ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ಮುಗಿದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದೆ. ಈ ರೋಚಕ ಪಂದ್ಯ ಗೆಲ್ಲುವ ಮೂಲಕ ಶುಭಮನ್ ಗಿಲ್ ಪಡೆ 5 ಪಂದ್ಯಗಳ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾದ ಯುವ ಆಟಗಾರರು ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಧ್ರುವ್ ಜುರೇಲ್ ಅವರು ಏಕೆ ಧೋನಿ ಗೇಮ್ ಪ್ಲ್ಯಾನ್ ಏಕೆ ಫಾಲೋ ಮಾಡಲಿಲ್ಲ ಎಂಬ ಚರ್ಚೆಗಳು ಆರಂಭವಾಗಿವೆ. ಹಾಗಿದ್ದರೆ ಆ ಗೇಮ್ ಪ್ಲ್ಯಾನ್ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ಕೊನೆಯ ದಿನದಾಟದಕ್ಕೆ ಕಾಲಿಟ್ಟಾಗ ರೋಚಕತೆ ಮನೆ ಮಾಡಿತ್ತು. ಈ ಸರಣಿಯ ಎಲ್ಲ ಟೆಸ್ಟ್ ಕೊನೆಯ ದಿನದವರೆಗೆ ಹೋಗಿವೆ. ಹೀಗಾಗಿ ಐದನೇ ದಿನದಾಟದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ಗಳು ತಮ್ಮ ಕರಾರುವಾಕ್ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು. 35 ರನ್ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಬೃಹತ್ ಮೊತ್ತದಂತೆ ಕಾಣಲು ಆರಂಭವಾಯಿತು. ಈ ಪಂದ್ಯ ಓವರ್ ನಿಂದ ಓವರ್‌ಗೆ ರೋಚಕತೆ ಹೆಚ್ಚಿಸಿತ್ತು.

ಟೀಮ್ ಇಂಡಿಯಾದ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣಾ ಅವರ ಮೊನಚಾದ ದಾಳಿಯನ್ನು ಎದುರಿಸುವಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ವಿಫಲರಾದರು. ಅಲ್ಲದೆ ಟೀಮ್ ಇಂಡಿಯಾ 9 ಓವರ್ ಬೌಲ್ ಮಾಡಿ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿಯಿತು. ಈ ಪಂದ್ಯದಲ್ಲಿ ಧ್ರುವ್ ಜುರೇಲ್ ಆ ಒಂದು ಕೆಲಸವನ್ನು ಮೊದಲೇ ಮಾಡಿದ್ದರೇ ಟೀಮ್ ಇಂಡಿಯಾ ಇನ್ನು ಮೊದಲೇ ಪಂದ್ಯವನ್ನು ಗೆಲ್ಲಬಹುದಿತ್ತು.
ಇಂಗ್ಲೆಂಡ್ ತಂಡದ 9 ವಿಕೆಟ್‌ಗಳು ಬಿದ್ದಾಗ ಗಸ್ ಅಟ್ಕಿನ್ಸನ್ ಹಾಗೂ ಕ್ರಿಸ್ ವೋಕ್ಸ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಕ್ರಿಸ್ ವೋಕ್ಸ್ ಗಾಯಕ್ಕೆ ತುತ್ತಾಗಿದ್ದರಿಂದ ಮೊದಲ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಆದರೆ ಎರಡನೇ ಇನಿಂಗ್ಸ್‌ನಲ್ಲಿ ತಂಡಕ್ಕೆ ಅಗತ್ಯತೆ ಇದ್ದಿದ್ದರಿಂದ ಪ್ಯಾಡ್ ಕಟ್ಟಿಕೊಂಡು ಮೈದಾನಕ್ಕೆ ಇಳಿದರು. ಆದರೆ ಇವರು ಒಂದೇ ಕೈಯಲ್ಲಿ ಬ್ಯಾಟ್ ಮಾಡಬೇಕಿತ್ತು. ಗಸ್ ಅಟ್ಕಿನ್ಸನ್ ಸಂಪೂರ್ಣ ಸ್ಟ್ರೈಕ್ ತಮ್ಮ ಬಳಿ ಉಳಿಸಿಕೊಳ್ಳುವ ಅನಿವಾರ್ಯತೆ ಇತ್ತು.
ರೋಚಕ ಹಂತದಲ್ಲಿ ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರರ ಮೈ ಎಲ್ಲಾ ಕಣ್ಣಾಗಿತ್ತು. ಆದರೆ ಧ್ರುವ್ ಜುರೇಲ್ ಆ ಒಂದು ಕೆಲಸ ಮಾಡಿದ್ದರೆ, ಅವರು ಸಹ ಹೀರೋ ಆಗುತ್ತಿದ್ದರು. 84ನೇ ಓವರ್ ಬೌಲ್ ಮಾಡಲು ಸಿರಾಜ್ ಮುಂದಾದರು. ಹೇಗಿದ್ರೂ ಗಸ್ ಅಟ್ಕಿನ್ಸನ್ ಸ್ಟ್ರೈಕ್ ಉಳಿಸಿಕೊಳ್ಳಬೇಕಿತ್ತು. ಇದನ್ನೇ ಅರಿತು ಸಿರಾಜ್ ಈ ಓವರ್‌ನ ಕೊನೆಯ ಎಸೆತವನ್ನು ಹಾಫ್ ಸ್ಟಂಪ್ ಆಚೆಗೆ ಎಸೆದರು. ಆಗ ಗಸ್ ಅಟ್ಕಿನ್ಸನ್ ಇದಕ್ಕೆ ಉತ್ತರಿಸುವಲ್ಲಿ ವಿಫಲರಾಗಿ ಬಿಟ್ ಆದರು. ಪರಿಣಾಮ ಚೆಂಡು ವಿಕೆಟ್ ಕೀಪರ್ ಧ್ರುವ್ ಜುರೇಲ್ ಕೈ ಸೇರಿತು. ಜುರೇಲ್ ಥ್ರೋ ಮಾಡಿದ್ರೂ ಸಹ ಚೆಂಡು ಸ್ಟಂಪ್‌ಗೆ ತಾಗಲಿಲ್ಲ.
ಇಂತಹದ್ದೇ ಸನ್ನವೇಶದಲ್ಲಿ ಒಮ್ಮೆ ಟೀಮ್ ಇಂಡಿಯಾ ಸಿಲುಕಿಕೊಂಡಿತ್ತು. ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟಿ20 ವಿಶ್ವಕಪ್ 2016ರ ಮಹತ್ವದ ಪಂದ್ಯ. ಈ ಪಂದ್ಯ ಗೆಲ್ಲಲು ಬಾಂಗ್ಲಾಗೆ ಒಂದು ರನ್ ಅವಶ್ಯಕತೆ ಇತ್ತು. ಹಾರ್ದಿಕ್ ಪಾಂಡ್ಯ ಸಹ ಇದೇ ರೀತಿ ಔಟ್ ಸೈಡ್ ಹಾಫ್ ಸ್ಟಂಪ್ ಚೆಂಡನ್ನು ಎಸೆದರು. ಆಗ ಮಹೇಂದ್ರ ಸಿಂಗ್ ಧೋನಿ ಅದಾಗಲೇ ಬಲಗೈ ಗ್ಲೌಸ್ ತೆಗೆದು ಇಟ್ಟಿದ್ದರು. ಹೀಗಾಗಿ ಇವರು ನೇರವಾಗಿ ಥ್ರೊ ಸ್ಟಂಪ್‌ಗೆ ಮಾಡಲು ಸಫಲರಾದರು. ಈ ಕಾರ್ಯವನ್ನು ಧ್ರುವ್ ಜುರೇಲ್ ಈ ಪಂದ್ಯದಲ್ಲಿ ಮಾಡಬೇಕಿತ್ತು.