Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಕೆಟ್‌ ಹಿಂಬದಿಯಲ್ಲಿ ಮತ್ತೊಮ್ಮೆ ವಿಫಲಗೊಂಡ ಎಂ.ಎಸ್‌ ಧೋನಿ!

Dhoni errs in DRS judgement; Jason Roy gets a relief

ಬರ್ಮಿಂಗ್‌ಹ್ಯಾಮ್‌, ಜೂನ್‌ 30: ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂ.ಎಸ್‌ ಧೋನಿ ಟೀಮ್‌ ಇಂಡಿಯಾದ ಅತ್ಯಂತ ಮೌಲ್ಯಯುತ ಆಟಗಾರ. ವಿಕೆಟ್‌ ಹಿಂಬದಿಯಲ್ಲಿ ಧೋನಿ ಮಾಡಿರುವ ಮ್ಯಾಜಿಕ್‌ ಮತ್ತೊಬ್ಬ ವಿಕೆಟ್‌ಕೀಪರ್‌ನಿಂದ ನಿರೀಕ್ಷಿಸಲು ಖಂಡಿತಾ ಸಾಧ್ಯವಿಲ್ಲ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

37 ವರ್ಷದ ಅನುಭವಿ ಆಟಗಾರ ವಿಕೆಟ್‌ ಹಿಂಬದಿ ನಿಂತು ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡುವಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ನಾಯಕ ವಿರಾಟ್‌ ಕೊಹ್ಲಿ ಅವರ ಮೇಲಿನ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಆದರೆ, ಭಾನುವಾರ ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಡಿಆರ್‌ಎಸ್‌ ಬಳಕೆಗೆ ತೆಗೆದುಕೊಳ್ಳುವಲ್ಲಿ ಧೋನಿ ವಿಫಲರಾದರು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡದ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಎಸೆದ ಬೌನ್ಸರ್‌ ಸ್ಟ್ರೈಕ್‌ನಲ್ಲಿದ್ದ ಜೇಸನ್‌ ರಾಯ್‌ ಅವರ ಗ್ಲೌಗೆ ತಾಗಿ ವಿಕೆಟ್‌ಕೀಪರ್‌ ಎಂ.ಎಸ್‌ ಧೋನಿ ಕೈಸೇರಿತ್ತು. ವಿಕೆಟ್‌ಗಾಗಿ ಮನವಿ ಮಾಡಲಾಯಿತಾದರೂ ಅಂಪೈರ್‌ ನಿರಾಸಕ್ತಿ ತೋರಿದರು. ಬೌಲರ್‌ ಹಾರ್ದಿಕ್‌ ಚೆಂಡು ತಾಗಿರುವುದಕ್ಕೆ ವಿಶ್ವಾಸ ವ್ಯಕ್ತ ಪಡಿಸಿದರೂ ಧೋನಿ ಡಿಆರ್‌ಎಸ್‌ ಬಳಸದೇ ಇರುವಣತೆ ಸೂಚಿಸಿದರು.

ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಧೋನಿ ಸಲಹೆಯನ್ನು ಶಿರಸಾ ಪಾಲಿಸಿ ಡಿಆರ್‌ಎಸ್‌ ಮೊರೆ ಹೋಗದೇ ಇರಲು ನಿರ್ಧರಿಸಿದರು. ಆದರೆ, ಟೆಲಿವಿಷನ್‌ ರೀಪ್ಲೇಯಲ್ಲಿ ಅಲ್ಟ್ರಾ ಎಡ್ಜ್‌ ಪರಿಶೀಲನೆಯಲ್ಲಿ ಚೆಂಡು ಜೇಸನ್‌ ಅವರ ಗ್ಲೌಗೆ ತಾಗಿರುವುದು ಪತ್ತೆಯಾಯಿತು. ಜೀವದಾನ ಪಡೆದ ರಾಯ್‌ 57 ಎಸೆತಗಳಲ್ಲಿ 66 ರನ್‌ಗಳನ್ನು ಚೆಚ್ಚಿ ಇಂಗ್ಲೆಂಡ್‌ಗೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಅಲ್ಲದೆ ಶತಕವೀರ ಜಾನಿ ಬೈರ್‌ಸ್ಟೋವ್‌ (111 ರನ್‌) ಅವರೊಟ್ಟಿಗೆ ಮೊದಲ ವಿಕೆಟ್‌ಗೆ 160 ರನ್‌ಗಳ ಅಮೋಘ ಜೊತೆಯಾಟವನ್ನೂ ಆಡಿದರು.

ಅಂದಹಾಗೆ ಟೂರ್ನಿಯಲ್ಲಿ ಧೋನಿ ಈ ರೀತಿಯ ತಪ್ಪು ಮಾಡಿರುವುದು ಇದೇ ಮೊದಲಲ್ಲ. ಜೂನ್‌ 16ರಂದು ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆದ ಬಹು ನಿರೀಕ್ಷಿತ ಇಂಡೊ-ಪಾಕ್‌ ಪಂದ್ಯದಲ್ಲೂ ಧೋನಿ ಅವರಿಂದ ಇಂಥದ್ದೇ ತಪ್ಪಾಗಿತ್ತು. ಬಾಬರ್‌ ಆಝಮ್‌ ಅವರು ಎಲ್‌ಬಿಡಬ್ಲ್ಯು ಬಲೆಗೆ ಬಿದಿದ್ದರು. ಇಲ್ಲಿಯೂ ಡಿಆರ್‌ಎಸ್‌ ತೆಗೆದುಕೊಳ್ಳುವಲ್ಲಿ ಧೋನಿ ಹಿಂದೇಟಾಕಿದ್ದರು. ಟೆಲಿವಿಷನ್‌ ರೀಪ್ಲೇನಲ್ಲಿ ಆಝಮ್‌ ಔಟಾಗಿರುವುದು ಬೆಳಕಿಗೆ ಬಂದಿತ್ತು.

Story first published: Sunday, June 30, 2019, 20:54 [IST]
Other articles published on Jun 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+