For Quick Alerts
ALLOW NOTIFICATIONS  
For Daily Alerts
 

ದಾಖಲೆ: ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಡೆಲ್ಲಿ

Delhi has taken 13 seasons to reach their maiden IPL final

ನವೆಂಬರ್ 9ರಂದು ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸನ ರೈಸರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಅರ್ಹ ಜಯ ದಾಖಲಿಸಿ ಇದೇ ಮೊದಲ ಬಾರಿಗೆ ಅಂತಿಮ ಹಣಾಹಣಿಗೆ ಅರ್ಹತೆ ಪಡೆದಿದೆ. ಐಪಿಎಲ್ ಫೈನಲ್ಸ್ ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಸಂಘಟಿತ ಹೋರಾಟದ ಮೂಲಕ ಈಗಾಗಲೇ ಫೈನಲ್ ಪ್ರವೇಶಿಸಿದೆ. ಡೆಲ್ಲಿ ತಂಡವು 13 ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.

ಕ್ವಾಲಿಫೈಯರ್ 2 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೇಯಸ್ ಪಡೆ 20 ಓವರ್ ಗಳಲ್ಲಿ 189/3 ಸ್ಕೋರ್ ಮಾಡಿತ್ತು. ಹೈದರಾಬಾದ್ ಆರಂಭಿಕ ಆಘಾತ ಕಂಡರೂ ಚೇತರಿಸಿಕೊಂಡಿತು. ಕೊನೆಗೆ 20 ಓವರ್ ಗಳಲ್ಲಿ 172/8 ಸ್ಕೋರ್ ಮಾಡಿ 17 ರನ್ ಗಳಿಂದ ಪಂದ್ಯ , ಫೈನಲ್ ಟಿಕೆಟ್ ಕಳೆದುಕೊಂಡಿತು.

ಕಳೆದ ಎಲ್ಲಾ ಐಪಿಎಲ್ ಸೀಸನ್ ಗಳಲ್ಲಿ ಡೆಲ್ಲಿ ತಂಡದ ಸಾಧನೆ:
* 2008ರಲ್ಲಿ ಒಟ್ಟು 8 ತಂಡಗಳ ಪೈಕಿ 4ನೇ ಸ್ಥಾನ (ಸೆಮಿಫೈನಲಿಸ್ಟ್)

* 2009ರಲ್ಲಿ ಒಟ್ಟು 8 ತಂಡಗಳ ಪೈಕಿ 3ನೇ ಸ್ಥಾನ (ಸೆಮಿಫೈನಲಿಸ್ಟ್)

* 2010ರಲ್ಲಿ ಒಟ್ಟು 8 ತಂಡಗಳ ಪೈಕಿ 5ನೇ ಸ್ಥಾನ

* 2011ರಲ್ಲಿ ಒಟ್ಟು 10 ತಂಡಗಳ ಪೈಕಿ 10ನೇ ಸ್ಥಾನ

* 2012ರಲ್ಲಿಒಟ್ಟು 9 ತಂಡಗಳ ಪೈಕಿ 3ನೇ ಸ್ಥಾನ (ಪ್ಲೇ ಆಫ್)

* 2013ರಲ್ಲಿ ಒಟ್ಟು 9 ತಂಡಗಳ ಪೈಕಿ 9ನೇ ಸ್ಥಾನ

* 2014ರಲ್ಲಿ ಒಟ್ಟು 8 ತಂಡಗಳ ಪೈಕಿ 8ನೇ ಸ್ಥಾನ

* 2015ರಲ್ಲಿ ಒಟ್ಟು 8 ತಂಡಗಳ ಪೈಕಿ 7ನೇ ಸ್ಥಾನ

* 2016ರಲ್ಲಿ ಒಟ್ಟು 8 ತಂಡಗಳ ಪೈಕಿ 6ನೇ ಸ್ಥಾನ

* 2017ರಲ್ಲಿ ಒಟ್ಟು 8 ತಂಡಗಳ ಪೈಕಿ 6ನೇ ಸ್ಥಾನ

* 2018ರಲ್ಲಿ ಒಟ್ಟು 8 ತಂಡಗಳ ಪೈಕಿ 8ನೇ ಸ್ಥಾನ

* 2019ರಲ್ಲಿ ಒಟ್ಟು 8 ತಂಡಗಳ ಪೈಕಿ 3ನೇ ಸ್ಥಾನ(ಪ್ಲೇ ಆಫ್)

* 2020ರಲ್ಲಿ ಚೊಚ್ಚಲ ಐಪಿಎಲ್ ಫೈನಲ್ಸ್ ಪ್ರವೇಶ

****

ಯಾವ ತಂಡ ಎಷ್ಟು ಬಾರಿ ಫೈನಲ್ ಪ್ರವೇಶ
8: ಚೆನ್ನೈ ಸೂಪರ್ ಕಿಂಗ್ಸ್
6: ಮುಂಬೈ ಇಂಡಿಯನ್ಸ್
3: ರಾಯಲ್ ಚಾಲೆಂಜರ್ಸ್ ಬೆಂಗಳೂರು
2: ಕೋಲ್ಕತಾ ನೈಟ್ ರೈಡರ್ಸ್
2: ಸನ್ ರೈಸರ್ಸ್ ಹೈದರಾಬಾದ್
1: ಡೆಕ್ಕನ್ ಚಾರ್ಜರ್ಸ್
1: ಕಿಂಗ್ಸ್ ಎಲೆವನ್ ಪಂಜಾಬ್
1: ರಾಜಸ್ಥಾನ್ ರಾಯಲ್ಸ್
1: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್
1: ಡೆಲ್ಲಿ ಕ್ಯಾಪಿಟಲ್ಸ್

2010ರಿಂದ ಮುಂಬೈ ಇಂಡಿಯನ್ಸ್ ತಂಡ 6 ಬಾರಿ ಐಪಿಎಲ್ ಫೈನಲ್ಸ್ ತಲುಪಿದ್ದು, 4 ಬಾರಿ ಕಪ್ ಗೆದ್ದಿದ್ದು, ಒಂದು ಬಾರಿ ರನ್ನರ್ ಆಪ್ ಆಗಿದೆ. ಮುಂಬೈ ತಂಡ 2013, 2015, 2017 ಹಾಗೂ 2019ರಲ್ಲಿ ಕಪ್ ಗೆದ್ದಿದೆ. ಒಟ್ಟಾರೆ, 199 ಪಂದ್ಯಗಳಿಂದ 114 ಗೆಲುವು, 80 ಸೋಲು ಶೇ 58.79 ಸರಾಸರಿ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ 5ನೇ ಬಾರಿಗೆ ಚಾಂಪಿಯನ್ಸ್ ಆಗಲು ಇನ್ನೊಂದು ಪಂದ್ಯ ಗೆದ್ದರೆ ಸಾಕು.

ಇನ್ನೊಂದೆಡೆ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಡೆಲ್ಲಿ ತಂಡವು 192 ಪಂದ್ಯಗಳಿಂದ 85 ಗೆಲುವು, 104 ಸೋಲು ಶೇ 44.40ಸರಾಸರಿ ಹೊಂದಿದ್ದು, ಮೊದಲ ಬಾರಿಗೆ ಚಾಂಪಿಯನ್ಸ್ ಆಗಲು ಇನ್ನೊಂದು ಪಂದ್ಯ ಗೆದ್ದರೆ ಸಾಕು.

Story first published: Monday, November 9, 2020, 8:12 [IST]
Other articles published on Nov 9, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+