ತನ್ನ & ಪೃಥ್ವಿ ಶಾ ನಡುವಿನ ಪೈಪೋಟಿ ಬಿಚ್ಚಿಟ್ಟ ಪಡಿಕ್ಕಲ್

2020-21ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಅತ್ಯದ್ಭುತ ಪ್ರದರ್ಶನ ನೀಡಿ ಮಿಂಚಿದರು. ಮುಂಬೈನ ಪೃಥ್ವಿ ಶಾ 8 ಪಂದ್ಯಗಳಲ್ಲಿ 827 ರನ್ ಬಾರಿಸಿ 2020-21ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದರು. ಕರ್ನಾಟಕದ ದೇವದತ್ ಪಡಿಕ್ಕಲ್ 7 ಪಂದ್ಯಗಳಲ್ಲಿ 737 ರನ್ ಬಾರಿಸಿ ವಿಜಯ್ ಹಜಾರೆ ಟ್ರೋಫಿ 2020-21ರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡರು.
ಇದೀಗ ಈ ಇಬ್ಬರು ಆಟಗಾರರು ಸಹ ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಅದೇ ತರಹ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಹಂಬಲದಲ್ಲಿದ್ದಾರೆ. ಇದೇ ವೇಳೆ ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಮತ್ತು ಪೃಥ್ವಿ ಶಾ ನಡುವೆ ಇದ್ದ ಪೈಪೋಟಿ ಬಗ್ಗೆ ದೇವದತ್ ಪಡಿಕ್ಕಲ್ ಬಿಚ್ಚಿಟ್ಟಿದ್ದಾರೆ. ಪೃಥ್ವಿ ಶಾ ಒಬ್ಬ ಅತ್ಯದ್ಭುತ ಆಟಗಾರ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿ ಕೂಡ ಇದ್ದಾರೆ ಎಂದು ಹೇಳಿದ ಪಡಿಕ್ಕಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ನಾನು ಹೆಚ್ಚು ರನ್ ಗಳಿಸಲು ಕಾರಣ ಪೃಥ್ವಿ ಶಾ ಎಂದು ತಿಳಿಸಿದ್ದಾರೆ.
ಇಬ್ಬರು ಉತ್ತಮ ಮಟ್ಟದಲ್ಲಿ ಬ್ಯಾಟ್ ಮಾಡುತ್ತಿದ್ದ ಕಾರಣ ಇಬ್ಬರ ನಡುವೆಯೂ ತಿಳಿಯದ ರೀತಿಯಲ್ಲಿ ಪೈಪೋಟಿ ನಡೆಯುತ್ತಿತ್ತು ಅದು ನನಗೆ ಅನುಭವವಾಗಿದೆ ಅದೇ ರೀತಿ ಪೃಥ್ವಿ ಶಾಗೂ ಸಹ ಅನುಭವವಾಗಿರುತ್ತದೆ ಎಂದು ಭಾವಿಸುತ್ತೇನೆ ಎಂದು ಪಡಿಕ್ಕಲ್ ಹೇಳಿಕೊಂಡಿದ್ದಾರೆ. ಈ ಪೈಪೋಟಿಯಿಂದ ತಂಡಗಳಿಗೂ ಸಹ ಅನುಕೂಲವಾಯಿತು ಮತ್ತು ನನಗೆ ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಲು ಅನುಕೂಲವಾಯಿತು ಎಂದು ದೇವದತ್ ಪಡಿಕ್ಕಲ್ ತಿಳಿಸಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications