Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ರೀತಿ ಪ್ರದರ್ಶನ ನೀಡಿದ ಮೇಲೆ ಧ್ರುವ್ ಜುರೇಲ್‌ರನ್ನು ತಂಡದಿಂದ ಹೊರಗಿಡುವುದು ಹೇಗೆ?

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ ನವೆಂಬರ್ 14 ರಿಂದ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ವೇಳೆ ತಂಡದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದೇ ವೇಳೆ ಭಾರತ "ಎ" ಹಾಗೂ ದಕ್ಷಿಣ ಆಫ್ರಿಕಾ "ಎ" ವಿರುದ್ಧದ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಧ್ರುವ್ ಜುರೇಲ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಬೆಂಗಳೂರಿನ ಹೊರ ವಲಯದಲ್ಲಿ ಭಾರತ "ಎ" ಹಾಗೂ ದಕ್ಷಿಣ ಆಫ್ರಿಕಾ "ಎ" ವಿರುದ್ಧ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಡಲಾದ ಎರಡೂ ಇನಿಂಗ್ಸ್‌ಗಳಲ್ಲಿ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ ಧ್ರುವ್ ಜುರೇಲ್‌ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ಧ್ರುವ್ ಜರೇಲ್‌ ಆರ್ಭಟ ಮುಂದುವರೆಸಿದ್ದಾರೆ.

Dhruv Jurel Slams Unbeaten 127 in India A vs South Africa A Match Finely Poised

ಶನಿವಾರ ಭಾರತ ಮೂರನೇ ದಿನದಾಟವನ್ನು 3 ವಿಕೆಟ್‌ ನಷ್ಟಕ್ಕೆ 78 ರನ್‌ಗಳಿಂದ ಆಟ ಮುಂದುವರೆಸಿತು. ಕೆಎಲ್ ರಾಹುಲ್‌ 27 ರನ್‌ ಬಾರಿಸಿ ನಿರಾಸೆ ಅನುಭವಿಸಿದರು. ನೈಟ್ ವಾಷ್‌ಮನ್ ಆಗಿ ಬಂದ ಕುಲ್‌ದೀಪ್‌ ಯಾದವ್ (16) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗಿದ್ದರು. 5ನೇ ವಿಕೆಟ್‌ ಕಳೆದುಕೊಂಡಿದ್ದಾಗ ತಂಡಕ್ಕೆ ಧ್ರುವ್ ಜುರೆಲ್‌ ಹಾಗೂ ಹರ್ಷಾ ದುಬೆ ಆಧಾರವಾದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳು ವಿಫಲರಾದರು. ಈ ಜೋಡಿ 6ನೇ ವಿಕೆಟ್‌ಗೆ 250 ಎಸೆತಗಳಲ್ಲಿ 184 ರನ್‌ ಸೇರಿಸಿತು. ಈ ವೇಳೆ ಹರ್ಷಾ ದುಬೆ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ 84 ರನ್‌ ಸಿಡಿಸಿ ಔಟ್ ಆದರು.

7ನೇ ವಿಕೆಟ್‌ಗೆ ರಿಷಭ್‌ ಪಂತ್ ಹಾಗೂ ಧ್ರುವ್ ಜುರೇಲ್‌ ಜೋಡಿ 54 ಎಸೆತಗಳಲ್ಲಿ 82 ರನ್‌ ಸೇರಿಸಿತು. ರಿಷಭ್‌ ಪಂತ್‌ 54 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 65 ರನ್‌ ಬಾರಿಸಿ ಔಟ್ ಆದರು. ಟೀಮ್ ಇಂಡಿಯಾದ ಪರ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಧ್ರುವ್ ಜುರೇಲ್‌, ಎರಡನೇ ಇನಿಂಗ್ಸ್‌ನಲ್ಲೂ ಅಮೋಘ ಪ್ರದರ್ಶನ ಮುಂದುವರೆಸಿದರು. ಇವರು 170 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 127 ರನ್‌ ಸಿಡಿಸಿದರು. ಈ ಮೂಲಕ ತಂಡಕ್ಕೆ ಆಧಾರವಾದರು. ಪರಿಣಾಮ ಭಾರತ 7 ವಿಕೆಟ್‌ಗೆ 382 ರನ್‌ ಸೇರಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿಕೆಟ್‌ ನಷ್ಟಕ್ಕೆ 25 ರನ್‌ ಕಲೆ ಹಾಕಿದೆ.

Dhruv Jurel Slams Unbeaten 127 in India A vs South Africa A Match Finely Poised

10 ವಿಕೆಟ್‌ ಬೇಕು

ಭಾರತ "ಎ" ಈ ಪಂದ್ಯದಲ್ಲಿ ಜಯ ಸಾಧಿಸಲು 10 ವಿಕೆಟ್‌ ಜಯ ಸಾಧಿಸುವ ಅನಿವಾರ್ಯತೆ ಇದೆ. ದಕ್ಷಿಣ ಆಫ್ರಿಕಾ "ಎ" ಪಂದ್ಯದಲ್ಲಿ ಗೆಲುವು ಸಾಧಿಸಲು 392 ರನ್‌ ಸೇರಿಸಬೇಕಿದೆ.

Story first published: Saturday, November 8, 2025, 19:02 [IST]
Other articles published on Nov 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+