Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಜೊತೆಗಿನ ಅಪೂರ್ವ ಚಿತ್ರ ಹಂಚಿಕೊಂಡ ದೇವದತ್ ಪಡಿಕ್ಕಲ್

Devdutt Padikkal shares memorable picture with Virat Kohli

ಅಬುಧಾಬಿ: ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ 8 ವಿಕೆಟ್‌ಗಳ ಗೆಲುವನ್ನಾಚರಿಸಿತ್ತು. ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಇನ್ನಿಂಗ್ಸ್‌ ನೀಡಿದ್ದರು.

ಆರಂಭಿಕರಾಗಿ ಬ್ಯಾಟಿಂಗ್‌ಗೆ ಬಂದಿದ್ದ ದೇವದತ್ ಪಡಿಕ್ಕಲ್ 45 ಎಸೆತಗಳಿಗೆ 63 ರನ್ ಬಾರಿಸಿದ್ದರು. ನಾಯಕ ವಿರಾಟ್ ಕೊಹ್ಲಿ 53 ಎಸೆತಗಳಿಗೆ 72 ರನ್ ಸೇರಿಸಿದ್ದರು. ಇವರಿಬ್ಬರ ಚತುರ ಬ್ಯಾಟಿಂಗ್ ಮತ್ತು ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ಮಾರಕ ಬೌಲಿಂಗ್ ನೆರವಿನಿಂದ ಆರ್‌ಸಿಬಿ ಮೂರನೇ ಗೆಲುವು ದಾಖಲಿಸಿತು.

ರಾಜಸ್ಥಾನ್ ವಿರುದ್ಧದ ಜಯದ ಬಳಿಕ ದೇವದತ್ ಪಡಿಕ್ಕಲ್ ಟ್ವಿಟರ್‌ನಲ್ಲಿ ಒಂದು ಅತ್ಯಪೂರ್ವ ಚಿತ್ರ ಹಂಚಿಕೊಂಡಿದ್ದಾರೆ. ಈ ಟ್ವೀಟ್‌ನಲ್ಲಿ ಎರಡು ಚಿತ್ರಗಳಿವೆ. ಎರಡರಲ್ಲೂ ಪಡಿಕ್ಕಲ್ ಮತ್ತು ವಿರಾಟ್ ಇದ್ದಾರೆ. ಒಂದು ಹಳೆ ಚಿತ್ರವಾದರೆ ಇನ್ನೊಂದು ಆರ್‌ಆರ್‌ ವಿರುದ್ಧದ ಪಂದ್ಯದಾಗಿನ ಫೋಟೋ.

ವಿರಾಟ್ ಎದುರು ಚಿಕ್ಕ ಹುಡುಗನಾಗಿದ್ದಾಗಿನ ಫೋಟೋದ ಜೊತೆಗೆ ಈಗಿನ ಫೋಟೋ ಸೇರಿಸಿರುವ ಟ್ವೀಟ್‌ನಲ್ಲಿ ಪಡಿಕ್ಕಲ್ ಪ್ಯಾಶನ್ (ಉತ್ಸಾಹ), ಪರ್ಪೋಸ್ (ಉದ್ದೇಶ) ಮತ್ತು ಪ್ರೋಗ್ರೆಸ್ (ಪ್ರಗತಿ) ಎಂದು ಸಾಲೊಂದನ್ನು ಬರೆದಿದ್ದಾರೆ. ಈ ಚಿತ್ರ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Story first published: Saturday, October 3, 2020, 23:35 [IST]
Other articles published on Oct 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+