ಧೋನಿ ತಂಡದ ಮೀಟಿಂಗ್‌ಗಳು 2 ನಿಮಿಷಕ್ಕೆ ಹೆಚ್ಚಿರುತ್ತಿರಲಿಲ್ಲ: ಪಾರ್ಥಿವ್

ಬೆಂಗಳೂರು, ಮೇ 28: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಲ್ಲಿದ್ದ ಪಾರ್ಥಿವ್ ಪಟೇಲ್, ತಂಡದ ನಾಯಕ ಎಂಎಸ್ ಧೋನಿ ತಂಡವನ್ನು ಹೇಗೆ ನಿಭಾಯಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಕೂಲ್ ಕ್ಯಾಪ್ಟನ್ ಧೋನಿ ಒಂದೆರಡು ನಿಮಿಷಗಳಿಗೆ ಹೆಚ್ಚು ಕಾಲ ತಂಡದ ಮೀಟಿಂಗ್ ನಡೆಸುತ್ತಿರಲಿಲ್ಲ ಎಂದಿದ್ದಾರೆ.
ಐಪಿಎಲ್ ಆರಂಭಿಕ ಸೀಸನ್‌ನಲ್ಲಿ ಸಿಎಸ್‌ಕೆ ತಂಡದಲ್ಲಿದ್ದ ಪಾರ್ಥಿವ್ ಪಟೇಲ್ ಆ ಆವೃತ್ತಿಯಲ್ಲಿ ಚೆನ್ನೈ ತಂಡ ಫೈನಲ್‌ಗೆ ಬರಲು 13 ಪಂದ್ಯಗಳಲ್ಲಿ 302 ರನ್‌ಗಳ ಕೊಡುಗೆ ನೀಡಿದ್ದರು. ಫೈನಲ್ ಪಂದ್ಯ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದಿತ್ತು. ಆರಂಭಿಕ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆಗಿ ಮಿನುಗಿತ್ತು.
ತಾನು ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟು ಬೇರೆ ಬೇರೆ ತಂಡಗಳ ಪರ ಆಡಿದ್ದರೂ ಧೋನಿಯ ನಾಯಕತ್ವದಲ್ಲಿ ಇಲ್ಲೀವರೆಗೂ ಕೆಲವೊಂದು ವಿಚಾರಗಳು ಬದಲಾಗದಿರುವುದನ್ನು ಗಮನಿಸಿರುವುದಾಗಿ ಪಾರ್ಥಿವ್ ಹೇಳಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಯಶಸ್ವಿ ತಂಡವಾಗಿ ಗುರುತಿಸಿಕೊಳ್ಳಲು ಇಂಥ ಅಂಶಗಳು ಕಾರಣ ಎಂದು ಪಟೇಲ್ ಹೇಳಿದ್ದಾರೆ.
'ತಂಡದ ಮೀಟಿಂಗ್‌ಗಳು ಬರೀ ಎರಡೇ ನಿಮಿಗಳಲ್ಲಿ ಮುಯುತ್ತವೆ. 2018ರಲ್ಲಿ ಫೈನಲ್ ವೇಳೆ ಧೋನಿ ಮುಂದಾಳತ್ವದ ಸಿಎಸ್‌ಕೆ ತಂಡದ ಮೀಟಿಂಗ್ ಕೇವಲ 2 ನಿಮಿಷದಲ್ಲಿ ಮುಗಿತ್ತು. 2019ರಲ್ಲೂ ಮೀಟಿಂಗ್ 2 ನಿಮಿಷದಲ್ಲಿ ಮಿಗಿದಿತ್ತು ಅಂತ ನಾನು ನಿಖರವಾಗಿ ಹೇಳಬಲ್ಲೆ. ತಂಡದ ಆಟಗಾರರು ಏನನ್ನು ಬಯಸುತ್ತಾರೆ ಅಂತ ಧೋನಿ ಸ್ಪಷ್ಟವಾಗಿ ಅರಿತಿದ್ದರು,' ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಪಾರ್ಥಿವ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications