ರೋಹಿತ್ ಬದಲಿಗೆ ಹರ್ಭಜನ್ ಸಿಂಗ್ ಗೆ ನಾಯಕತ್ವ
ನವದೆಹಲಿ, ಮಾರ್ಚ್ 24: ಪ್ರೊಫೆಸರ್ ಡಿಬಿ ದೇವಧರ್ ಟ್ರೋಫಿ 2017ಕ್ಕಾಗಿ ಭಾರತ 'ಬ್ಲೂ' ತಂಡದಲ್ಲಿ ಭಾರಿ ಬದಲಾವಣೆಯಾಗಿದೆ. ಗಾಯಾಳುವಾಗಿರುವ ನಾಯಕ ರೋಹಿತ್ ಶರ್ಮ ಅವರು ಇನ್ನೂ ಗುಣಮುಖರಾಗದ ಕಾರಣ, ಅವರ ಸ್ಥಾನವನ್ನು ಹರ್ಭಜನ್ ಸಿಂಗ್ ತುಂಬುತ್ತಿದ್ದಾರೆ.
ಇತ್ತೀಚೆಗೆ ಇಂಡಿಯಾ 'ಬ್ಲೂ; ಹಾಗೂ ಭಾರತ 'ರೆಡ್' ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆದಾರರು ಪ್ರಕಟಿಸಿಸಿತ್ತು.. ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಗೆದ್ದ ತಮಿಳುನಾಡಿನ ವಿರುದ್ಧ ಈ ಎರಡು ತಂಡಗಳು ಸೆಣಸಲಿವೆ. ವೈಜಾಗ್ ನಲ್ಲಿ ಮಾರ್ಚ್ 25 ರಿಂದ 29ರ ತನಕ ಪಂದ್ಯಾವಳಿ ನಡೆಯಲಿದೆ.
ಹಿರಿಯ ಆಟಗಾರರಾದ ಇಂಡಿಯಾ 'ರೆಡ್' ತಂಡಕ್ಕೆ ಪಾರ್ಥೀವ್ ಪಟೇಲ್ ಕ್ಯಾಪ್ಟನ್ ಆಗಿದ್ದರೆ, ಇಂಡಿಯಾ ಬ್ಲೂ ಗೆ ಹರ್ಭಜನ್ ಸಿಂಗ್ ನಾಯಕರಾಗಿದ್ದಾರೆ. ಬ್ಲೂ ತಂಡದ ಪ್ರಮುಖ ಆಟಗಾರಾದ ರೋಹಿತ್ ಶರ್ಮ (ಕಾಲು ನೋವು) ಹಾಗೂ ರೆಡ್ ತಂಡದಿಂದ ಕೇದಾರ್ ಜಾಧವ್ (ಹೊಟ್ಟೆ ನೋವು) ತಂಡದಿಂದ ಹೊರ ನಡೆದಿದ್ದು, ಬದಲಿ ಆಟಗಾರರನ್ನು ಸೂಚಿಸಲಾಗಿದೆ.

ಮಾರ್ಚ್ 21ರಂದು ನಡೆದ ವಿಜಯ್ ಹಜಾರೆ ಟ್ರೋಫಿ ಅಂತಿಮ ಹಣಾಹಣಿಯಲ್ಲಿ ಬೆಂಗಾಲ ತಂಡ ವಿರುದ್ಧ ತಮಿಳುನಾಡು ತಂಡ 37ರನ್ ಗಳ ಭರ್ಜರಿ ಜಯ ದಾಖಲಿಸಿತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರು ಭರ್ಜರಿ ಶತಕ ಸಿಡಿಸಿ, ತಂಡಕ್ಕೆ ಗೆಲುವು ತಂದುಕೊಟ್ಟರು.
ರೋಹಿತ್ ಶರ್ಮ ಬದಲಿಗೆ ಮಹಾರಾಷ್ತ್ರದ ರುತುರಾಜ್ ಗಾಯ್ಕಡ್ ಅವರು ಬ್ಲೂ ತಂಡ ಸೇರಲಿದ್ದಾರೆ. ಜಾಧವ್ ಬದಲಿಗೆ ಹೈದರಾಬಾದಿನ ಚಾಮ ಮಿಲಿಂದ್ ಅವರು ಇಂಡಿಯಾ ರೆಡ್ ತಂಡ ಸೇರಲಿದ್ದಾರೆ. ರೆಡ್ ತಂಡಕ್ಕೆ ಬೆಂಗಾಲಿನ ಶ್ರೀವತ್ಸ್ ಗೋಸ್ವಾಮಿ ಅವರನ್ನು ಕೂಡಾ ಸೇರಿಸಿಕೊಳ್ಳಲಾಗಿದೆ.
ಇಂಡಿಯಾ 'ಬ್ಲೂ' : ರೋಹಿತ್ ಶರ್ಮ (ನಾಯಕ), ಮನ್ದೀಪ್ ಸಿಂಗ್, ಶ್ರೇಯಸ್ ಐಯರ್, ಅಂಬಟಿ ರಾಯುಡು, ಮನೋಜ್ ತಿವಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹರ್ಭಜನ್ ಸಿಂಗ್, ಕೃನಾಲ್ ಪಾಂಡ್ಯ, ಶಬಾಜ್ ನದೀಂ, ಸಿದ್ದಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಪಂಕಜ್ ರಾವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications