For Quick Alerts
ALLOW NOTIFICATIONS  
For Daily Alerts
 

ಧ್ರುವ್ ಜುರೆಲ್ ಯಾರು?; ಸೇನೆಯ ಹವಾಲ್ದಾರ್ ತಂದೆಯ ಕೋಪಕ್ಕೆ ಗುರಿಯಾದ ಮಗ ಇದೀಗ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ!

ಉತ್ತರಪ್ರದೇಶದ ಯುವ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ಧ್ರುವ್ ಜುರೆಲ್ ಕೆಲವೇ ದಿನಗಳಲ್ಲಿ ಹೈದರಾಬಾದ್‌ಗೆ ವಿಮಾನ ಏರಲಿದ್ದಾರೆ. ಆ ವಿಮಾನದಲ್ಲಿ ಭಾರತ ಕ್ರಿಕೆಟ್‌ನ ಸ್ಟಾರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಸೇರಿದಂತೆ ಹಲವು ಆಟಗಾರರ ಪಕ್ಕದಲ್ಲಿ ಕುಳಿತುಕೊಳ್ಳಲಿದ್ದಾರೆ.

ಈ ವಿಮಾನ ಏರುವುದು ಸಾಮಾನ್ಯ ವಿಷಯವೇನಲ್ಲ, ಇದಕ್ಕೆ ಕನಸು ಕಾಣಬೇಕು ಮತ್ತು ಆ ಕನಸಿಗೆ ತಕ್ಕಂತೆ ಹೆಜ್ಜೆ ಹಾಕಬೇಕು. ಬಾಲ್ಯದಲ್ಲಿ ಧ್ರುವ್ ಜುರೆಲ್ ಕಂಡ ಕನಸಿಗೆ ಕಠಿಣ ಶ್ರಮವಹಿಸಿದನು ಮತ್ತು ಆ ಕನಸು ಈಗಾಗಲೇ ಅರ್ಧದಷ್ಟು ನನಸಾಗಿದೆ.

Dhruv Jurel: Picked for Indian Test Cricket Team Despite Fathers Upset in the Army

ಹೌದು. ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧದ ಭಾರತ ಟೆಸ್ಟ್ ತಂಡದಲ್ಲಿ ಧ್ರುವ್ ಜುರೆಲ್ ಅವರನ್ನು ಕೆಎಲ್ ರಾಹುಲ್, ಕೆಎಸ್ ಭರತ್‌ ಅವರೊಂದಿಗೆ ಮೂರನೇ ವಿಕೆಟ್ ಕೀಪಿಂಗ್ ಆಯ್ಕೆಯಾಗಿ ಪ್ರಕಟಿಸಲಾಗಿದ್ದು, 22ರ ಹರೆಯದ ಈ ಯುವ ಕ್ರಿಕೆಟಿಗನ ಕನಸು ಇದೀಗ ನನಸಾಗಿದೆ.

ತಂದೆಗೆ ಸುಳ್ಳು ಹೇಳಿ ಬೈಸಿಕೊಂಡಿದ್ದ ಧ್ರುವ್ ಜುರೆಲ್

ಧ್ರುವ್ ಜುರೆಲ್ ಚಿಕ್ಕವನಿದ್ದಾಗ, ತನ್ನ ಶಾಲೆಯಲ್ಲಿ ಈಜು ತರಗತಿಗೆ ಹೋಗುವುದಾಗಿ ತನ್ನ ತಂದೆಗೆ ಸುಳ್ಳು ಹೇಳಿದ್ದನು. ಅವನು ಕ್ರಿಕೆಟ್ ಕೋಚಿಂಗ್‌ಗೆ ಸೇರಿಕೊಂಡಿದ್ದಾನೆ ಎಂದು ತಂದೆಗೆ ತಿಳಿದಾಗ, ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದ ಅವನ ತಂದೆ ಕೋಪಗೊಂಡಿದ್ದರು ಮತ್ತು ಹಿಗ್ಗಾಮುಗ್ಗಾ ಬೈಸಿಕೊಂಡಿದ್ದನು.

ಆದರೆ, ಶೀಘ್ರದಲ್ಲೇ ತನ್ನ ಮಗನಿಗೆ ಕ್ರಿಕೆಟ್ ಬಗ್ಗೆ ಉತ್ಸಾಹವಿದೆ ಎಂದು ತಂದೆ ಅರಿತುಕೊಂಡನು. ಮಗನ ಕನಸನ್ನು ಪೋಷಿಸಲು ಅವಕಾಶ ಮಾಡಿಕೊಟ್ಟರು. ಧ್ರುವ್ ಜುರೆಲ್‌ಗೆ ಬ್ಯಾಟ್ ಬೇಕು ಎಂದಾಗ, ಆತನ ಹವಾಲ್ದಾರ್ ತಂದೆ ಅದನ್ನು ಕೊಡಿಸಲು ತನ್ನ ಸ್ನೇಹಿತರಿಂದ 800 ರೂಪಾಯಿ ಸಾಲ ಪಡೆದರು.

Dhruv Jurel: Picked for Indian Test Cricket Team Despite Fathers Upset in the Army

ಹಣಕಾಸಿನ ವಿಚಾರವೇ ದೊಡ್ಡ ಸಮಸ್ಯೆಯಾಗಿರುವ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಧ್ರುವ್ ಜುರೆಲ್, ತನ್ನ ತಂದೆ ಇತರರಿಗೆ ಸೆಲ್ಯೂಟ್ ಮಾಡುವುದನ್ನು ನೋಡಲು ದ್ವೇಷಿಸುತ್ತಿದ್ದ. ತನ್ನ ತಂದೆ ಒಂದು ದಿನ ಯಾರಿಗೂ ಸೆಲ್ಯೂಟ್ ಮಾಡಬೇಕಾಗಿಲ್ಲ ಎಂದುಕೊಂಡ ಧ್ರುವ್ ಜುರೆಲ್, ತನ್ನ ಕ್ರಿಕೆಟ್‌ನಲ್ಲಿ ಶ್ರಮಿಸಲು ಪ್ರಾರಂಭಿಸಿದ.

ಆರಂಭದಲ್ಲಿ ಅವರ ತಂದೆ ಧ್ರುವ್ ಸರ್ಕಾರಿ ನೌಕರಿ ಪಡೆಯುವತ್ತ ಗಮನ ಹರಿಸಬೇಕೆಂದು ಬಯಸಿದ್ದರು ಮತ್ತು ಕ್ರಿಕೆಟ್ ಮುಂದುವರಿಸುವುದನ್ನು ನಿಲ್ಲಿಸುವಂತೆ ಧ್ರುವ್ ಜುರೆಲ್‌ಗೆ ಹೇಳಿದ್ದರು. ಆದರೆ ಮಗ ಆಗಲೇ ಕ್ರಿಕೆಟ್‌ನತ್ತ ಮನಸ್ಸು ಕೇಂದ್ರಿಕರಿಸಿದ್ದ.

ಮನೆಯಲ್ಲಿ ಹಣಕಾಸಿನ ಸಮಸ್ಯೆಯಿಂದ ತಂದೆ ಅಸಹಾಯಕರಾಗಿದ್ದರು. ಒಮ್ಮೆ ಧ್ರುವ್ ಜುರೆಲ್ ತನ್ನ ತಂದೆಗೆ ಕ್ರಿಕೆಟ್ ಕಿಟ್ ಬೇಕೆಂದು ಕೇಳಿದಾಗ, ಅವನ ಆಸೆಯನ್ನು ನಿರಾಕರಿಸಲಾಯಿತು.

ಕ್ರಿಕೆಟ್ ಆಡುವುದನ್ನು ನಿಲ್ಲಿಸುವಂತೆ ಒತ್ತಾಯ

"ಕ್ರಿಕೆಟ್‌ ಕಿಟ್‌ಗೆ ಸುಮಾರು 8,000 ರೂಪಾಯಿ ವೆಚ್ಚವಾಗಲಿದೆ ಎಂದು ನಾನು ನನ್ನ ತಂದೆಗೆ ಹೇಳಿದ್ದೇನೆ ಮತ್ತು ಬೆಲೆ ಕೇಳಿದ ನಂತರ ಅವರು ಆಘಾತಕ್ಕೊಳಗಾದರು ಮತ್ತು ಕ್ರಿಕೆಟ್ ಆಡುವುದನ್ನು ನಿಲ್ಲಿಸುವಂತೆ ನನ್ನನ್ನು ಒತ್ತಾಯಿಸಿದರು," ಎಂದು ಧ್ರುವ್ ಜುರೆಲ್ ಹೇಳಿದ್ದನ್ನು ದೈನಿಕ್ ಜಾಗರಣ್ ವರದಿ ಮಾಡಿದೆ.

ಆಗ ಧ್ರುವ್ ತಾಯಿ ಚಿನ್ನಾಭರಣವನ್ನು ಮಾರಾಟ ಮಾಡಿ ಕ್ರಿಕೆಟ್ ಕಿಟ್‌ಗೆ ಹಣವನ್ನು ವ್ಯವಸ್ಥೆ ಮಾಡಿದರು. ಚಿನ್ನದ ಸರವನ್ನು ಮಾರಾಟ ಮಾಡಲಾಯಿತು. ಆದರೆ ಇದೀಗ ಅದು ಸರಿಯಾದ ನಿರ್ಧಾರವಾಗಿತ್ತು ಎಂದು ತೋರುತ್ತದೆ.

ಧ್ರುವ್ ಜುರೆಲ್ ಉತ್ತರಪ್ರದೇಶ ಪರ ಅಂಡರ್-14 ಮತ್ತು ಅಂಡರ್-16 ವಯೋಮಾನದ ಕ್ರಿಕೆಟ್ ಆಡಿದ್ದಾರೆ. ನಂತರ ಅವರು 2020ರಲ್ಲಿ ವಿಶ್ವಕಪ್‌ಗಾಗಿ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾದರು.

ಧ್ರುವ್ ಜುರೆಲ್ ವೃತ್ತಿಜೀವನ ದಾಖಲೆ

ಧ್ರುವ್ ಜುರೆಲ್ 2022ರಲ್ಲಿ ಉತ್ತರಪ್ರದೇಶ ತಂಡಕ್ಕಾಗಿ ವಿದರ್ಭ ವಿರುದ್ಧ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು ಮತ್ತು ಇಲ್ಲಿಯವರೆಗೆ ಅವರು 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಒಂದು ಶತಕ ಮತ್ತು ಐದು ಅರ್ಧ ಶತಕಗಳು ಸೇರಿದಂತೆ 790 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 249 ರನ್. ಧ್ರುವ್ ಜುರೆಲ್ 10 ಲಿಸ್ಟ್-ಎ ಮತ್ತು 23 ಟಿ20 ಪಂದ್ಯಗಳನ್ನೂ ಆಡಿದ್ದಾರೆ.

ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 20 ಲಕ್ಷ ರೂಪಾಯಿಗೆ ಧ್ರುವ್ ಜುರೆಲ್‌ರನ್ನು ಖರೀದಿ ಮಾಡಿತು. ಆದರೆ ಐಪಿಎಲ್ 2023ರಲ್ಲಿ ಚೊಚ್ಚಲ ಐಪಿಎಲ್ ಪಂದ್ಯವಾಡಿದರು.

ಧ್ರುವ್ ಜುರೆಲ್ ಇಲ್ಲಿಯವರೆಗೆ 13 ಐಪಿಎಲ್ ಪಂದ್ಯಗಳನ್ನು ಆಡಿದ್ದು, 172.72ರ ಸ್ಟ್ರೈಕ್ ರೇಟ್‌ನಲ್ಲಿ 152 ರನ್ ಗಳಿಸಿದ್ದಾರೆ ಮತ್ತು 2024ರ ಐಪಿಎಲ್‌ಗಾಗಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಉಳಿದುಕೊಂಡಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಉತ್ತಮ ಪ್ರದರ್ಶನ ಉತ್ತಮವಾಗಿದ್ದು,ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಎ ತಂಡದಿಂದ ಧ್ರುವ್ ಜುರೆಲ್ ಕರೆ ಸ್ವೀಕರಿಸಿದರು. ಧ್ರುವ್ ಜುರೆಲ್ ನಾಲ್ಕು ದಿನಗಳ ಪಂದ್ಯದಲ್ಲಿ 69 ರನ್ ಗಳಿಸಿದರು ಮತ್ತು 3 ಕ್ಯಾಚ್‌ಗಳನ್ನು ಪಡೆದರು.

ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಯುವ ಆಟಗಾರನಿಗೆ ಅವಕಾಶ ನೀಡಲು ಆಯ್ಕೆದಾರರು ನಿರ್ಧರಿಸಿದರು. ಮೊದಲ 2 ಟೆಸ್ಟ್‌ ಪಂದ್ಯಗಳಲ್ಲಿ ಮೊದಲ ಆಯ್ಕೆಯ ಕೀಪರ್ ಆಗದಿರಬಹುದು. ಆದರೆ ಹಿರಿಯ ಭಾರತ ಪುರುಷರ ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಅನುಭವವು ಆಗ್ರಾದಲ್ಲಿ ಜನಿಸಿದ ಬಲಗೈ ಬ್ಯಾಟರ್‌ಗೆ ಪ್ರಮುಖವಾಗಿರುತ್ತದೆ.

ಎಂಎಸ್ ಧೋನಿ ಅಭಿಮಾನಿಯಾಗಿರುವ ಧ್ರುವ್ ಜುರೆಲ್ ಅವರು ತಮ್ಮ ಆರಾಧ್ಯ ಕ್ರಿಕೆಟಿಗನ ಹೆಜ್ಜೆಗಳನ್ನು ಅನುಸರಿಸಲು ಮತ್ತು ರಾಂಚಿಯ ಲೆಜೆಂಡ್‌ಗಿಂತ ಹೆಚ್ಚು ಅಲ್ಲದಿದ್ದರೂ ಯಶಸ್ವಿ ಕ್ರಿಕೆಟ್ ಆಗಲು ಪ್ರಯತ್ನಿಸಲಿದ್ದಾರೆ.

Story first published: Saturday, January 13, 2024, 10:56 [IST]
Other articles published on Jan 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+