ಧೋನಿ ಒಬ್ಬ ಸೈನಿಕ, ಕೈಬೆರಳಿನ ಗಾಯ ಸಮಸ್ಯೆಯೇ ಅಲ್ಲವಂತೆ!

ಲಂಡನ್, ಜುಲೈ 04: ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಕೈಬೆರಳಿಗೆ ಗಾಯವಾಗಿ ಅವರು ಹೆಬ್ಬೆರಳನ್ನು ಚೀಪಿ ರಕ್ತ ಹೀರಿ ಉಗುಳಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಅಭಿಮಾನಿಗಳಲ್ಲಿ ಧೋನಿ ಅವರಿಗೂ ಗಾಯದ ಸಮಸ್ಯೆ ಎದುರಾಯಿತೇ ಎಂಬ ಆತಂಕ ಮನೆ ಮಾಡಿತ್ತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಈಗಾಗಲೇ ಭಾರಿ ಹೊಡೆತ ಕಂಡಿದ್ದು, ಹೆಬ್ಬೆರಳಿನ ಮೂಳೆಯಲ್ಲಿ ಬಿರುಕು ಕಂಡ ಕಾರಣ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಈಗಾಗಲೇ ಹೊರ ನಡೆದಿದ್ದು, ಪಾದದ ಗಾಯದ ಸಮಸ್ಯೆ ಕಾರಣ ವಿಜಯ್ ಶಂಕರ್ ಕೂಡ ನಿರ್ಗಮಿಸಿದ್ದಾರೆ.
ಇದೀಗ ಧೋನಿ ಕೂಡ ನಿರ್ಗಮಿಸುತ್ತಾರ? ಎಂದೆಲ್ಲಾ ಅಭಿಮಾನಿಗಳ ಮನದಲ್ಲಿ ಭಯ ಶುರುವಾಗಿದೆ. ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್ಸ್ ಹಂತಕ್ಕೆ ಕಾಲಿಟ್ಟಿದ್ದು ಈ ಹಂತದಲ್ಲಿ ಧೋನಿ ಸೇವೆ ಇಲ್ಲವಾದರೆ ತಂಡದ ಗತಿಯೇನು ಎಂಬುದು ಟೀಮ್ ಇಂಡಿಯಾ ಫ್ಯಾನ್ಸ್‌ನ ಆತಂಕವಾಗಿದೆ.
ಅಂದಹಾಗೆ ಭಯ ಪಡುವ ಪರಿಯೇ ಇಲ್ಲ. ಧೋನಿ ಅವರ ಗಾಯದ ಸಮಸ್ಯೆ ಅಷ್ಟು ಗಂಭೀರ ಸ್ವರೂಪದ್ದಲ್ಲ ಎಂದು ಟೀಮ್ ಇಂಡಿಯಾದ ಅಧಿಕಾರಿಗಳು ಅಭಯ ಹಸ್ತ ಸೂಚಿಸಿದ್ದಾರೆ.
"ಅವರು ಪರ್ವತದಂತೆ. ಅವರು ಸೈನಿಕರಂತೆ. 300 ಏಕದಿನ ಪಂದ್ಯಗಳನ್ನು ಆಡಿರುವ ಅವರಿಗೆ ಇಷ್ಟು ಸಣ್ಣ ಗಾಯದ ಸಮಸ್ಯೆ ಕಾಡುತ್ತದೆ ಎಂದು ನಿಮಗೆ ನಿಜವಾಗಿಯೂ ಅನಿಸಿದೆಯೇ? ನೋವನ್ನು ತಡೆಯುವ ಅದ್ಭುತ ಶಕ್ತಿ ಅವರಲ್ಲಿದೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಅವರ ಕೈಬೆರಳಿಗೆ ಏನೂ ಆಗಿಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ,'' ಎಂದು ತಂಡದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಂಬಾಟಿ ರಾಯುಡು ನಿವೃತ್ತಿ ಬಗ್ಗೆ ಗುಡುಗಿದ ಗೌತಮ್ ಗಂಭೀರ್!
ಭಾರತ ತಂಡ ವಿಶ್ವಕಪ್‌ನಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಇದೇ ಶನಿವಾರ ಆಡಲಿದ್ದು, ಇಲ್ಲಿ ಭಾರಿ ಅಂತರದ ಜಯ ದಾಖಲಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications