Sarfaraz Khan ಕಾರಣದಿಂದಲೇ ದೇವದತ್ ಪಡಿಕ್ಕಲ್ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಯಿತು
ಟೀಮ್ ಇಂಡಿಯಾಕ್ಕೆ ಮಧ್ಯಮ ಕ್ರಮಾಂಕದ ಆಟಗಾರರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿತ್ತು. ಆದರೆ, ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಮಿಡ್ಲ್ ಆರ್ಡರ್ ಬ್ಯಾಟರ್ ಒಬ್ಬ ಸಿಕ್ಕಿದ್ದಾನೆ. ಈತ ತೋರಿದ ಧೈರ್ಯವನ್ನು ಕಂಡು, ಟೆಸ್ಟ್‌ನ ಚೊಚ್ಚಲ ಪಂದ್ಯದಲ್ಲಿ ಹೇಗೆ ಆಡಬೇಕು ಎಂಬುದನ್ನು ಆಡಿ ತೋರಿಸಿದ್ದಾರೆ.
ಅಷ್ಟಕ್ಕೂ ಕನ್ನಡಿಗ ದೇವದತ್ ಪಡಿಕ್ಕಲ್ ಆಡಿದ ಧಾಟಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ನರ್ವಸ್ ಮೆಟ್ಟಿನಿಂತು ಬ್ಯಾಟ್ ಮಾಡಿದ ದೇವದತ್, ಅಬ್ಬರಿಸಿದರು. ಕ್ಲಾಸಿಕ್ ಆನ್ ಡ್ರೈವ್, ಆಫ್ ಡ್ರೈವ್‌ಗಳನ್ನು ಬಾರಿಸಿದ ಕರ್ನಾಟಕದ ಸ್ಟಾರ್ ಪ್ಲೇಯರ್ ಇಷ್ಟು ದಿನದ ಬಳಿಕ ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತೋರಿಸಿದರು.

ಆರಂಭದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ನೋಡಿದರೆ, ಅವರು ಆಡುವಾಗ ಹೆದರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಚಿಕ್ಕಂದಿನಿಂದಲೇ ಮೈದಾನದಲ್ಲೇ ಟೈಮ್ ಸ್ಪೆಂಡ್ ಮಾಡಿದರೂ, ರಾಷ್ಟ್ರೀಯ ತಂಡದ ಜೆರ್ಸಿ ತೊಟ್ಟಾಗ ತಳಮಳ ಆಗುವುದು ಗ್ಯಾರಂಟಿ. ಆದರೆ, ತನ್ನಲ್ಲಿರುವ ದುಗುಡಗಳನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ದೇವದತ್ ಅಬ್ಬರಿಸಿದರು.
ಕ್ರೀಸ್‌ಗೆ ಬಂದಾಗ ಇವರಿಗೆ ಫುಟ್ ವರ್ಕ್ ಮಾಡಲು ಬರುವುದೇ ಇಲ್ಲವೇನೊ ಎಂಬಂತೆ ಬ್ಯಾಟ್ ಮಾಡಿದರು. ಆದರೆ ಕ್ರೀಸ್‌ನಲ್ಲಿ ಟೈಮ್ ಸ್ಪೆಂಡ್ ಮಾಡುತ್ತಿದ್ದಂತೆ ಶಾಟ್ ಸೆಲಕ್ಷನ್ ಸಹ ಇಂಪ್ರೂ ಆಯಿತು. ವೇಗದ ಬೌಲರ್ ಹಾಗೂ ಸ್ಪಿನ್ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ದೇವದತ್ ಪಡಿಕ್ಕಲ್ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು.
ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಲು ಕಾರಣವೇನು?
ಕರ್ನಾಟಕದ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಹೀಗೆ ಆತ್ಮವಿಶ್ವಾಸದಿಂದ ಬ್ಯಾಟ್ ಮಾಡಿದ್ದನ್ನು ನೋಡಿ, ಎಲ್ಲರೂ ಬೆರಗಾದರು. ಈ ಬಗ್ಗೆ ದಿನದಾಟದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ದೇವದತ್ ಪಡಿಕ್ಕಲ್, ನೀಡಿದ ಉತ್ತರ ನಿಜಕ್ಕೂ ಹಿರಿಯ ಆಟಗಾರರ ಲಕ್ಷಣವನ್ನು ತೋರಿಸುತ್ತದೆ.

ಆಗಿದ್ದೇನು?
ಐದನೇ ಟೆಸ್ಟ್ ಪಂದ್ಯದಲ್ಲಿ ರಜತ್ ಪಟಿದಾರ್‌ಗೆ ಗಾಯವಾಯಿತು. ಇವರ ಸ್ಥಾನದಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್‌ಗೆ ಆಡುವ ಅವಕಾಶ ಲಭಿಸಿತು. ಫೀಲ್ಡಿಂಗ್‌ನಲ್ಲಿ ಉತ್ತಮವಾದ ಕ್ಯಾಚ್‌ಗಳನ್ನು ಪಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಇನ್ನು ಬ್ಯಾಟಿಂಗ್‌ನಲ್ಲೂ ರನ್ ಗಳಿಸಿ ಭರವಸೆ ಮೂಡಿಸಬೇಕಿತ್ತು. ಈ ಕೆಲಸವನ್ನು ಸಹ ದೇವದತ್ ಅಚ್ಚುಕಟ್ಟಾಗಿ ಮಾಡಿದರು.
ಶತಕವೀರ ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ದೇವದತ್‌ಗೆ ಆರಂಭದ ಏಳು ಎಸೆತಗಳಲ್ಲಿ ಶುಭ್‌ಮನ್ ಗಿಲ್ ಸಾಥ್ ನೀಡಿದರು. ಬಳಿಕ ಗಿಲ್ ಸಹ ಔಟ್ ಆದರು.
ಇಬ್ಬರು ಯುವ ಆಟಗಾರರು ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಈ ಲೆಕ್ಕಾಚಾರದಲ್ಲಿ ಸರ್ಫರಾಜ್ ಖಾನ್ ಕೊಂಚ ಪಡಿಕ್ಕಲ್ ಗಿಂತ ಅನುಭವಿ. ಇದರ ಲಾಭ ಪಡೆದ, ಸರ್ಫರಾಜ್ ದೇವದತ್‌ಗೆ ಸರಿಯಾದ ಮಾರ್ಗದರ್ಶನ ಮಾಡಿದರು. ಅಲ್ಲದೆ ದೇವದತ್ ಅವರಿಗೆ ಸಲಹೆಗಳನ್ನು ನೀಡಿದರು. ಇದನ್ನೇ ಪಡಿಕ್ಕಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿ ಎಲ್ಲರ ಮಬನ ಗೆದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications