ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಜನವರಿ 18 ಹಾಗೂ 19 ರಂದು ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನ ಆಯೋಜಿಸುತ್ತದೆ. ಅಲ್ಲದೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಏಕದಿನ ಮಾದರಿಯಲ್ಲಿ ನಡೆಯಲಿದೆ. ಈ ಬಾರಿ ಈ ತಂಡದಲ್ಲಿ ಕರ್ನಾಟಕದ ಪ್ಲೇಯರ್ ಒಬ್ಬರಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ.
ಕರ್ನಾಟಕದ ಸ್ಟಾರ್ ಎಡಗೈ ಆಟಗಾರ ಈಗಾಗಲೇ ರಾಷ್ಟ್ರೀಯ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ದೇಶೀಯ ಏಕದಿನ ಫಾರ್ಮೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊಸ ದಾಖಲೆ ನಿರ್ಮಿಸುತ್ತಲೇ ಇರುತ್ತಾರೆ. ಈ ಇಬ್ಬರೂ ಆಟಗಾರರಿಗೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಈ ರೇಸ್‌ಗೆ ಈಗ ಹೊಸ ಪ್ಲೇಯರ್ ಎಂಟ್ರಿ ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವ ಕನಸು ಹೊಂದಿರುವ ಆಟಗಾರ ಕರ್ನಾಟಕದ ದೇವದತ್ ಪಡಿಕ್ಕಲ್. ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ನಲ್ಲಿ ದೇವದತ್ ಪಡಿಕ್ಕಲ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಬಳಿಕ ತಂಡವನ್ನು ಸೇರಿಕೊಂಡ ದೇವದತ್, ಬರೋಡಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಅಲ್ಲದೆ ಹರಿಯಾಣ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕ್ಲಾಸಿಕ್ ಆಟದ ಪ್ರದರ್ಶನ ನೀಡಿ 86 ರನ್ ಕಲೆ ಹಾಕಿದ್ದಾರೆ.
ಲಿಸ್ಟ್-ಎ ವೃತ್ತಿಜೀವನದಲ್ಲಿನ ಪಡಿಕ್ಕಲ್ ಅಂಕಿಅಂಶಗಳು ಅಮೋಘವಾಗಿವೆ. ಈ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಹ ಹಿಂದೆ ಬಿದ್ದಿದ್ದಾರೆ. ಲೀಸ್ಟ್ ಎ ಕ್ರಿಕೆಟ್‌ನಲಲ್ಇ 32 ಪಂದ್ಯಗಳನ್ನು ಆಡಿರುವ ದೇವದತ್ 2000 ರನ್ ದಾಟಿದ್ದಾರೆ. ಇವರು 82.52 ರ ಉತ್ತಮ ಸರಾಸರಿಯಲ್ಲಿ ರನ್ ಕಲೆ ಹಾಕುತ್ತಿದ್ದಾರೆ. ಇನ್ನು ಈ ವೇಳೆ 9 ಶತಕ 12 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಅಂದರೆ ದೇವದತ್ ಪ್ರತಿ ಏಳು ಇನಿಂಗ್ಸ್‌ಗಳಲ್ಲಿ 50ಕ್ಕೂ ಹೆಚ್ಚು ರನ್ ಬಾರಿಸುವ ಕ್ಷಮತೆಯನ್ನು ಹೊಂದಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 90ಕ್ಕೂ ಹೆಚ್ಚಿದ್ದು, 80ಕ್ಕೂ ಹೆಚ್ಚು ಸರಾಸರಿ ಹೊಂದಿದ್ದಾರೆ. ಈ ಮೂಲಕ ಇವರು ಸಹ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ತಮ್ಮಗೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಆಸ್ಟ್ರೇಲಿಯಾದ ಶ್ರೇಷ್ಠ ಆಲ್‌ರೌಂಡರ್ ಮೈಕೆಲ್ ಬೆವನ್ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಉತ್ತಮ ಸರಾಸರಿ ಹೊಂದಿರುವ ಆಟಗಾರ. ಇವರು 57.86ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಆದರೆ ಈ ದಾಖಲೆಯನ್ನು ಸಹ ದೇವದತ್ ಮೀರಿ ನಿಂತಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ದೇವದತ್ ಪಡಿಕ್ಕಲ್ ಗೆ ಟೆಸ್ಟ್ ಪಂದ್ಯ ಆಡುವ ಅವಕಾಶ ಸಿಕ್ಕಿತ್ತು. ಆದರೆ ಅವರು ವಿಶೇಷವಾದದ್ದೇನು ಮಾಡಿಲ್ಲ. ಇನ್ನು ಈಗಾಗಲೇ ದೇವದತ್ ಭಾರತದ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು 90 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಸೇರಿವೆ. ಇನ್ನು 2 ಟಿ20 ಪಂದ್ಯವನ್ನು ಆಡಿದ ಅನುಭವ ಸಹ ದೇವದತ್ ಹೆಗಲಿಗಿದೆ.