ಮುಂಬೈ ವಿರುದ್ಧದ ಪ್ರದರ್ಶನದ ಬಳಿಕ ಪಡಿಕ್ಕಲ್‌ಗೆ ಎಬಿಡಿಯಿಂದ ಬಂದಿತ್ತು ವಿಶೇಷ ಸಂದೇಶ

ಈ ಬಾರಿಯ ಐಪಿಎಲ್‌ನಲ್ಲಿ ಉದಯೊನ್ಮುಖ ಆಟಗಾರ ಎಂಬ ಪ್ರಶಸ್ತಿಗೆ ಅತ್ಯಂತ ಅರ್ಹವಾಗಿ ದೇವದತ್ ಪಡಿಕ್ಕಲ್ ಪಾತ್ರರಾದರು. ದೇಶೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನದ ಬಳಿಕ ಪಡಿಕ್ಕಲ್ ಐಪಿಎಲ್‌ತಂಡದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದರು. ಆ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ ಪಡಿಕ್ಕಲ್. ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್‌ರಂತಾ ಆಟಗಾರರನ್ನೇ ಹಿಂದಿಕ್ಕಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ಪಡಿಕ್ಕಲ್ ಮುಂಬೈ ಇಂಡಿಯನ್ಸ್ ವಿರುದ್ದ ಸ್ಪೋಟಕ ಆಟವನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. 45 ಎಸೆತಗಳಲ್ಲಿ ಪಡಿಕ್ಕಲ್ 74 ರ ನ್ ಬಾರಿಸಿ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಬಳಿಕ ಆರ್‌ಸಿಬಿಯ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಪಡಿಕ್ಕಲ್‌ಗೆ ಮೊಬೈಲ್ ಸಂದೇಶವೊಂದನ್ನು ಕಳುಹಿಸಿದ್ದರು ಎಂಬ ಸಂಗತಿಯನ್ನು ಪಡಿಕ್ಕಲ್ ಹಂಚಿಕೊಂಡಿದ್ದಾರೆ.
"ಆತನೋರ್ವ ವಿಶೇಷ ಆಟಗಾರ, ಆತನ ಬ್ಯಾಟಿಂಗ್ ನೋಡಿವುದು ಕಣ್ಣಿಗೆ ಸಂಭ್ರಮ. ಆವೃತ್ತಿಯ ಉದ್ದಕ್ಕೂ ನನಗೆ ಅವರು ಆಟದ ವಲಯದೊಳಗೆ ಇದ್ದು ನೀಡುತ್ತಿರುವ ಪ್ರದರ್ಶನವನ್ನು ಮುಂದಿವರಿಸಿಕೊಂಡು ಹೋಗು ಎನ್ನುತ್ತಲೇ ಇದ್ದರು" ಎಂದು ಪಡಿಕ್ಕಲ್ ಇಎಸ್‌ಪಿಎನ್ ಕ್ರಿಕ್‌ಇನ್ಫ್ಓಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ನನಗೆ ಚೆನ್ನಾಗಿ ನೆನಪಿದೆ. ನಾವು ಮುಂಬೈ ವಿರುದ್ಧದ ಪಂದ್ಯವನ್ನು ಮುಗಿಸಿ ಮರಳುತ್ತಿದ್ದೆವು ನಾನು ಆ ಪಂದ್ಯದಲ್ಲಿ 74 ರನ್‌ಗಳನ್ನು ಸಿಡಿಸಿದ್ದೆ. ಬಳಿಕ ಅವರು ನನಗೆ ಸಂದೇಶವೊಂದನ್ನು ಕಳುಹಿಸಿದರು. ಇದನ್ನು ನೀನು ಮುಂದುವರಿಸು , ನೀನು ಅದ್ಭುತವಾಗಿ ಆಡುತ್ತಿದ್ದೀಯ. ವಲಯದೊಳಗೇ ಇದ್ದು ನಿನ್ನ ಬ್ಯಾಟಿಂಗ್‌ಅನ್ನು ಅನುಭವಿಸು ಎಂದು ಬರೆದಿದ್ದರು" ಎಂದಿದ್ದಾರೆ ಪಡಿಕ್ಕಲ್.
ಅದು ನನಗೆ ನಿಜಕ್ಕೂ ವಿಶೇಷ, ಯಾಕೆಂದರೆ ಅದು ಎಬಿಡಿ ಕಡೆಯಿಂದ ಬಂದಿತ್ತು, ಹಾಗಾಗಿ ನನಗೆ ಸಿಕ್ಕ ವಿಶೇಷ ಗೌರವ ಅದು. ಆತನ ಜೊತೆಗೆ ಬ್ಯಾಟಿಂಗ್ ಮಾಡುವುದನ್ನು ನಾನು ನಿಜಕ್ಕು ತುಂಬಾ ಅನುಭವಿಸುತ್ತೇನೆ. ಆತನೊಂದಿಗೆ ಬ್ಯಾಟಿಂಗ್ ನಡೆಸುವುದು ತುಂಬಾ ಸುಲಭ. ಬೌಲರ್‌ಗಳನ್ನು ಆತ ದಂಡಿಸುತ್ತಾ ಇರುತ್ತಾರೆ. ಅತನ ಆಟವನ್ನು ನೋಡಿ ಆನಂದಿಸಬಹುದು ಎಂದಿದ್ದಾರೆ ದೇವದತ್ ಪಡಿಕ್ಕಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications