ಧೋತಿ-ಕುರ್ತಾ ಕಟ್ಟಿ ಕ್ರಿಕೆಟ್ ಆಡಿದ ಆಟಗಾರರು; ವಿಶಿಷ್ಟ ಕ್ರಿಕೆಟ್ ಟೂರ್ನಿ ವಿಜೇತ ತಂಡಕ್ಕೆ ಅಯೋಧ್ಯೆ ಭೇಟಿ ಚಾನ್ಸ್
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಇದೇ ಜನವರಿ 22ರಂದು ರಾಮಲಲ್ಲಾ ಪ್ರತಿಷ್ಠಾಪನೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಗುತ್ತದೆ.
ರಾಮ ಮಂದಿರ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ನೆರವೇರಿಸಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅದರಲ್ಲೂ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೂ ಆಹ್ವಾನಿಸಲಾಗಿದೆ.

ಇದೇ ವೇಳೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಂಸ್ಕೃತಿ ಬಚಾವೋ ಮಂಚ್‌ನಿಂದ ವಿಶಿಷ್ಟವಾದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಇದರಲ್ಲಿ ಆಡಿದ ಆಟಗಾರರು ಜರ್ಸಿ ಮತ್ತು ಲೋವರ್‌ಗಳ ಬದಲಿಗೆ 'ಧೋತಿ' ಮತ್ತು 'ಕುರ್ತಾ' ಧರಿಸಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆದಿದೆ.
ಭೋಪಾಲ್‌ನಲ್ಲಿ ಆಯೋಜಿಸಲಾದ ವಿಶಿಷ್ಟ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ.
ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಕಾಮೆಂಟರಿಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ನಡೆಸದೆ ಸಂಸ್ಕೃತ ಭಾಷೆಯಲ್ಲಿ ನಡೆಸಲಾಗುತ್ತಿದೆ.
ಈ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ವಿಜೇತ ತಂಡದ ಆಟಗಾರರನ್ನು ಸಂಸ್ಕೃತಿ ಸಂರಕ್ಷಣಾ ವೇದಿಕೆಯಿಂದ ಸಾಂಸ್ಕೃತಿಕ ಭೇಟಿಗಾಗಿ ಅಯೋಧ್ಯೆಗೆ ಕರೆದೊಯ್ಯಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications