Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Dhruv Jurel: ಧೋನಿ ಸ್ಟಂಪಿಂಗ್‌ ನೆನಪಿಸಿದ ಧ್ರುವ್ ಜುರೇಲ್‌

ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದ ಸೂಪರ್ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಇನ್ನು ಕಣಕ್ಕೆ ಇಳಿಯುತ್ತಿಲ್ಲ. ಹೀಗಾಗಿ ಇವರ ಆಟವನ್ನು ಕಣ್ಣುತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇವರ ಆಟವನ್ನು ನೆನಪಿಸುವಂತೆ ರಾಜಸ್ಥಾನ್‌ ರಾಯಲ್ಸ್‌ ವಿಕೆಟ್‌ ಕೀಪರ್ ಧ್ರುವ್ ಜುರೇಲ್‌ ಸ್ಟಂಪಿಂಗ್ ಮಾಡಿದರು.

19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್ (ಕೆಕೆಆರ್) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ತಂಡಗಳ ನಡುವೆ ಕಾದಾಟ ನಡೆಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟ್ ಮಾಡಿತು. ಈ ವೇಳೆ ವೈಭವ್ ಸೂರ್ಯವಂಶಿ (46) ಹಾಗೂ ಯಶಸ್ವಿ ಜೈಸ್ವಾಲ್ (39) ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಆರ್‌ಆರ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್‌ ಸೇರಿಸಿತು. ಗುರಿಯನ್ನು ಬೆನ್ನಟ್ಟಿದದ ಕೆಕೆಆರ್, 19.4 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡವನ್ನು ಮುಟ್ಟಿತು.

Dhruv Jurel

ಕೆಕೆಆರ್ ತಂಡ ಬ್ಯಾಟಿಂಗ್‌ ಮಾಡುವಾಗ ಧ್ರುವ್ ಜುರೇಲ್‌ ಕಮಾಲ್‌ ವಿಕೆಟ್‌ ಕೀಪಿಂಗ್ ಮಾಡಿದರು. ರಾಯಲ್ಸ್ ವಿಕೆಟ್ ಕೀಪರ್ ಧ್ರುವ್ ಜುರೆಲ್ ಕ್ಯಾಮರೂನ್ ಗ್ರೀನ್ ಅವರನ್ನು ಸ್ಟಂಪ್ ಮಾಡಿದ್ದು ಸಖತ್ ಸದ್ದು ಮಾಡುತ್ತಿದೆ.

ಧೋನಿ ನೆನಪಿಸಿದ ಜುರೇಲ್‌

ಕೆಕೆಆರ್‌ ತಂಡದ ಮೊತ್ತ 5 ರನ್‌ ಆಗಿದ್ದಾಗ 2 ವಿಕೆಟ್ ಕಳೆದುಕೊಂಡಿತು. ಆಗ ಕ್ರೀಸ್‌ಗೆ ಬಂದಿದ್ದೇ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್‌ ಮೈದಾನಕ್ಕೆ ಇಳಿದರು. ಇವರು 13 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 27 ರನ್ ಬಾರಿಸಿದ್ದರು. ಈ ಹಂತದಲ್ಲಿ ರವಿ ಬಿಷ್ಣೋಯಿ ಲೆಗ್‌ ಸ್ಟಂಪ್‌ ಮೇಲೆ ಚೆಂಡನ್ನು ಹಾಕಿದರು. ಈ ಚೆಂಡನ್ನು ನೋಡಿದ ಗ್ರೀನ್‌ ಕ್ರೀಸ್‌ ಬಿಟ್ಟು ಹೊರಗೆ ಬಂದು ಬಿಗ್ ಹಿಟ್ ಬಾರಿಸಲು ಮುಂದಾದರು. ಆದರೆ ಚೆಂಡು ಇವರನ್ನು ವಂಚಿಸಿ ಧ್ರುವ್ ಜುರೇಲ್‌ ಅವರ ಕೈ ಸೇರಿತು.

ಧ್ರುವ್ ಜುರೆಲ್ ಲೆಗ್ ಸೈಡ್ ಕಡೆಗೆ ಡೈವ್ ಮಾಡಿ ಚೆಂಡನ್ನು ಹಿಡಿದರು. ಆಗ ಆಯಾ ತಪ್ಪಿತು. ನಂತರ ಜುರೆಲ್ ಚೆಂಡನ್ನು ಸ್ಟಂಪ್‌ಗಳ ಕಡೆಗೆ ಎಸೆದರು, ಅದು ಸ್ಟಂಪ್‌ಗಳಿಗೆ ಬಡಿಯಿತು. ಗ್ರೀನ್‌ ಥ್ರೋ ಬರುವ ಒಳಗೆ ಕ್ರೀಸ್‌ ಮುಟ್ಟಲು ಸಾಧ್ಯವೇ ಆಗಿಲ್ಲ. ಪರಿಣಾಮ ವಿಕೆಟ್‌ ಕೈ ಚೆಲ್ಲಿದರು. ಧ್ರುವ್ ಜುರೇಲ್‌ ಅವರು ಮಾಡಿದ ಸ್ಟಂಪಿಂಗ್‌ ಈಗ ವೈರಲ್ ಆಗುತ್ತಿದೆ.

Story first published: Sunday, April 19, 2026, 22:25 [IST]
Other articles published on Apr 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+