ಮೂರು ಪಂದ್ಯಗಳ ಶ್ರೀಲಂಕಾ vs ಬಾಂಗ್ಲಾದೇಶ ಏಕದಿನ ಸರಣಿಗೆ ಢಾಕಾ ಆತಿಥ್ಯ

ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ಕೊರೊನಾ ವೈರಸ್‌ನ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈ ಮಧ್ಯೆ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಏಕದಿನ ಸರಣಿಗೆ ಸಜ್ಜಾಗುತ್ತಿದ್ದು ಬಾಂಗ್ಲಾದೇಶ ಈ ಸರಣಿಯ ಆತಿಥ್ಯವನ್ನು ವಹಿಸಿಕೊಳ್ಳಲಿದೆ.
ಮೂರು ಪಂದ್ಯಗಳ ಈ ಏಕದಿನ ಸರಣಿಗೆ ಒಂದೇ ತಾಣವನ್ನು ಬಾಂಗ್ಲಾದೇಶ ಗುರುತಿಸಿದೆ. ಬಾಂಗ್ಲಾದೇಶದ ಢಾಕಾದಲ್ಲಿರುವ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಮೂರು ಪಂದ್ಯಗಳು ಕೂಡ ಆಯೋಜನೆಯಾಗಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಘೋಷಿಸಿದೆ.
ಈಗಾಗಲೇ ನಿಗದಿಯಾಗಿರುವಂತೆ ಮೇ 16ರಂದು ಶ್ರೀಲಂಕಾ ತಂಡ ಬಾಂಗ್ಲಾದೇಶಕ್ಕೆ ಬಂದಿಳಿಯಲಿದ್ದು ಮೂರು ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಲಿದೆ. ಅದಾದ ನಂತರ ಮೇ 19 ಹಾಗೂ 21ರಂದು ಎರಡು ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾಗಿಯಾಗಲಿದೆ. ಮಾರ್ಚ್ 23ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ.
ಈ ಸರಣಿಯು ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದ್ದು ಬಾಂಗ್ಲಾದೇಶ ತಂಡ ಅರ್ಹತೆಯನ್ನು ಪಡೆಯಲು ಇರುವ ಮೂರನೇ ಸರಣಿ ಇದಾಗಿದೆ. ಸೂಪರ್ ಲೀಗ್‌ನ ಅಂಕಪಟ್ಟಿಯಲ್ಲಿ ಬಾಂಗ್ಲಾ ಈಗ ಆರನೇ ಸ್ಥಾನದಲ್ಲಿದ್ದು ಮೂರು ಗೆಲುವು ಹಾಗೂ ಮೂರು ಸೋಲು ಕಂಡಿದೆ. ಶ್ರೀಲಂಕಾ ತಂಡ ಇತ್ತೀಚೆಗೆ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಸರಣಿಯಲ್ಲಿ ಸೋಲು ಕಂಡ ಬಳಿಕ ಈ ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications