IPL 2024: ಹ್ಯಾರಿ ಬ್ರೂಕ್ ಬದಲಿಗೆ ಆಸೀಸ್ ಯುವ ಆಟಗಾರನಿಗೆ ಡೆಲ್ಲಿ ಮಣೆ ಸಾಧ್ಯತೆ
ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಈ ಕನಸಿಗೆ ಸ್ಟಾರ್ ಆಟಗಾರರ ಆಗಮನ ಪುಷ್ಠಿ ನೀಡಿದೆ. ಕಳೆದ ಒಂದು ವರ್ಷದಿಂದ ಅಂಗಳದಿಂದ ಹೊರಗೆ ಉಳಿದಿದ್ದ ಸ್ಟಾರ್ ಬ್ಯಾಟರ್ ರಿಷಭ್ ಪಂತ್ ತಂಡಕ್ಕೆ ಎಂಟ್ರಿ ನೀಡಿದ್ದು, ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದಂತೆ ಆಗಿದೆ. ಆದರೆ ಹರಾಜಿನಲ್ಲಿ 4 ಕೋಟಿ ರೂ. ನೀಡಿ ಖರೀದಿಸಿದ್ದ ಹ್ಯಾರಿ ಬ್ರೂಕ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಈಗ ದೆಹಲಿ ಆದಷ್ಟು ಬೇಗ ಆಂಗ್ಲ ಬ್ಯಾಟ್ಸ್‌ಮನ್‌ಗೆ ಬದಲಿ ಆಟಗಾರನನ್ನು ಹುಡುಕಬೇಕಾಗಿದೆ. ಮಾಧ್ಯಮ ವರದಿಗಳನ್ನು ನಂಬುವುದಾದರೆ, ಹ್ಯಾರಿ ಬ್ರೂಕ್ ಬದಲಿಗೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರನ್ನು ಸೇರಿಸಿಕೊಳ್ಳಲು ದೆಹಲಿ ಫ್ರಾಂಚೈಸಿ ಚಿಂತನೆ ನಡೆಸಿದೆ. ಆದಾಗ್ಯೂ, ದೀರ್ಘಕಾಲದಿಂದ ಗಾಯಗೊಂಡಿರುವ ದೆಹಲಿಯ ಆಸ್ಟ್ರೇಲಿಯನ್ ವೇಗಿ ಜೇ ರಿಚರ್ಡ್ಸನ್ ಅವರ ಸ್ಥಾನವನ್ನು ಫ್ರೇಸರ್-ಮೆಕ್‌ಗುರ್ಕ್ ಕೂಡ ರಿಪ್ಲೇಸ್ ಮಾಡಬಹುದು.

ಬ್ರೂಕ್ ರಿಪ್ಲೇಸ್ ಮಾಡುವುದು ಯಾರು?
21 ವರ್ಷದ ಆಟಗಾರ ಫ್ರೇಸರ್-ಮೆಕ್‌ಗುರ್ಕ್ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಅವರು ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಸ್ಥಿರ ಪ್ರದರ್ಶನ ನೀಡಿದ್ದಾರೆ. ಫ್ರೇಸರ್-ಮೆಕ್‌ಗುರ್ಕ್ ಅವರು ಅಗ್ರ ಕ್ರಮಾಂಕದಲ್ಲಿ ಬಿರುಗಾಳಿಯ ಬ್ಯಾಟಿಂಗ್‌ಗೆ ಹೆಸರುವಾಸಿ. ಅಕ್ಟೋಬರ್ 2023 ರಲ್ಲಿ, ದಕ್ಷಿಣ ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿದ ಇವರು ಕ್ರಿಸ್ ಗೇಲ್ ಅವರ ದಾಖಲೆಯನ್ನು ಅಳಿಸಿದ್ದರು.
ಅವರು ಐಪಿಎಲ್ 2013 ರಲ್ಲಿ ಪುಣೆ ಸೂಪರ್ ಜೈಂಟ್ಸ್ ವಿರುದ್ಧ RCB ಪರ ಆಡಿದ್ದ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಲೀಸ್ಟ್ ಎನಲ್ಲಿ ಇದು ವೇಗದ ಶತಕವಾಗಿದೆ. ಇನ್ನು ಫ್ರೇಸರ್-ಮೆಕ್‌ಗುರ್ಕ್ ಅವರು ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ 29 ಎಸೆತಗಳಲ್ಲಿ ಶತಕ ಬಾರಿಸಿ ಗಮನ ಸೆಳೆದರು.

ಫ್ರೇಸರ್-ಮೆಕ್‌ಗುರ್ಕ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಇಂಟರ್ನ್ಯಾಷನಲ್ ಟಿ 20 ಲೀಗ್‌ನಲ್ಲಿ ದುಬೈ ಕ್ಯಾಪಿಟಲ್ಸ್‌ಗಾಗಿ ಆಡಿದ್ದಾರೆ. 37 ಟಿ20 ಪಂದ್ಯಗಳಲ್ಲಿ ಮೂರು ಅರ್ಧಶತಕ ಸೇರಿದಂತೆ 645 ರನ್ ಗಳಿಸಿದ್ದಾರೆ.
ಹ್ಯಾರಿ ಬ್ರೂಕ್‌ಗೆ ಏನಾಯಿತು?
ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ 2024ರ ಹರಾಜಿನಲ್ಲಿ ಡೆಲ್ಲಿ ತಂಡ ಹ್ಯಾರಿ ಬ್ರೂಕ್ ಅವರನ್ನು 4 ಕೋಟಿ ರೂ.ಗೆ ಖರೀದಿಸಿತ್ತು. ಕಳೆದ ವರ್ಷ ತನ್ನ ಚೊಚ್ಚಲ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಹ್ಯಾರೀಸ್ ಬ್ರೂಕ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಫ್ರಾಂಚೈಸಿ ಅವರನ್ನು ಹರಾಜಿಗೆ ಮೊದಲು ಬಿಡುಗಡೆ ಮಾಡಿತು. ಬ್ರೂಕ್ ಹೈದರಾಬಾದ್ ಪರ 11 ಪಂದ್ಯಗಳಲ್ಲಿ 190 ರನ್ ಗಳಿಸಿದ್ದರು, ಇದರಲ್ಲಿ ಅಜೇಯ ಶತಕವೂ ಸೇರಿತ್ತು.
ಒಂದು ವೇಳೆ ಈ ಸುದ್ದಿ ನಿಜ ಆಗಿದ್ದು ಆದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಬಲ ತುಂಬಂತೆ ಆಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications