Ranji Trophy: ಮೊದಲ ಓವರ್ನಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶೇಷ ದಾಖಲೆ ನಿರ್ಮಿಸಿದ ಜಯದೇವ್ ಉನದ್ಕತ್

ರಣಜಿ ಟ್ರೋಫಿಯ ಪಂದ್ಯದಲ್ಲಿ ಜಯದೇವ್ ಉನದ್ಕತ್ ಮೊದಲನೇ ಓವರ್ನಲ್ಲೇ ಹ್ಯಾಟ್ರಿಕ್ ಪಡೆದು ವಿಶೇಷ ದಾಖಲೆ ನಿರ್ಮಿಸಿದ್ದಾರೆ. ದೆಹಲಿ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ನಾಯಕ ಉನದ್ಕತ್ ಅತ್ಯುತ್ತಮ ಬೌಲಿಂಗ್ ಮಾಡಿದರು.
12 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಜಯದೇವ್ ಉನದ್ಕತ್ ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನಂತರ ಮತ್ತೆ ದೇಶೀಯ ಕ್ರಿಕೆಟ್‌ಗೆ ಹಿಂದಿರುಗಿರುವ ಉನದ್ಕತ್, ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಜಯದೇವ್ ಉನದ್ಕತ್ ಬೌಲಿಂಗ್ ದಾಳಿಗೆ ದೆಹಲಿ ಅಕ್ಷರಶಃ ನಲುಗಿದೆ. ದೆಹಲಿ ತಂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 133 ರನ್‌ಗಳಿಗೆ ಆಲೌಟ್ ಆಗಿದೆ. ಜಯದೇವ್ ಉನದ್ಕತ್ ಹ್ಯಾಟ್ರಿಕ್ ಸೇರಿ 8 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಚಿರಾಗ್ ಜಾನಿ ಮತ್ತು ಪ್ರೇರಕ್ ಮಂಕಡ್ ತಲಾ 1 ವಿಕೆಟ್ ಪಡೆದಿದ್ದಾರೆ.
ಟಾಸ್ ಗೆದ್ದ ಡೆಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಯಶ ಧುಲ್ ತೆಗೆದುಕೊಂಡ ತೀರ್ಮಾನ ತಪ್ಪು ಎಂದು ಮೊದಲ ಓವರ್ ನಲ್ಲೇ ಅರ್ಥವಾಯಿತು. 10 ರನ್ ಗಳಿಸುವಷ್ಟರಲ್ಲಿ ಡೆಲ್ಲಿ 10 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿತು. ಡೆಲ್ಲಿ ತಂಡದ ಅಗ್ರ ನಾಲ್ಕು ಆಟಗಾರರು ಸೇರಿ 6 ಆಟಗಾರರು ಶೂನ್ಯಕ್ಕೆ ಔಟಾದರು.

ದೆಹಲಿ ತಂಡಕ್ಕೆ ಹೃತಿಕ್ ಶೊಕೀನ್ ಆಸರೆ
10 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭಯ ಹೊಂದಿದ್ದ ದೆಹಲಿ ತಂಡಕ್ಕೆ ಹೃತಿಕ್ ಶೊಕೀನ್ ಆಸರೆಯಾದರು. ಇವರು ಪ್ರಾಂಶು ವಿಜಯನ್ ಜೊತೆ 43 ರನ್‌ಗಳ ಜೊತೆಯಾಟ ಆಡಿದರು. ಪ್ರಾಂಶು ವಿಜಯನ್ 15 ರನ್ ಗಳಿಸಿ ಔಟಾದರು.
ನಂತರ ಶಿವಾಂಕ್ ವಸಿಷ್ಠ ಹೃತಿಕ್ ಶೊಕೀನ್‌ಗೆ ಉತ್ತಮ ಸಾಥ್ ನೀಡಿದರು. 9ನೇ ವಿಕೆಟ್‌ಗೆ ಈ ಜೋಡಿ 80 ರನ್‌ಗಳ ಜೊತೆಯಾಟ ಆಡಿದರು. ಶಿವಾಂಕ್ ವಸಿಷ್ಠ 38 ರನ್ ಗಳಿಸಿದರೆ, ಹೃತಿಕ್ ಶೊಕೀನ್ ಅಜೇಯ 68 ರನ್ ಗಳಿಸಿದರು.
8 ವಿಕೆಟ್ ಪಡೆದ ಜಯದೇವ್ ಉನದ್ಕತ್
ದೇಶೀಯ ಟೂರ್ನಿಯಲ್ಲಿ ಜಯದೇವ್ ಉನದ್ಕತ್ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರೆಸಿದರು. 12 ಓವರ್ ಗಳಲ್ಲಿ 39 ರನ್ ನೀಡಿ 8 ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications