For Quick Alerts
ALLOW NOTIFICATIONS  
For Daily Alerts
 

ಧೋನಿ ಅಸಮಾಧಾನಕ್ಕೆ ಗುರಿಯಾಗಿರುವ ಆಟಗಾರ ಯಾರು?

ಪರ್ತ್, ಮಾ. 7: ವಿಶ್ವಕಪ್ ಅಭಿಯಾನದಲ್ಲಿ ಭಾರತ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಆದರೆ ನಾಯಕ ಎಂಎಸ್ ಧೋನಿ ಮಾತ್ರ ತಂಡದ ಒಬ್ಬ ಆಟಗಾರನ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದಾರೆ.

ಹೌದು.. ಆಲ್ ರೌಂಡರ್ ರವಿಂದ್ರ ಜಡೇಜಾ ಪ್ರದರ್ಶನ ಧೋನಿಗೆ ಬೇಸರ ತಂದಿದೆ. ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ವಿಕೆಟ್ ಅಂತರದ ಜಯ ಸಾಧಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಧೋನಿ, ಜಡೇಜಾ ಬಳಿ ಪ್ರತಿಭೆಯಿದೆ, ಇನ್ನುಳಿದ ಪಂದ್ಯಗಳಲ್ಲಿ ಅದನ್ನು ಸಾಬೀತು ಮಾಡಬೇಕಿದೆ ಎಂದು ಹೇಳಿದ್ದಾರೆ.[ಭಾರತದ ಅದೃಷ್ಟ ಮತ್ತು ಜಡೇಜ ಗಡ್ಡದ ರಹಸ್ಯ]

cricket

ನಾಯಕ ಅಸಮಾಧಾನ ವ್ಯಕ್ತಪಡಿಸಲು ಕಾರಣವಿದೆ. ಜಡೇಜಾ ಬ್ಯಾಟ್ ನಿಂದ ರನ್ ಹರಿಯುತ್ತಿಲ್ಲ. ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ ಜಡೇಜಾ 3, 2 ಮತ್ತು 13 ರನ್ ಗಳಿಸಿರುವುದೇ ಇದಕ್ಕೆ ಕಾರಣ. [ಗಡ್ಡವಿಲ್ಲದ ಹೆಂಗಸರೂ ಚೆನ್ನಾಗಿ ಕಾಣಿಸ್ತಾರೆ!]

ವೆಸ್ಟ್ ಇಂಡೀಸ್ ವಿರುದ್ಧ ಭಾರತ ವಿಕೆಟ್ ಗಳನ್ನು ಕಳೆದುಕೊಂಡು ಸಾಗುತ್ತಿದ್ದಾಗ ನಾಯಕನಿಗೆ ಆಲ್ ರೌಂಡರ್ ಜಡೇಜಾ ಸಾಥ್ ನೀಡಲಿಲ್ಲ. ಆರ್. ಅಶ್ವಿನ್ ಜೊತೆಯಾಟದಲ್ಲಿ ಪಂದ್ಯ ಮುಕ್ತಾಯ ಮಾಡಬೇಕಾದ ಅನಿವಾರ್ಯ ಎಂಎಸ್ ಧೋನಿಗೆ ಉಂಟಾಯಿತು.[ಸಾಕ್ಷಿ-ಧೋನಿ ದಂಪತಿ ಮಗಳು 'ಝೀವಾ' ಹೇಗಿದ್ದಾಳೆ?]

ಜಡೇಜಾ ತನ್ನ ಪ್ರದರ್ಶನದಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ನಾವು ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೇವೆ. ಕೊನೆಯಲ್ಲಿ ಲೆಕ್ಕಕ್ಕೆ ಬರುವುದು ಪ್ರದರ್ಶನ ಮಾತ್ರ ಎಂದು ವಿಂಡೀಸ್ ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಧೋನಿ ಹೇಳಿದರು.

ಜಡೇಜಾ ಶಾರ್ಟ್ ಪಿಚ್ ಬಾಲ್ ಗಳನ್ನು ಆಡುವುದರ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೂರು ತ್ರಿಶತಕ ಗಳಿಸಿದವರಿಗೆ ಇದು ಅಸಾಧ್ಯವೇನಲ್ಲ ಎಂದು ಸಲಹೆ ನೀಡಿದ್ದಾರೆ.

ಜಡೇಜಾ ಸ್ಥಾನ ತುಂಬಲು ಮತ್ತೊಬ್ಬ ಎಡಗೈ ಆಲ್ ರೌಂಡರ್ ಅಕ್ಷರ್ ಪಟೇಲ್ ಸಿದ್ಧವಾಗಿ ನಿಂತಿದ್ದಾರೆ. ಆದರೆ ಜಡೇಜಾ ಸ್ಪಿನ್ ಬೌಲಿಂಗ್ ಅವರಿಗೆ ಸ್ಥಾನ ಖಚಿತಪಡಿಸಿದೆ. ಮುಂದಿನ ಪಂದ್ಯಗಳಲ್ಲಿ ಜಡೇಜಾ ಪ್ರದರ್ಶನದಲ್ಲಿ ಬದಲಾವಣೆಯಾಗುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+