BCCI ಹಂಗಾಮಿ ಕಾರ್ಯದರ್ಶಿಯ ನೇಮಕ
ಇದೇ ಡಿಸೆಂಬರ್ ಒಂದರಂದು ಭಾರತದ ಜಯ್ ಶಾ ಅವರು ಐಸಿಸಿ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಂಡರು. ಇದೇ ವೇಳೆ ಅವರು ಈ ಹಿಂದೆ ಇದ್ದ ಎಲ್ಲ ಸ್ಥಾನಗಳನ್ನು ತ್ಯಜಿಸಬೇಕಾಗಿತ್ತು. ಈ ಹಿನ್ನೆಲೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಶ್ರೀಲಂಕಾದ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ನೇಮಕಗೊಂಡಿದ್ದಾರೆ. ಜಯ್ ಶಾ ಈ ಮೊದಲು ಎಸಿಸಿ ಅಧ್ಯಕ್ಷರಾಗಿದ್ದರು. ಇನ್ನು ಇವರು ಬಿಸಿಸಿಐ ಕಾರ್ಯದರ್ಶಿ ಸ್ಥಾನವನ್ನು ಸಹ ಅಲಂಕರಿಸಿದ್ದರು. ಈಗ ಈ ಸ್ಥಾನವನ್ನು ತುಂಬವ ಕೆಲಸವನ್ನು ಮಾಡಲಾಗಿದೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ದೇವ್‌ಜಿತ್ ಸೈಕಿಯಾ ಅವರನ್ನು ಬಿಸಿಸಿಐ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಕಾರ್ಯದರ್ಶಿ ಹುದ್ದೆಗೆ ಶಾಶ್ವತವಾಗಿ ನೇಮಕ ಆಗುವವರೆಗೆ, ಸೈಕಿಯಾ ಹಂಗಾಮಿ ಕಾರ್ಯದರ್ಶಿ ಹುದ್ದೆಯ ಅಲಂಕರಿಸುತ್ತಾರೆ. ಜಯ್ ಶಾ 2019 ರಿಂದ ಬಿಸಿಸಿಐನ ಕಾರ್ಯದರ್ಶಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಈಗ ಈ ಸ್ಥಾನದ ಮೇಲೆ ಹಂಗಾಮಿ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿದೆ.

ತಮ್ಮ ಅಧಿಕಾರ ಬಳಸಿದ ಬಿನ್ನಿ
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಮ್ಮ ಸಂವಿಧಾನಿಕ ಅಧಿಕಾರವನ್ನು ಉಪಯೋಗಿಸಿಕೊಂಡು ಈ ಹುದ್ದೆಯ ಮೇಲೆ ಹಂಗಾಮಿ ಕಾರ್ಯದರ್ಶಿಯನ್ನು ನೇಮಕ ಮಾಡಿದ್ದಾರೆ.
ಪ್ರಸಕ್ತ ಸನ್ನಿವೇಶ ಹಾಗೂ ಬಿಸಿಸಿಐನಲ್ಲಿರುವ ರೂಲ್ಸ್‌ಗಳ ಅಡಿಯಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಖಾಯಂ ನೇಮಕಾರಿ ಆಗುವವರೆಗೆ, ಆ ಸ್ಥಾನ ಖಾಲಿ ಬಿಡಲು ಆಗುವುದಿಲ್ಲ. ಹೀಗಾಗಿ ಈ ಹುದ್ದೆಯ ಹೊಣೆಯನ್ನು ನಿಮಗೆ ಹಸ್ತಾಂತರಿಸುತ್ತಿದ್ದೇನೆ. ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸ ನನಗಿದೆ ಎಂದು ರೋಜರ್ ಬಿನ್ನ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹುದ್ದೆಯಲ್ಲಿ ಸೈಕಿಯಾ ಮುಂದಿನ ವರ್ಷದ ಸೆಪ್ಟೆಂಬರ್ ಇರಲಿದ್ದಾರೆ. ಜಯ್ ಶಾರಿಂದ ತೆರವಾದ ಕಾರ್ಯದರ್ಶಿ ಸ್ಥಾನವನ್ನು 45 ದಿನಗಳಲ್ಲಿ ತುಂಬ ಬೇಕಾಗಿದ್ದರಿಂದ, ದೇವಜಿತ್ ಸೈಕಿಯಾರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಹೊಸ ಕಾರ್ಯದರ್ಶಿ ಯಾರು?
ಕ್ರಿಕೆಟ್ ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ದೇವ್‌ಜಿತ್ ಸೈಕಿಯಾ ಅವರು ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಅನುಭವ ಹೊಂದಿದ್ದಾರೆ. ಇವರು ಅಸ್ಸಾಂ ಪರ ರಣಜಿ ಟ್ರೋಫಿಯನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು ಅಸ್ಸಾಂ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ರೂಪದಲ್ಲಿ ಮಿಂಚಿದ್ದಾರೆ. ಇವರು 2022ರಿಂದ ಬಿಸಿಸಿಐ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದಲ್ಲದೆ ಇವರು ಗುವಾಹಟಿ ಸ್ಪೋರ್ಟ್ಸ್ ಅಸೋಸಿಯೇಷನ್ (GSA) ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದಾರೆ.
ಶಾ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷ
ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ . ಅವರು ಈ ಸ್ಥಾನವನ್ನು ಡಿಸೆಂಬರ್ 1 ರಂದು ವಹಿಸಿಕೊಂಡರು. ಈ ವರ್ಷದ ಆಗಸ್ಟ್‌ನಲ್ಲಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಈ ಸ್ಥಾನವನ್ನು ಅಲಂಕರಿಸಿದ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications