"ತಂಡದಲ್ಲಿ ಸ್ಥಾನ ಪಡೆಯದ ಆಟಗಾರನೇ ಸೋಲಿಗೆ ಕಾರಣ"
ಭಾರತ ಹಾಗೂ ಇಂಗ್ಲೆಂಡ್ ನಡುವಣ ಲಾರ್ಡ್ಸ್ ಟೆಸ್ಟ್ ಮುಗಿದಿದೆ. ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 22 ರನ್‌ಗಳ ಸೋಲು ಕಂಡಿದೆ. ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟರ್‌ಗಳ ಕೆಚ್ಚೆದಯ ಬ್ಯಾಟಿಂಗ್ ಅಭಿಮಾನಿಗಳ ಮನ ಗೆದ್ದಿದೆ. ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ಸ್ಕಿಲ್ ಮ್ಯಾನೇಜ್ಮೆಂಟ್ ಚಿತ್ತ ಕದ್ದಿದೆ. ಟೀಮ್ ಇಂಡಿಯಾ ಸೋಲಿಗೆ ಹಲವರು ಸಾಲು ಸಾಲು ಕಾರಣಗಳನ್ನು ತಿಳಿಸಿದ್ದಾರೆ. ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಈ ಸೋಲಿಗೆ ಈ ಒಬ್ಬ ಪ್ಲೇಯರ್ ಕಾರಣ ಎಂದು ತಿಳಿಸಿದ್ದಾರೆ.
ಸೋಮವಾರ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 58 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರೆಸಿತು. ಈ ವೇಳೆ ಮೊದಲಾವಧಿಯಲ್ಲಿ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುತ್ತದೆ. ಟೀಮ್ ಇಂಡಿಯಾ ಗೆಲುವು ಸಾಧಿಸುವುದು ಕಷ್ಟ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟರ್‌ಗಳ ಕೆಚ್ಚೆದೆಯ ಆಟ ಗೆಲುವಿನ ಆಸೆ ಚಿಗುರಿಸುತ್ತದೆ. ಇಂಗ್ಲೆಂಡ್ ಕೊನೆಯ ಎರಡು ವಿಕೆಟ್ ಪಡೆಯಲು 212 ಎಸೆತಗಳನ್ನು ಎಸೆಯಬೇಕಾಯಿತು.

ಟೀಮ್ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ 25 ರನ್ ಸೋಲು ಕಂಡಿದೆ. ಈ ಸೋಲಿಗೆ ನೂರಾರು ಕಾರಣಗಳನ್ನು ಸೂಚಿಸುತ್ತಿದ್ದಾರೆ. ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸೋಲಿಗೆ ತಂಡದಲ್ಲಿ ಸ್ಥಾನ ಪಡೆಯದ ಆಟಗರಾನೇ ಕಾರಣ ಎಂದು ದೂಷಿಸಿದ್ದಾರೆ.
ಇವರೇ ಕಾರಣ
ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸೋಲಿಗೆ ಧ್ರುವ್ ಜುರೇಲ್ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಕೀಪಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದಾರು. ಹೀಗಾಗಿ ಇವರ ಬದಲಿಗೆ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಮಾಡುವ ಜವಾಬ್ದಾರಿಯನ್ನು ಧ್ರುವ್ ಜುರೇಲ್ ಹೊತ್ತುಕೊಳ್ಳುತ್ತಾರೆ. ಇವರು ಈ ವೇಳೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಟೀಮ್ ಇಂಡಿಯಾ ಎರಡೂ ಇನಿಂಗ್ಸ್‌ನಲ್ಲಿ ಇತರೆ ರೂಪದಲ್ಲಿ (Extras) 63 ರನ್ ನೀಡಿದೆ. ಅಂದರೆ ಬೈಸ್, ಲೆಗ್ ಬೈಸ್, ನೋಬಾಲ್, ವೈಡ್ ರೂಪದಲ್ಲಿ ನೀಡಿದ ರನ್‌ಗಳಾಗಿವೆ. ಮೊದಲ ಇನಿಂಗ್ಸ್‌ನಲ್ಲಿ ಬೈಸ್ 11, ಲೆಗ್ ಬೈಸ್ 13, ನೋಬಾಲ್ 2, ವೈಡ್ 5 ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದೆ. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಬೈಸ್ 25, ಲೆಗ್‌ಬೈಸ್ 6, ನೋಬಾಲ್ 1 ಸೇರಿದಂತೆ 32 ರನ್ ನೀಡಿದೆ. ಅಲ್ಲದೆ ಮೂರು ಕ್ಯಾಚ್‌ಗಳನ್ನು ಧ್ರುವ್ ಜುರೇಲ್ ಕೈ ಚೆಲ್ಲಿದ್ದಾರೆ.
ಟೀಮ್ ಇಂಡಿಯಾ ಮೂರನೇ ಪಂದ್ಯದಲ್ಲಿ 25 ರನ್ ಸೋಲುಗಳನ್ನು ಕಂಡಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಇತರೆ (Extras) ರನ್‌ಗಳಿಗೆ ಕಡಿವಾಣ ಹಾಕಿದ್ದರೆ ಭಾರತ ಗೆಲ್ಲಬಹುದಿತ್ತು ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications