ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಧ್ರುವ್ ಜುರೇಲ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಮೊದಲ ಶತಕ ಬಾರಿಸಿದ್ದಾರೆ. ಅಹಮದಾಬಾದ್ ಅಂಗಳದಲ್ಲಿ ತಮ್ಮ ನೈಜ್ಯ ಆಟವನ್ನು ಆಡಿದ ಧ್ರುವ್ ಜುರೇಲ್, ವಿಂಡೀಸ್ ಬೌಲರ್‌ಗಳನ್ನು ಕಾಡಿದರು. ಎದುರಾಳಿ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಧ್ರುವ್ ಜುರೇಲ್ ಅಬ್ಬರಿಸಿದರು. ಈ ಮೂಲಕ ಜುರೇಲ್ ತಮ್ಮ ವೃತ್ತಿ ಜೀವನದಲ್ಲಿ ಮರೆಯಲಾಗದ ಇನಿಂಗ್ಸ್ ಕಟ್ಟಿದರು.
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ 50 ರನ್ ಬಾರಿಸುತ್ತಿದ್ದಂತೆ ಔಟ್ ಆದ ಮೇಲೆ ಧ್ರುವ್ ಜುರೇಲ್ ಅಂಗಳಕ್ಕೆ ಇಳಿದರು. ಈ ಸಮಯದಲ್ಲಿ ಪಿಚ್ ಮರ್ಮವನ್ನು ಅರಿತು ಬ್ಯಾಟ್ ಮಾಡಿದ ಧ್ರುವ್ ಜುರೇಲ್ ಅಬ್ಬರಿಸಿದರು. ತಮ್ಮ 6ನೇ ಟೆಸ್ಟ್ ಪಂದ್ಯದಲ್ಲಿ ಧ್ರುವ್ ಜುರೇಲ್ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಉತ್ತರ ಪ್ರದೇಶದ 24 ವರ್ಷದ ಆಟಗಾರ ವಿಂಡೀಸ್ ಬೌಲರ್‌ಗಳ ಕಿವಿ ಹಿಂಡಿ ಬ್ಯಾಟ್ ಮಾಡಿದರು. ಅಲ್ಲದೆ ಟೀಮ್ ಇಂಡಿಯಾದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು.

ಧ್ರುವ್ ಜುರೇಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನಡೆಸಿ ರನ್‌ಗಳನ್ನು ಕಲೆ ಹಾಕಿದರು. ಇವರ ಈ ಶತಕದ ಇನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿವೆ. ಈ ಮೂಲಕ ತಮ್ಮ ಸ್ಥಾನವನ್ನು ಭಧ್ರ ಪಡಿಸಿಕೊಳ್ಳುವಂತಹ ಆಟವನ್ನು ಆಡಿದರು. ಸ್ಟಾರ್ ಆಟಗಾರ ಸಿಕ್ಕ ಅವಕಾಶವನ್ನು ಎರಡೈ ಕೈಗಳಿಂದ ಬಳಸಿಕೊಂಡು ಆರ್ಭಟಿಸಿದರು. ಟೀಮ್ ಇಂಡಿಯಾದ ಭರವಸೆಯ ಆಟಗಾರ ರಿಷಭ್ ಪಂತ್ ಗಾಯಕ್ಕೆ ತುತ್ತಾಗಿದ್ದು, ಅವರು ಇನ್ನು ಚೇತರಿಕೆ ಕಾಣದೇ ಇದ್ದಾಗ ಜುರೇಲ್ ಅವರಿಗೆ ಅವಕಾಶ ನೀಡಲಾಯಿತು. ಜುರೇಲ್ ಈ ಅವಕಾಶವನ್ನು ಬಳಸಿಕೊಂಡು ಆರ್ಭಟಿಸಿದರು.
ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್‌ನ ಇತಿಹಾಸದ ಪುಟಗಳನ್ನು ತಿರುವುತ್ತಾ ನಡೆದರೆ, ಒಟ್ಟಾರೆ 12 ವಿಕೆಟ್ ಕೀಪರ್ ಬ್ಯಾಟರ್‌ಗಳು ಈ ಸ್ವರೂಪದಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದಾರೆ. ಇದರಲ್ಲಿ 5 ಬ್ಯಾಟರ್‌ಗಳು ವಿಂಡೀಸ್ ವಿರುದ್ಧವೇ ತಮ್ಮ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದಾರೆ. ಇದರಲ್ಲಿ ವಿಜಯ್ ಮಂಜ್ರೇಕರ್, ಫರಾಖ್ ಎಂಜಿನಿಯರ್, ಅಜಯ್ ರಾತ್ರಾ ಮತ್ತು ವೃದ್ಧಿಮಾನ್ ಸಹಾ, ಧ್ರುವ್ ಜುರೆಲ್ ಈ ಸಾಲಿಗೆ ಸೇರಿದ್ದಾರೆ.ಅಂತಿಮವಾಗಿ ಜುರೇಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ಸಹಾಯದಿಂದ 125 ರನ್ ಬಾರಿಸಿ ಔಟ್ ಆದರು.
ಧ್ರುವ್ ಜುರೇಲ್ ಅವರ ಈ ಭರ್ಜರಿ ಪ್ರದರ್ಶನ ಈ ಸ್ಥಾನದ ಮೇಲೆ ಕಣ್ಣು ನೆಟ್ಟ ಆಟಗಾರರಿಗೆ ಭಯ ಹುಟ್ಟಿಸಿದೆ. ರಿಷಭ್ ಪಂತ್ ಇಲ್ಲದೇ ಇದ್ದಾಗ ಇನ್ನು ಧ್ರುವ್ ಜುರೇಲ್ ಅವರಿಗೆ ಸ್ಥಾನ ಪಕ್ಕಾ ಆದಂತೆ ಬ್ಯಾಟ್ ಮಾಡಿದ್ದಾರೆ. 2024ರಲ್ಲಿ ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲೂ ಧ್ರುವ್ ಜುರೇಲ್ ಅವರಿಗೆ ಶತಕ ಬಾರಿಸುವ ಅವಕಾಶವಿತ್ತು. ಆದರೆ ಈ ಪಂದ್ಯದಲ್ಲಿ ಇವರು 90 ರನ್‌ಗಳಿಗೆ ಔಟ್ ಆಗಿದ್ದರು.