For Quick Alerts
ALLOW NOTIFICATIONS  
For Daily Alerts
 

"ಗಂಗೂಲಿ ಬೆಂಬಲಿಸಿದರು, ಆದರೆ ಧೋನಿ, ಕೊಹ್ಲಿ...": ಕಡೆಗೂ ಮೌನಮುರಿದ ಯುವಿ

Dhoni And Kohli Didnt Support Me The Way Ganguly Did: Yuvraj

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅದ್ಭುತ ಕ್ರಿಕೆಟಿಗ. 2011ರ ವಿಶ್ವಕಪ್ ಹೀರೋ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದರು. ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿ ಕಳಪೆ ಫಾರ್ಮ್‌ನಲ್ಲಿ ಯುವಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾದಲ್ಲಿ ತನಗೆ ನಾಯಕರಿಂದ ಯಾವ ರೀತಿ ಬೆಂಬಲ ಸಿಕ್ಕಿತ್ತು ಎಂಬ ವಿಚಾರವನ್ನು ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಯುವರಾಜ್ ಸಿಂಗ್ ತನ್ನ ಆರಂಭದ ನಾಯಕ ಸೌರವ್ ಗಂಗೂಲಿಯಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ ಯಾವ ರೀತಿ ನಾಯಕರು ಬೆಂಬಲವಾಗಿ ನಿಂತರು ಎಂಬುದನ್ನು ಯುವಿ ಹೇಳಿಕೊಂಡಿದ್ದಾರೆ.

ಟೀಮ್ ಇಂಡಿಯಾ ನಾಯಕರ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ಮುಂದೆ ಓದಿ..

ಬೆಸ್ಟ್ ಕ್ಯಾಪ್ಟನ್‌ನನ್ನು ಆರಿಸುವುದು ಕಷ್ಟ

ಬೆಸ್ಟ್ ಕ್ಯಾಪ್ಟನ್‌ನನ್ನು ಆರಿಸುವುದು ಕಷ್ಟ

ಟೀಮ್ ಇಂಡಿಯಾದ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆಗೆ ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಮಧ್ಯೆ ಒಬ್ಬರನ್ನು ಆರಿಸುವುದು ಕಷ್ಟ ಎಂಬ ಮಾತನ್ನು ಯುವರಾಜ್ ಸಿಂಗ್ ಹೇಳಿದ್ದಾರೆ. ಅದರೆ ಮುಂದೆ ಮಾತನಾಡುತ್ತಾ ಯುವರಾಜ್ ಯಾವ ನಾಯಕನ ಜೊತೆಗೆ ಅತ್ಯುತ್ತಮ ನೆನಪುಗಳಿವೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಗಂಗೂಲಿಯಿಂದ ಅದ್ಭುತ ಬೆಂಬಲ

ಗಂಗೂಲಿಯಿಂದ ಅದ್ಭುತ ಬೆಂಬಲ

ಟೀಮ್ ಇಂಡಿಯಾದ ನಾಯಕನಾಗಿದ್ದಾಗ ಸೌರವ್ ಗಂಗೂಲಿ ಯುವರಾಜ್ ಸಿಂಗ್‌ಗೆ ಅದ್ಭುತವಾಗಿ ಬೆಂಬಲಿಸಿದ್ದರಂತೆ. ಈ ವಿಚಾರವನ್ನು ಸ್ವತಃ ಯುವಿ ಹೇಳಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಗೆ ಹೋಲಿಸಿದರೆ ಗಂಗೂಲಿ ನೀಡಿದ ಬೆಂಬಲ ಉತ್ಕೃಷ್ಟವಾಗಿತ್ತು ಎಂದಿದ್ದಾರೆ.

ತುಂಬಾ ಉತ್ತಮ ನೆನಪುಗಳಿವೆ

ತುಂಬಾ ಉತ್ತಮ ನೆನಪುಗಳಿವೆ

ಸೌರವ್ ಗಂಗೂಲಿ ನನಗೆ ವೈಯಕ್ತಿಕವಾಗಿ ತುಂಬಾ ಬೆಂಬಲವನ್ನು ನೀಡಿದ ನಾಯಕ. ಆ ಕಾರಣಕ್ಕಾಗಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ನಾನು ಅತ್ಯುತ್ತಮ ನೆನಪುಗಳನ್ನು ಹೊಂದಿದ್ದೇನೆ ಎಂಬ ಮಾತನ್ನು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

ಮಾಹಿ, ಕೊಹ್ಲಿಯಿಂದ ಸಿಗದ ಬೆಂಬಲ

ಮಾಹಿ, ಕೊಹ್ಲಿಯಿಂದ ಸಿಗದ ಬೆಂಬಲ

ನಾಯಕನಾಗಿ ಸೌರವ್ ಗಂಗೂಲಿ ತನಗೆ ಬೆಂಬಲವಾಗಿ ನಿಂತಿದ್ದರು. ಗಂಗೂಲಿ ಬಳಿಕ ಆ ಸ್ಥಾನವನ್ನು ಧೋನಿ ಅಲಂಕರಿಸಿದರು. ಆದರೆ ಧೋನಿ ಮತ್ತು ನಂತರದ ನಾಯಕ ವಿರಾಟ್ ಕೊಹ್ಲಿಯಿಂದ ತನಗೆ ಉತ್ತಮ ಬೆಂಬಲ ಸಿಗಲೇ ಇಲ್ಲ ಎಂದು ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ.

ವಿಶ್ವಕಪ್ ಹೀರೋ ಯುವಿ

ವಿಶ್ವಕಪ್ ಹೀರೋ ಯುವಿ

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದ ಯುವರಾಜ್ ಸಿಂಗ್ 2011ರ ವಿಶ್ವಕಪ್‌ನ ನಿಜವಾದ ಹೀರೋ. ಈ ಟೂರ್ನಿಯಲ್ಲಿ ಯುವಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು, ಆಲ್‌ರೌಂಡರ್ ಆಘಿ ಮಿಂಚಿದ್ದರು. ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಈ ಟೂರ್ನಿಯಲ್ಲಿ ಯುವಿ 362 ರನ್‌ಗಳನ್ನು ಬಾರಿಸಿದ್ದರೆ ಬೌಲಿಂಗ್‌ನಲ್ಲಿ 15 ವಿಕೆಟ್ ಕಿತ್ತಿದ್ದರು. ನಾಲ್ಕು ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ವಿಶ್ವಕಪ್‌ ಬಳಿಕ ಬಹುದೊಡ್ಡ ಆಘಾತ

ವಿಶ್ವಕಪ್‌ ಬಳಿಕ ಬಹುದೊಡ್ಡ ಆಘಾತ

ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೆ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಯುವಿ ಇರಲಿಲ್ಲ. ಅದಕ್ಕೆ ಕಾರಣ ಯುವಿ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಈ ಹೋರಟದಲ್ಲಿ ಗೆದ್ದ ಯುವಿ ಮತ್ತೆ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದರು. ಆದರೆ ಬಳಿಕ ಯುವಿ ಪ್ರದರ್ಶನ ಹಿಂದಿನ ಪ್ರದರ್ಶನದಷ್ಟು ಮೊನಚಾಗಿರಲಿಲ್ಲ. ನಿಧಾನವಾಗಿ ಯುವಿ=ಗೆ ಅವಕಾಶಗಳು ಕಡಿಮೆಯಾಗತೊಡಗಿತ್ತು.

ಕಳೆದ ವರ್ಷ ನಿವೃತ್ತಿ

ಕಳೆದ ವರ್ಷ ನಿವೃತ್ತಿ

ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರವಾಗಿ 2017ರಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡ ಯುವಿ ಬಳಿಕ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಪಡೆಯಲಿಲ್ಲ, ಕಳೆದ ವರ್ಷ ಅಂದರೆ 2019ರಲ್ಲಿ ಯುವಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಯುವಿ ನಿವೃತ್ತಿಯನ್ನು ಹೇಳಿದ್ದಾರೆ.

2003- 2017

2003- 2017

ಯುವರಾಜ್ ಸಿಂಗ್ ಟೀಮ್ ಇಂಡಿಯಾದಲ್ಲಿ 2003ರಲ್ಲಿ ಅವಕಾಶವನ್ನು ಪಡೆದುಕೊಂಡರು. ತಮ್ಮ ಹದಿನಾಲ್ಕು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಯುವಿ 40 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. 304 ಏಕದಿನ ಪಂದ್ಯಗಳಲ್ಲಿ ಮತ್ತು 58 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

Story first published: Wednesday, April 1, 2020, 15:44 [IST]
Other articles published on Apr 1, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+