ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡ ಧೋನಿ, ಗಂಭೀರ್ ಫೋಟೋ ವೈರಲ್
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೋಚ್ ಗೌತಮ್ ಗಂಭೀರ್ ಅವರ ಒಂದು ಫೋಟೋ ಸಾಮಾಜಿಕ ತಾಣದಲ್ಲಿ ಈಗ ಸಖತ್ ವೈರಲ್ ಆಗುತ್ತಿದೆ. ಈ ಇಬ್ಬರು ಸ್ಟಾರ್‌ಗಳು ಗುಜರಾತ್ ರಾಜ್ಯ ಸಚಿವ ಹರ್ಷಾ ಸಾಂಗ್ವಿ ಅವರ ಸಹೋದರ ಉತ್ಕರ್ಷ್ ಸಾಂಗ್ವಿ ಅವರ ಮದುವೆಯಲ್ಲಿ ಕಾಣಿಸಿಕೊಂಡರು.
ಈ ಕಾರ್ಯಕ್ರಮಕ್ಕಾಗಿ ಧೋನಿ ಹಸಿರು ಬಣ್ಣದ ಕೋಟ್ ಹಾಗೂ ಬಿಳಿ ಬಣ್ಣದ ಶರ್ಟ್ ಗಳನ್ನು ಹಾಕಿಕೊಡಿದ್ದ ಫೋಟೋ ಸಖತ್ ವೈರಲ್ ಆಗುತ್ತಿದೆ. ಇನ್ನು ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಬುದಿ ಬಣ್ಣದ ಶರ್ಟ್ ಹಾಕಿಕೊಂಡಿದ್ದನ್ನು ಕಾಣಬಹುದಾಗಿದೆ. ಧೋನಿ ಅವರ ಜೊತೆ ಅವರ ಪತ್ನಿ ಸಹ ಭಾಗವಾಗಿದ್ದರು. ಟೀಮ್ ಇಂಡಿಯಾದ ಕೋಚ್ ಗಂಭೀರ್ ಅವರು ಅಗಸ್ಟ್ 15 ರಂದು ಉಜ್ಜಯಿನಿಯ ಮಹಾಕಾಲ ದೇವಸ್ಥಾನದ ಭಸ್ಮಾರತಿಯಲ್ಲಿ ಭಾಗವಹಿಸಿದ್ದರು.

ಮೈದಾನದ ಹೊರಗಡೆ ಧೋನಿ ಹಾಗೂ ಗಂಭೀರ್ ಉತ್ತಮ ಸ್ನೇಹಿತರು. ಈ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಸಹ ಭಾಗವಹಿಸಿದ್ದರು. ಉಳಿದಂತೆ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ತಿಲಕ ವರ್ಮಾ,ಪರ್ಥಿವ್ ಪಾಟಿಲ್ ಅವರು ಸಹ ಉಪಸ್ಥಿತರಿದ್ದಾರೆ. ಇರ್ಫಾನ್ ಈ ವೇಳೆ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡರು.
ಕುಟುಂಬಸ್ಥರೊಂದಿಗೆ ಧೋನಿ ಸಮಯ
ಧೋನಿ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಕುಟುಂಬಸ್ಥರ ಜೊತೆ ಕಾಲವನ್ನು ಕಳೆಯುತ್ತಿದ್ದಾರೆ. ಇವರು ಈ ಮೊದಲು ದ್ವಿಚಕ್ರವಾಹವನ ಸವಾರಿಯ ವೇಳೆ ಕಾಣಿಸಿಕೊಂಡಿದ್ದರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದರೂ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕೆ ಇಳಿಯುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ರುತುರಾಜ್ ಗಾಯಕ್ವಾಡ್ ಗಾಯದಿಂದ ಹೊರ ನಡೆದಾಗ, ಮತ್ತೆ ಧೋನಿ ತಂಡವನ್ನು ಮನ್ನಡೆಸಿದ್ದರು.
ಧೋನಿ ಇತ್ತಿಚೀಗೆ ನಡೆದ ಕಾರ್ಯಕ್ರಮದಲ್ಲಿ ತಾವು ಇನ್ನು 10 ರಿಂದ 15 ವರ್ಷ ಚೆನ್ನೈ ಪರ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ನಾನು ನನ್ನ ಐಪಿಎಲ್ ಕರಿಯರ್ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಇನ್ನು ಸಮಯವಿದೆ. ಇನ್ನು ನಾನು ಹಳದಿ ಜೆರ್ಸಿಯಲ್ಲಿ ಕಣಕ್ಕೆ ಇಳಿಯುವೆ. ಇನ್ನು ಆಟಗಾರನಾಗಿ ಇಳಿಯುತ್ತೇನೆ ಇಲ್ಲವೋ ಎಂಬುದೇ ಪ್ರಶ್ನೆ ಎಂದು ಧೋನಿ ತಿಳಿಸಿದ್ದಾರೆ.
ಏಷ್ಯಾ ಕಪ್ ಸಿದ್ಧತೆ
ಟೀಮ್ ಇಂಡಿಯಾವನ್ನು ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯ ಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ತಂಡದ ಸಂಯೋಜನೆ ಹೇಗಿರಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಆರಂಭಿಕರಾಗಿ ಕಣಕ್ಕೆ ಇಳಿಯುವುದು ಯಾರು? ಫಿನಿಷರ್ ಪಾತ್ರದಲ್ಲಿ ಕಾಣಿಸಿಒಳ್ಳುವುದು ಯಾರು? ಯಾವೆಲ್ಲಾ ಯೋಜನೆಯಿಂದಿಗೆ ಈ ಬಾರಿ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ ಎಂಬ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಅಲ್ಲದೆ ಭಾರತ ತಂಢ ಎಷ್ಟು ಸ್ಪಿನ್ ಬೌಲರ್‌ಗಳಿಗೆ ಮಣೆ ಹಾಕಲಿದೆ ಎಂಬ ಪ್ರಶ್ನೆಗೆ ಸೆ.19ರಂದು ಉತ್ತರ ಸಿಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications