ವಿನೇಶ್ ಫೋಗಟ್‌ಗೆ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ದೆಹಲಿ ಹೈಕೋರ್ಟ್ ಅನುಮತಿ
ದೆಹಲಿ ಹೈಕೋರ್ಟ್ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬಿಗ್ ರಿಲೀಫ್ ನೀಡಿದೆ. ಅಲ್ಲದೆ ಭಾರತೀಯ ಕುಸ್ತಿ ಸಂಘ (ಡಬ್ಲ್ಯೂಎಫ್‌ಐ)ಗೆ ಛೀಮಾರಿ ಹಾಕಿದೆ. ಈ ಮೂಲಕ ವಿನೇಶ್ ಅವರು ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಮೇಲ್ವಿಚಾರಕರ ಸಮ್ಮುಖದಲ್ಲಿ ಟ್ರಯಲ್ಸ್ ಅನ್ನು ವೀಡಿಯೊಗ್ರಾಫ್ ಮಾಡಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಕ್ರೀಡೆ ಮತ್ತು ನ್ಯಾಯದ ದೃಷ್ಟಿಯಿಂದ ಕುಸ್ತಿ ಪಟು ವಿನೇಶ್ ಫೋಗಟ್ ಅವರಿಗೆ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸುವುದು ಮುಖ್ಯ ಎಂದು ಕೋರ್ಟ್ ಹೇಳಿದೆ. ಡಬ್ಲ್ಯೂಎಫ್‌ಐನ ಆಯ್ಕೆ ನೀತಿಯು ತಾರತಮ್ಯದಿಂದ ಕೂಡಿದೆ ಎಂದು ನ್ಯಾಯಾಲಯ ಹೇಳಿದೆ.

ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ ಅನ್ನು ಡಬ್ಲ್ಯೂಎಫ್‌ಐ ವೀಡಿಯೊಗ್ರಾಫ್ ಮಾಡಲಿದ್ದು, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಇಬ್ಬರೂ ಪ್ರತಿನಿಧಿಗಳ ಸಮ್ಮುಖದಲ್ಲಿ ವಿಡಿಯೋ ರೆಕಾರ್ಡ್ ನಡೆಯಲಿದೆ.
ವಿನೇಶ್‌ಗೆ ನೀಡಲಾದ ಶೋಕಾಸ್ ನೋಟಿಸ್‌ಗೆ ಕಾರಣಗಳು ಪೂರ್ವನಿರ್ಧರಿತವೆಂದು ಕಾಣುತ್ತದೆ. ಕ್ರೀಡೆ ಮತ್ತು ನ್ಯಾಯದ ಹಿತದೃಷ್ಟಿಯಿಂದ, ವಿನೇಶ್‌ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವುದು ಅವಶ್ಯಕ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೇಳಿದ್ದು ಇಷ್ಟು..
ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಮೌಖಿಕ ಟಿಪ್ಪಣೆಯನ್ನು ಮಾಡಿದ್ದು, ದೇಶದಲ್ಲಿ ತಾಯಂದರಿಗೆ ಗೌರವ ನೀಡಲಾಗುತ್ತದೆ. ಇದರಿಂದ ಯಾವುದೇ ಆಟಗಾರ್ತಿಯ ವೃತ್ತಿಗೆ ಹಾನಿ ಉಂಟುಮಾಡಲು ಬಿಡಬಾರದು ಎಂದು ಕೋರ್ಟ್ ಹೇಳಿದೆ. ವಿನೇಶ್ ಫೋಗಟ್ ಜುಲೈ 2025 ರಲ್ಲಿ ಮಗುವಿಗೆ ಜನ್ಮನೀಡಿದರು. ಹೀಗಾಗಿ ಇವರು ಕೆಲ ಕಾಲ ಕುಸ್ತಿ ಅಖಾಡದಿಂದ ದೂರ ಉಳಿದಿದ್ದರು. ಈಗ ದೇಶೀಯ ಸ್ಪರ್ಧೆಗಳಿಗೆ ಮರಳಲು ತಯಾರಿ ನಡೆಸುತ್ತಿದ್ದಾರೆ. ತಾಯಿಯಾದ ಕೇವಲ 10 ತಿಂಗಳ ನಂತರ ಕ್ರೀಡಾಪಟುವನ್ನು ಟ್ರಯಲ್ಸ್‌ನಿಂದ ಹೊರಗಿಡುವ ಮಂಡಳಿಯ ನಿಲುವನ್ನು ನ್ಯಾಯಾಲಯ ಪ್ರಶ್ನಿಸಿದೆ.
ಏನಿದು ಪ್ರಕರಣ
- > ಭಾರತೀಯ ಕುಸ್ತಿ ಸಂಘ ವಿನೇಶ್ ಫೋಗಟ್ ಅವರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿತು.
- > ವಿನೇಶ್ ಮೇಲೆ ಸಂಘ ಅಶಿಸ್ತು ಮತ್ತು ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಿತ್ತು.
- > ವಿನೇಶ್ ಫೋಗಟ್ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದರು. ಆಗ ಅವರು ವಾಪಸಾತಿಗೆ 6 ತಿಂಗಳ ನೋಟಿಸ್ ನೀಡಲಿರಲಿಲ್ಲ ಎಂದು ಸಂಘ ತಿಳಿತ್ತು.
- > ಹೀಗಾಗಿ ಸಂಘ ಜೂನ್ 2026 ರವರೆಗೆ ವಿನೇಶ್ ಅವರನ್ನು ದೇಶೀಯ ಸ್ಪರ್ಧೆಗಳಿಂದ ನಿಷೇಧಿಸಿತು.
- > ವಿನೇಶ್ ಈ ನಿರ್ಧಾರವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು.
- > ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಹೈಕೋರ್ಟ್ ಈಗ ಅವರಿಗೆ ಅವಕಾಶ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications