ದಾದಾ, ತೆಂಡೂಲ್ಕರ್ ಸಾಲಿಗೆ ಸೇರಿದ ಶತಕ ವೀರ ಶಿಖರ್ ಧವನ್!

ಲಂಡನ್, ಜೂನ್ 09: ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಾಂಗರೂ ಪಡೆಯ ಬೌಲರ್‌ಗಳನ್ನು ಬಡಿದು ಬೆಂಡೆತ್ತಿದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಭಾರತ ಕ್ರಿಕೆಟ್ ಇತಿಹಾಸದ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಬಲಿಷ್ಠ ಬೌಲಿಂಗ್ ವಿಭಾಗದ ಎದುರು ಅಕ್ಷರಶಃ ಮಿಂಚಿನ ಆಟವಾಡಿದ 33 ವರ್ಷದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್, 109 ಎಸೆತಗಳಲ್ಲಿ ಬರೋಬ್ಬರಿ 16 ಫೋರ್‌ಗಳೊಂದಿಗೆ 117 ರನ್‌ಗಳನ್ನು ಚಚ್ಚಿ ಭಾರತ ತಂಡವನ್ನು ಬೃಹತ್ ಮೊತ್ತದ ಕಡೆಗೆ ಮುನ್ನುಗ್ಗುವಂತೆ ಮಾಡಿದರು. ಅಲ್ಲದೆ ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ (57) ಜೊತೆಗೂಡಿ 127 ರನ್‌ಗಳ ಅದ್ಭು ಜೊತೆಯಾಟವನ್ನೂ ನಡೆಸಿದರು.
ಐಸಿಸಿ ಟೂರ್ನಿಗಳಲ್ಲಿ ಭರ್ಜರಿ ಬ್ಯಾಟಿಂಗ್ ದಾಖಲೆ ಹೊಂದಿರುವ ಧವನ್, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿ ಬದುಕಿನ 17ನೇ ಶತಕ ದಾಖಲಿಸಿ ಮಿಂಚಿದರು. ಇದು ವಿಶ್ವಕಪ್ ಟೂರ್ನಿಯಲ್ಲಿ ಧವನ್ ಅವರ ಮೂರನೇ ಶತಕವಾಗಿದೆ. ಈ ಮೂಲಕ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಬ್ಯಾಟಿಂಗ್ ದಂತಕತೆಗಳಾದ ಸಚಿನ್ ತೆಂಡೂಲ್ಕರ್ (6) ಮತ್ತು ಸೌರವ್ ಗಂಗೂಲಿ (4) ಅವರ ಬಳಿಕ ಮೂರು ಶತಕಗಳನ್ನು ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆ ದಬ್ಬರ್ ಖ್ಯಾತಿಯ ಶಿಖರ್ ಧವನ್ ಮುಡಿಗೇರಿದೆ.
ಅಂದಹಾಗೆ ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿರುವ ಬ್ಯಾಟ್ಸ್‌ಮನ್‌ಗಳ ವಿವರ ಇಂತಿದೆ.

ಸಚಿನ್ ತೆಂಡೂಲ್ಕರ್ (45 ಪಂದ್ಯ, 6 ಶತಕ)
ಒಡಿಐನಲ್ಲಿ ಸಚಿನ್ ಬ್ಯಾಟಿಂಗ್ ಸಾಧನೆ
463 ಪಂದ್ಯ
18426 ರನ್
200* ಶ್ರೇಷ್ಠ
44.83 ಸರಾಸರಿ
86.23 ಸ್ಟ್ರೈಕ್‌ರೇಟ್
49 ಶತಕಗಳು
96 ಅರ್ಧಶತಕಗಳು

ಸೌರವ್ ಗಂಗೂಲಿ (21 ಪಂದ್ಯ, 4 ಶತಕ)
ಒಡಿಐನಲ್ಲಿ ಗಂಗೂಲಿ ಸಾಧನೆ
311 ಪಂದ್ಯ
11363 ರನ್
183 ಶ್ರೇಷ್ಠ
41.02 ಸರಾಸರಿ
73.70 ಸ್ಟ್ರೈಕ್‌ರೇಟ್
22 ಶತಕಗಳು
72 ಅರ್ಧಶತಕಗಳು
ಶಿಖರ್ ಧವನ್ (10 ಪಂದ್ಯ, 03 ಶತಕ)
ಒಡಿಐನಲ್ಲಿ ಧವನ್ ಸಾಧನೆ
130 ಪಂದ್ಯ
5480 ರನ್
143 ಶ್ರೇಷ್ಠ
44.62 ಸರಾಸರಿ
93.79 ಸ್ಟ್ರೈಕ್‌ರೇಟ್
17 ಶತಕಗಳು
27 ಅರ್ಧಶತಕಗಳು
ರೋಹಿತ್ ಶರ್ಮಾ (10 ಪಂದ್ಯ, 2 ಶತಕ)
ಒಡಿಐನಲ್ಲಿ ರೋಹಿತ್ ಸಾಧನೆ
209 ಪಂದ್ಯ
8189 ರನ್
264 ಶ್ರೇಷ್ಠ
47.39 ಸರಾಸರಿ
87.95 ಸ್ಟ್ರೈಕ್‌ರೇಟ್
23 ಶತಕಗಳು
42 ಅರ್ಧಶತಕಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications