿಕ್ಸರ್‌ ಮತ್ತು 2 ಬೌಂಡರಿ ಹೊಡೆಯುವ ಮೂಲಕ 19 ರನ್‌ ಗಳಿಸಿ ಅಕ್ಸರ್‌ ಪಟೇಲ್‌ ಬೌಲಿಂಗ್‌ನಲ್ಲಿ ಔಟ್‌ ಆದರು. ನಂತರ ಸಂಜು ಸ್ಯಾಮ್ಸನ್‌ ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ರಿಯಾನ್‌ ಪರಾಗ್‌ ಜೊತೆ ಅದ್ಭುತ ಇನ್ನಿಂಗ್ಸ್‌ ಕಟ್ಟಿದರು. ನಿಧಾನವಾಗಿ ಬೌಂಡರಿ, ಸಿಕ್ಸರ್‌ ಗಳಿಸಿ ರಾಜಸ್ತಾನ ತಂಡವನ್ನು ಮೇಲೆತ್ತಿದರು.

ಉತ್ತಮವಾಗಿ ಆಡುತ್ತಿದ್ದ ರಿಯಾನ್‌ ಪರಾಗ್‌ 27 ರನ್‌ ಗಳಿಸಿ ರಾಸಿಖ್ ಸಲಾಂ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ಇನ್ನೊಂದೆಡೆ ಭರ್ಜರಿ ಬ್ಯಾಟಿಂಗ್‌ ಮುಂದುವರಿಸಿದ ಸಂಜು ಸ್ಯಾಮ್ಸನ್‌ ರಾಜಸ್ತಾನ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರು. ಕೊನೆ ಹಂತದಲ್ಲಿ ಸಂಜು ಕೇವಲ 46 ಎಸೆತಗಳಲ್ಲಿ 6 ಸಿಕ್ಸರ್‌ ಹಾಗು 8 ಬೌಂಡರಿ ನೆರವನಿಂದ 86 ರನ್‌ಗಳಿಸಿದರು. ಆದರೆ ಮುಖೇಶ್ ಕುಮಾರ್ ಬೌಲಿಂಗ್‌ನಲ್ಲಿ ಸಿಕ್ಸರ್‌ ಹೊಡೆಯಲು ಹೋಗಿ ಬೌಂಡರಿ ಗೆರೆಯಲ್ಲಿ ಕ್ಯಾಚ್‌ ಔಟ್‌ ಆದರು.

ಬಳಿಕ ಕ್ರೀಸ್‌ಗೆ ಬಂದ ರಾಜಸ್ತಾನ ತಂಡದ ಯಾವುದೇ ಆಟಗಾರನಿಂದ ಡೆಲ್ಲಿ ಗೆಲುವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. 25 ರನ್‌ಗೆ ಶುಭಂ ದುಬೆ, ಖಲೀಲ್ ಅಹ್ಮದ್ ಬೌಲಿಂಗ್‌ನಲ್ಲಿ ಔಟ್‌ ಆದರೆ, ಡೊನೊವನ್ ಫೆರೇರಾ (1) ಮತ್ತು ರವಿಚಂದ್ರನ್ ಅಶ್ವಿನ್ (2) ಅವರನ್ನು ಒಂದೇ ಓವರ್‌ನಲ್ಲಿ ಕುಲದೀಪ್ ಯಾದವ್ ಔಟ್‌ ಮಾಡಿ ಹೊರ ಕಳುಹಿಸಿದರು.

ಕೊನೆಯಲ್ಲಿ ರಾಜಸ್ತಾನ ತಂಡದ ಗೆಲುವಿಗಾಗಿ ಪರದಾಡಿದ ರೋವ್ಮನ್ ಪೊವೆಲ್ (13) ಅವರನ್ನು ಮುಖೇಶ್‌ ಔಟ್‌ ಮಾಡಿದರು. ಅಂತಿಮವಾಗಿ ಟ್ರೆಂಟ್ ಬೌಲ್ಟ್ (2) ಹಾಗು ಅವೇಶ್ ಖಾನ್ (7) ಅಜೇಯರಾಗುಳಿದರು.

ಡೆಲ್ಲಿ ಪರ ಬೌಲರ್ಸ್‌ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದರು. ಕುಲದೀಪ್ ಯಾದವ್, ಮುಖೇಶ್ ಕುಮಾರ್ ಮತ್ತು ಖಲೀಲ್ ಅಹ್ಮದ್ 2 ವಿಕೆಟ್‌ ಕಬಳಿಸಿದರೆ, ಅಕ್ಸರ್ ಪಟೇಲ್ ಮತ್ತು ರಾಸಿಖ್ ಸಲಾಂ ಒಂದೊಂದು ವಿಕೆಟ್‌ ಪಡೆದುಕೊಂಡರು.

Story first published: Tuesday, May 7, 2024, 23:40 [IST]
Other articles published on May 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+