33 ಎಸೆತಗಳಲ್ಲಿ ಇಶಾನ್ ಬಾರಿಸಿದ ಶತಕ ವ್ಯರ್ಥ: ಕರ್ನಾಟಕಕ್ಕೆ ದಾಖಲೆಯ ಜಯ
ಅಹಮದಾಬಾದ್: ಭರವಸೆಯ ಬ್ಯಾಟರ್ ದೇವದತ್ ಪಡಿಕ್ಕಲ್ (147 ರನ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ವಿಜಯ್ ಹಜಾರೆಯಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಹೆಗ್ಗಳಿಕೆ ಮಯಾಂಕ್ ಪಾಲಾಯಿತು.
ಜಾರ್ಖಂಡ್ ಪರ ಶಿಖರ್ ಮೋಹನ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 79 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 44 ರನ್ ಸಿಡಿಸಿದರು. ಉತ್ಕರ್ಷ್ ಸಿಂಗ್ (8), ಶುಭ್ ಶರ್ಮಾ (15), ರನ್ ಕಲೆ ಹಾಕುವಲ್ಲಿ ವಿಫಲರಾದರು. ಜಾರ್ಖಂಡ್ 110 ರನ್ ಗಳಿಗೆ 3 ವಿಕೆಟ್‌ಗೆ ಸಂಕಷ್ಟಕ್ಕೆ ಸಿಲುಕಿತು.

4ನೇ ವಿಕೆಟ್‌ಗೆ ವಿರಾಟ್ ಸಿಂಗ್ ಹಾಗೂ ಕುಮಾರ್ ಕುಶಾಗ್ರ್ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಕುಮಾರ್ ಕುಶಾಗ್ರ್ 3 ಬೌಂಡರಿ, 5 ಸಿಕ್ಸರ್ ನೆರವಿನಿಂದ 63 ರನ್ ಸಿಡಿಸಿದರು. ವಿರಾಟ್ ಸಿಂಗ್ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ 88 ರನ್ ಬಾರಿಸಿ ಅಬ್ಬರಿಸಿದರು. ಇನ್ನು ನಾಯಕ ಇಶಾನ್ ಕಿಶನ್ ಸಹ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿ ಸ್ಪೋಟಿಸಿದರು. ಇಶಾನ್ ಕಿಶನ್ 39 ಎಸೆತಗಳಲ್ಲಿ 7 ಬೌಂಡರಿ, 14 ಸಿಕ್ಸರ್ ಸಹಾಯದಿಂದ 125 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಪರಿಣಾಮ ಜಾರ್ಖಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 412 ರನ್ ಸೇರಿಸಿತು.
ದೇವದತ್ ಶತಕದ ಅಬ್ಬರ
413 ರನ್ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭ ಭರ್ಜರಿಯಾಗಿತ್ತು. ಮಯಾಂಕ್ ಅಗರ್‌ವಾಲ್ ಹಾಗೂ ಆರಂಭಿಕ ದೇವದತ್ ಪಡಿಕ್ಕಲ್ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. 11.5 ಓವರ್‌ಗಳಲ್ಲಿ 114 ರನ್ ಸೇರಿಸಿದ ಆರಂಭಿಕ ಜೋಡಿ ಆರ್ಭಟಿಸಿತು. ನಾಯಕ ಮಯಾಂಕ್ ಅಗರ್‌ವಾಲ್ 54 ರನ್ ಬಾರಿಸಿ ಆರ್ಭಟಿಸಿದರು.

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ದೇವದತ್ ಪಡಿಕ್ಕಲ್ 118 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್ ಸಹಾಯದಿಂದ 147 ರನ್ ಸಿಡಿಸಿ ಔಟ್ ಆದರು. ಸ್ಟಾರ್ ಆಟಗಾರ ಕರುಣ್ ನಾಯರ್ 29, ಆರ್ ಸ್ಮರಣ್ 27, ಕೃಷ್ಣಾ ಶ್ರೀಜೇತ್ 38 ರನ್ ಕಲೆ ಹಾಕಿದರು. ಭರವಸೆಯ ಬ್ಯಾಟರ್ ಅಭಿನವ್ ಮನೋಹರ್ 32 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 56 ರನ್ ಬಾರಿಸಿದರು. ಧ್ರುವ್ ಪ್ರಭಾಕರ್ ಅಜೇಯ 40 ರನ್ ಸಿಡಿಸಿ ಕರ್ನಾಟಕಕ್ಕೆ ಜಯ ತಂದು ಕೊಟ್ಟರು. ಪರಿಣಾಮ ಕರ್ನಾಟಕ 47.3 ಓವರ್‌ಗಳಲ್ಲಿ 5 ವಿಕೆಟ್‌ಗೆ 413 ರನ್ ಸೇರಿಸಿತು. ಈ ಮೂಲಕ ಕರ್ನಾಟಕ ಇತಿಹಾಸ ನಿರ್ಮಿಸಿತು.
ಕರ್ನಾಟಕ ಇತಿಹಾಸ
ಜಾರ್ಖಂಡ್ ವಿರುದ್ಧದ ಭರ್ಜರಿ ಜಯದೊಂದಿಗೆ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಕರ್ನಾಟಕ 13 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ. 2012ರಲ್ಲಿ ಗೋವಾ ವಿರುದ್ಧ ಆಂಧ್ರ 384 ರನ್‌ಗಳ ಗುರಿಯನ್ನು ಸಮರ್ಥವಾಗಿ ಬೆನ್ನಟ್ಟಿ ಇತಿಹಾಸ ನಿರ್ಮಿಸಿತ್ತು. ಈ ದಾಖಲೆಯನ್ನು ಕರ್ನಾಟಕ ಅಳಿಸಿ ಹಾಕಿದೆ. ಕರ್ನಾಟಕದ ಈ ಗೆಲುವು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ. ಆಸ್ಟ್ರೇಲಿಯಾ ನೀಡಿದ್ದ 435 ರನ್‌ಗಳ ದಾಖಲೆಯನ್ನು ದಕ್ಷಿಣ ಆಫ್ರಿಕಾ 2006ರಲ್ಲಿ ಚೇಸ್ ಮಾಡಿ ದಾಖಲೆ ಬರೆದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications