Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಂಗಳೂರು ಬಾಲಿವುಡ್ ಸಿನ್ಮಾ ನೋಡಿದ ಧೋನಿ ಅಂಡ್ ಟೀಂ

ಬೆಂಗಳೂರು, ಸೆ.25: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸುದೀರ್ಘ ಸರಣಿಗೆ ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ತರಬೇತಿ ಶಿಬಿರದಿಂದ ಬಿಡುವು ಮಾಡಿಕೊಂಡ ಕ್ರಿಕೆಟರ್ಸ್ , ಬಾಲಿವುಡ್ ಸಿನ್ಮಾ ನೋಡಿ ನಕ್ಕು ನಲಿದಿದ್ದಾರೆ.

ಟಾಕ್ ಶೋ ಖ್ಯಾತಿಯ ಕಪಿಲ್ ಶರ್ಮ ಅಭಿನಯದ 'ಕಿಸ್ ಕಿಸ್ಕೋ ಪ್ಯಾರ್ ಕರೋ' ಚಿತ್ರವನ್ನು ಧೋನಿ ಹಾಗೂ ತಂಡ ವೀಕ್ಷಿಸಿದೆ. ಶುಕ್ರವಾರ ಬಿಡುಗಡೆಯಾಗಿರುವ ಹಿಂದಿ ಚಿತ್ರವನ್ನು ಧೋನಿ ಹಾಗೂ ಇತರೆ ಆಟಗಾರರು ಗುರುವರ ರಾತ್ರುಯೇ ವೀಕ್ಷಿಸಿದ್ದಾರೆ. ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಫಿಲ್ಮ್ ಸ್ಟುಡಿಯೋದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

Dhoni, Raina, Harbhajan and others watch 'Kis Kisko Pyaar Karoon'

ಹರ್ಭಜನ್ ಸಿಂಗ್ ಸಾರಥ್ಯ: ಕಪಿಲ್ ಶರ್ಮ ಅವರ ಆಪ್ತ ಗೆಳೆಯರಾದ ಹರ್ಭಜನ್ ಸಿಂಗ್ ಅವರು ಧೋನಿ ಹಾಗೂ ತಂಡವನ್ನು ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು. ಟೀಂ ಇಂಡಿಯಾದ ಆಟಗಾರರು ನನ್ನ ಚಿತ್ರ ವೀಕ್ಷಿಸಲು ಬಿಡುವು ಮಾಡಿಕೊಂಡು ಬಂದಿದ್ದು ನನ್ನ ಪುಣ್ಯ ಎಂದು 'ಕಾಮಿಡಿ ನೈಟ್ಸ್' ಸ್ಟಾರ್ ಕಪಿಲ್ ಅವರು ಟ್ವೀಟ್ ಮಾಡಿದ್ದಾರೆ.[ಗಾಂಧಿ-ಮಂಡೇಲಾ ಸರಣಿ: ರಾಜ್ಯದ ಅರವಿಂದ್‌ಗೆ ಸ್ಥಾನ]

ಟೀಂ ಇಂಡಿಯಾ ಆಟಗಾರರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ( ಎನ್ ಸಿಎ) ಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 27ರಂದು ಈ ತರಬೇತಿ ಶಿಬಿರ ಕೊನೆಗೊಳ್ಳಲಿದೆ.


ಅಕ್ಟೋಬರ್ 2 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ.

ತಂಡದ ಸದಸ್ಯರಾದ ವಿರಾಟ್ ಕೋಹ್ಲಿ, ಸುರೇಶ್ ರೈನಾ, ಹರ್ಭಜನ್ ಸಿಂಗ್, ಅಜಿಂಕ್ಯಾ ರಹಾನೆ ಸೇರಿದಂತೆ ತಂಡದ ಎಲ್ಲಾ ಅಟಗಾರ ಸಿನಿಮಾ ವೀಕ್ಷಣೆಯಲ್ಲಿ ಭಾಗಿಯಾಗಿದ್ದರು.


ಕ್ರಿಕೆಟರ್ಸ್ ಜೊತೆಗೆ ಕಪಿಲ್ ಶರ್ಮಾರ ಪಕ್ಕಾ ಅಭಿಮಾನಿಯಾಗಿರುವ ವಿಶ್ವದ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಕಪಿಲ್ ಶರ್ಮಾರ ಹಾಸ್ಯಮಯ ಚಿತ್ರ ನೋಡಿ ಎಂಜಾಯ್ ಮಾಡಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+