Dharamshala Test: ರೋಹಿತ್, ಗಿಲ್ ಶತಕದ ಮೋಡಿ: ಇನ್ನಿಂಗ್ಸ್ ಮುನ್ನಡೆ ಸಾಧಿಸಿ ಭಾರತ
ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಅಬ್ಬರ ಮುಂದುವರೆದಿದೆ. ಸ್ಟಾರ್ ಆಟಗಾರರ ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದತೆ ಥಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಎರಡನೇ ದಿನದ ಮೊದಲ ಸೆಷನ್‌ನಲ್ಲಿ ರೋಹಿತ್ ಹಾಗೂ ಶುಭಮನ್ ಗಿಲ್ ಇಂಗ್ಲೆಂಡ್ ಬೌಲರ್‌ಗಳ ಮನ ಬಂದಂತೆ ದಂಡಿಸಿದರು. ಆಫ್ ಸೈಡ್ ಹಾಗೂ ಆನ್ ಸೈಡ್‌ನಲ್ಲಿ ರನ್ ಕಲೆ ಹಾಕಿದ ಜೋಡಿ ಶತಕ ಬಾರಿಸಿತು.
ಮೊದಲ ದಿನದಾಟದಲ್ಲಿ ಅಜೇಯರಾಗಿ ಉಳಿದಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಎರಡನೇ ದಿನವೂ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿತು. ಅಲ್ಲದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಇಂಗ್ಲೆಂಡ್ ಮಾಡಿಕೊಂಡ ಎಲ್ಲ ಪ್ಲ್ಯಾನ್‌ಗಳು ಪ್ಲಾಫ್ ಆಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಇಬ್ಬರೂ ಟಾಪ್ ಆರ್ಡರ್ ಆಟಗಾರರು ರನ್ ಮಹಲ್ ಕಟ್ಟಿದರು.

ಭರ್ಜರಿ ಜೊತೆಯಾಟ
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿದೆ. ಒಂದೆಡೆ ನಾಯಕ ರೋಹಿತ್ ಶರ್ಮಾ ಶತಕ ಪೂರೈಸಿದರೆ, ಮತ್ತೊಂದೆಡೆ 3ನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಕೂಡ ಭರ್ಜರಿ ಶತಕ ಬಾರಿಸಿ ಅಭಿಮಾನಿಗಳ ಮನಗೆದ್ದರು.
ಮೊದಲ ದಿನದಾಟದ ಅಂತ್ಯಕ್ಕೆ ಗಿಲ್ 26 ರನ್ ಗಳಿಸಿ ಅಜೇಯರಾಗುಳಿದಿದ್ದು, ಎರಡನೇ ದಿನ ಬಂದ ತಕ್ಷಣ ಭರ್ಜರಿ ಪ್ರದರ್ಶನ ನೀಡಿದರು. ಅಲ್ಲದೆ ತಮ್ಮ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಶತಕವನ್ನು ವೇಗದಲ್ಲಿ ಪೂರೈಸಿದರು.
ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಜೊತೆಗೂಡಿ ಅಜೇಯ 160 ರನ್‌ಗಳ ಜೊತೆಯಾಟವನ್ನು ನೀಡಿ ಮುನ್ನಗುತ್ತಿದ್ದಾರೆ.

12ನೇ ಶತಕ
ರೋಹಿತ್ ಶರ್ಮಾ ಸಹ ಈ ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಸ್ಟಾರ್ ಪ್ಲೇಯರ್ ತಮ್ಮ ನೈಜ ಆಟವನ್ನು ಆಡಿದರು. 63.75ರ ಸರಾಸರಿಯಲ್ಲಿ ರನ್ ಕಲೆ ಹಾಕಿದ ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಬಾರಿಸಿದರು. ಇವರ ಈ ಇನಿಂಗ್ಸ್‌ನಲ್ಲಿ 13 ಬೌಂಡರಿ, 2 ಸಿಕ್ಸರ್ ಸೇರಿವೆ.
4ನೇ ಶತಕ
ಶುಭಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಮ್ಮ ಮೇಲೆ ಇದ್ದ ಟೀಕೆಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದ ಅವರು ಅಬ್ಬರಿಸಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ಬಾರಿಸಿದರು. ಇವರ ಆಟದಲ್ಲಿ 10 ಬೌಂಡರಿ, 5 ಸಿಕ್ಸರ್ ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications