ಕೋವಿಡ್-19 ಸೆಂಟರ್ ಆಗಿ ಬದಲಾದ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ

ನವದೆಹಲಿ, ಮೇ 20: ಈಗ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಹೆಸರು ಬದಲಾಯಿಸಲಾಗಿರುವ ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂ ಕೋವಿಡ್-19 ಸೆಂಟರ್ ಆಗಿ ಬದಲಾಗಿದೆ. ಕ್ರೀಡಾಂಗಣದ ಆವರಣವನ್ನು ಕಳೆದ ಮೂರು ದಿನಗಳಿಂದ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಿಂದ ವಲಸೆ ಕಾರ್ಮಿಕರ ಪರೀಕ್ಷೆಗೆ ಬಳಸಲಾಗುತ್ತಿದೆ.
ವಲಸೆ ಕಾರ್ಮಿಕರನ್ನು ಬಸ್ಸು ಮತ್ತು ರೈಲುಗಳ ಮೂಲಕ ಅವರವರ ಮನೆಗಳಿಗೆ ತಲುಪಿಸುವ ಮುನ್ನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅವರನ್ನು ಪರೀಕ್ಷಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದಲೂ ಸ್ಟೇಡಿಯಂ, ಕೊರೊನಾವೈರಸ್ ಕೇಂದ್ರವಾಗಿ ಬದಲಾಗಿದೆ.
1959ರಿಂದ 1973ರ ವರೆಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ, ದೆಹಲಿಯ ನಿವೃತ್ತ ಆಟಗಾರ ಕರ್ನಲ್ ವಿಜಯ್ ಭೂಷಣ್, 'ಈ ಮೊದಲು ಯಾವುದೇ ವಲಸಿಗರನ್ನು ವಸತಿ ಮಾಡಲು ಕ್ರೀಡಾಂಗಣವನ್ನು ಬಳಸಲಾಗಲಿಲ್ಲ. ಅವರು ಇದನ್ನು ಕೇಳುತ್ತಿರುವುದು ಇದೇ ಮೊದಲು,' ಎಂದಿದ್ದಾರೆ.
ಮಂಗಳವಾರ (ಮೇ 19) ವಲಸೆ ಕಾರ್ಮಿಕರ ಕೊನೆಯ ಬ್ಯಾಚ್ ರವಾನೆಯಾದ ಬಳಿಕ ಸುಮಾರು 2000-2500 ಮಂದಿ ತಂಗಿದ್ದ ನೆಲವನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಲಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications