For Quick Alerts
ALLOW NOTIFICATIONS  
For Daily Alerts
 

ಭಾರತಕ್ಕೆ WTC ಫೈನಲ್ ಗೆಲ್ಲುವ ಅವಕಾಶವಿತ್ತು: ಕೇನ್ ವಿಲಿಯಮ್ಸನ್

Despite losing Kohli and Pujara, India had a good chance of winning the WTC Final: Kane Williamson
ಕೇನ್ ವಿಲಿಯಂ ಸನ್ ಅವರು ಭಾರತದ ಬಗ್ಗೆ ಫೈನಲ್ ನಂತರ ಹೇಳಿದ್ದೇನು | Oneindia Kannada

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಾಣುವ ಮೂಲಕ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನ್ಯೂಜಿಲೆಂಡ್ ತಂಡ ಎಲ್ಲಾ ವಿಭಾಗದಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಮಧ್ಯೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿ ದಿನವೂ ಸಾಕಷ್ಟು ಏರಿಳಿತಗಳು ಸಂಭವಿಸುತ್ತಿತ್ತು. ಹೀಗೆಯೇ ನಡೆಯುತ್ತದೆ ಎಂಬುದನ್ನು ನಿರೀಕ್ಷಿಸುವುದು ಕಠಿಣವಾಗಿತ್ತು. ಹಾಗಾಗಿ ಅವಕಾಶಗಳಿಗಾಗಿ ನಾವು ಕಾಯುತ್ತಿದ್ದೆವು. ನಾವು ಆರಂಭಿಕ ವಿಕೆಟ್‌ಗಳನ್ನು ಆದಷ್ಟು ಬೇಗನೆ ಪಡೆಯಲು ಪ್ರಯತ್ನಿಸಿದ್ದೆವು. ಆ ಮೂಲಕ ಹೆಚ್ಚಿನ ಅವಕಾಶಗಳು ಪಡೆಯಲು ಸಾಧ್ಯವಾಗುತ್ತಿತ್ತು" ಎಂದಿದ್ದಾರೆ.

"ಅಂತಿಮ ದಿನದಾಟದಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಶೀಘ್ರವಾಗಿ ಪಡೆಯಲು ನಮ್ಮಿಂದ ಸಾಧ್ಯವಾಯಿತು. ಇಲ್ಲವಾದಲ್ಲಿ ಭಾರತಕ್ಕೆ ಪಂದ್ಯವನ್ನು ಗೆಲ್ಲಲು ಸಮಾನ ಅವಕಾಶವಿತ್ತು. ಪಿಚ್‌ನ ಮೇಲ್ಮೈ ಭಾರತಕ್ಕೂ ಕೂಡ ಉತ್ತಮ ಅವಕಾಶ ನೀಡುವ ಸಾಧ್ಯತೆಯಿತ್ತು. ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದ ಕಾರಣ ಮುಂದೆ ನಮಗೂ ಇದು ಕಠಿಣವಾಗಿರುತ್ತಿತ್ತು" ಎಂದು ಕೇನ್ ವಿಲಿಯಮ್ಸನ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಭಾರತ ತಂಡಕ್ಕಿಂತ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗಾಗಿ ಉತ್ತಮ ಸಿದ್ಧತೆಯನ್ನು ಮಾಡಿಕೊಂಡಿತ್ತು ಎಂದು ಭಾವಿಸುವುದಿಲ್ಲ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿಯಿಂದ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಹೆಚ್ಚಿನ ಅನುಕೂಲಗಳು ಆಗಿವೆ ಎಂದು ಭಾವಿಸುವುದಿಲ್ಲ ಎಂದಿದ್ದಾರೆ. ಭಾರತ ಒಂದು ಕಠಿಣ ಸ್ಪರ್ಧೆಯನ್ನು ನೀಡುವ ತಂಡವಾಗಿದ್ದು ಫೈನಲ್ ಪಮದ್ಯವನ್ನು ಗೆಲ್ಲಲು ಕಿವೀಸ್ ತಂಡಕ್ಕೆ ಸಾಕಷ್ಟು ಕಠಿಣ ಸವಾಲೊಡ್ಡಿತ್ತು ಎಂದಿದ್ದಾರೆ.

"ಉತ್ತಮ ಸಿದ್ಧತೆ ಎಂದರೆ ಏನು ಎಂಬುದು ತಿಳಿದುಕೊಳ್ಳುವುದು ತುಂಬಾ ಕಷ್ಟ. ಭಾರತ ತಂಡ ನಾವು ಭಾವಿಸಿದಂತೆಯೇ ಅತ್ಯಂತ ಬಲಿಷ್ಠ ತಂಡ ಹಾಗೂ ವಿಶ್ವ ದರ್ಜೆಯ ತಂಡವಾಗಿದೆ. WTC ಫೈನಲ್‌ಗೂ ಮುನ್ನ ಇಂಗ್ಲೆಂಡ್‌ಗೆ ಪ್ರವಾಸ ನಿಗದಿಯಾಗಿದ್ದಿದ್ದು ನಿಜಕ್ಕೂ ಕಾಕತಾಳೀಯವಾಗಿತ್ತು" ಎಂದು ಕೇನ್ ವಿಲಿಯಮ್ಸನ್ ಅಭಿಪ್ರಾಯಪಟ್ಟಿದ್ದಾರೆ.

Story first published: Monday, June 28, 2021, 21:28 [IST]
Other articles published on Jun 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+