Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಾರಾ ಧೋನಿ?

ಗಾಯದ ಸಮಸ್ಯೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ, ಕೆಲ ದಿನಗಳಿಂದ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಮಾಜಿ ಟೀಮ್ ಇಂಡಿಯಾ ಆಟಗಾರನ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರೆ. ಇವರು ತಂಡಕ್ಕೆ ಎಂಟ್ರಿ ನೀಡಿದಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳಬಹುದು ಎಂಬ ಆಸೆ ಅಭಿಮಾನಿಗಳದ್ದಾಗಿದೆ.

ಸಿಎಸ್‌ಕೆ ಈ ವರೆಗೆ ಆಡಿದ ಎಲ್ಲ ಪಂದ್ಯಗಳನ್ನು ಧೋನಿ ಅವರ ಅನುಪಸ್ಥಿತಿಯಲ್ಲಿ ಆಡಿದೆ. ಧೋನಿ ಯಾವಾಗ ಸಂಪೂರ್ಣವಾಗಿ ಫಿಟ್ ಆಗುತ್ತಾರೆ ಎಂದು ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಿಎಸ್‌ಕೆ ತಂಡ ಏಪ್ರಿಲ್‌ 18 ರಂದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ತನ್ನ ಲೀಗ್‌ ಹಂತದ ಮುಂದಿನ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಧೋನಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.

Dhoni

ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎಸ್‌ಆರ್‌ಹೆಚ್ ವಿರುದ್ಧದ ಮುಂದಿನ ಪಂದ್ಯವನ್ನು ಆಡಲಿದೆ. ಈ ದೊಡ್ಡ ಪಂದ್ಯಕ್ಕೂ ಮುನ್ನ, ಸಿಎಸ್‌ಕೆ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಒಂದು ಬಂದಿದೆ. ಧೋನಿ ಎಸ್‌ಆರ್‌ಎಚ್‌ ಪಂದ್ಯಕ್ಕಾಗಿ ಹೈದರಾಬಾದ್‌ಗೆ ತಲುಪಿದ್ದಾರೆ. ಅಂದರೆ ಧೋನಿ ಮುಂದಿನ ಪಂದ್ಯಗಳಲ್ಲಿ ಡಗೌಟ್‌ ಅಥವಾ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ. ಈ ಆವೃತ್ತಿಯಲ್ಲಿ ಧೋನಿ ಹಳದಿ ಜೆರ್ಸಿಯಲ್ಲಿ ಕಣಕ್ಕೆ ಇಳಿದಿಲ್ಲ.

ಎಂಎಸ್ ಧೋನಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದು, ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಕಡಿಮೆ ಎಂದು ವರದಿಗಳು ಬಂದಿವೆ. ಹೈದರಾಬಾದ್‌ ವಿರುದ್ಧವೂ ಧೋನಿ ಪ್ಲೇಯಿಂಗ್ ಇಲೆವೆನ್‌ನಿಂದ ದೂರ ಉಳಿಯುವ ಸಾಧ್ಯತೆ ಇದೆ. ಸಿಎಸ್‌ಕೆ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್‌ 23 ರಂದು ವಾಂಖೆಡೆ ಮೈದಾನದಲ್ಲಿ ಆಡಲಿದ್ದು, ಈ ಪಂದ್ಯದಲ್ಲಿ ಧೋನಿ ಕಣಕ್ಕೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ. ಅವರು ಯಾವಾಗ ಸಂಪೂರ್ಣವಾಗಿ ಫಿಟ್ ಆಗುತ್ತಾರೆ ಎಂಬ ಪ್ರಶ್ನೆಗಳು ಮೂಡಿವೆ.

ಹೇಗಿದೆ ಸಿಎಸ್‌ಕೆ ಪ್ರದರ್ಶನ?

ಪ್ರಸ್ತುತ ಐಪಿಎಲ್ ಋತುವಿನಲ್ಲಿ ಸಿಎಸ್‌ಕೆ ತನ್ನ ಮೊದಲ ಮೂರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿತು. ಬಳಿಕ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಚೇತರಿಸಿಕೊಂಡಿದೆ. ಸಿಎಸ್‌ಕೆ ಪ್ರಸ್ತುತ ಐಪಿಎಲ್ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

Story first published: Thursday, April 16, 2026, 19:46 [IST]
Other articles published on Apr 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+