For Quick Alerts
ALLOW NOTIFICATIONS  
For Daily Alerts
 

ಧ್ರುವ್ ಜುರೇಲ್‌ ಶತಕ: ಟೆಸ್ಟ್‌ ಸರಣಿಯಲ್ಲಿ ಆಡುವ ಅವಕಾಶ ನೀಡಿ

ಬೆಂಗಳೂರು: ಭರವಸೆಯ ಬ್ಯಾಟರ್‌ ಧ್ರುವ್ ಜುರೇಲ್‌ (ಅಜೇಯ 132) ಅವರು ಬಾರಿಸಿದ ಶತಕದ ನೆರವಿನಿಂದ ಭಾರತ "ಎ" ತಂಡ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ "ಎ" ವಿರುದ್ಧ ಪಂದ್ಯದಲ್ಲಿ ಮೊದಲದಿನದಾಟದಲ್ಲಿ 255 ರನ್‌ಗಳಿಗೆ ಆಲೌಟ್‌ ಆಗಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ಅಭಿಮನ್ಯು ಈಶ್ವರನ್‌ (0), ಆರಂಭಿಕ ಆಟಗಾರ ಕೆಎಲ್ ರಾಹುಲ್ (19) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸಾಯಿ ಸುದರ್ಶನ್ (17) 52 ರನ್‌ಗಳನ್ನು ಎದುರಿಸಿದರೂ ಸಹ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಕನ್ನಡಿಗ ದೇವದತ್ ಪಡಿಕ್ಕಲ್‌ (5) ದೇಶೀಯ ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.

Dhruv Jurel s magnificent 132 saves India A against South Africa A in unofficial Test

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕಂ ಬ್ಯಾಕ್ ಮಾಡಿರುವ ರಿಷಭ್ ಪಂತ್‌, ಬಿಗ್‌ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಆದರೆ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ 24 ರನ್‌ಗಳಿಗೆ ಆಟ ಮುಗಿಸಿದ್ದಾರೆ. ಉಳಿದಂತೆ ಹರ್ಷ ದುಬೆ 20, ಮೊಹಮ್ಮದ್ ಸಿರಾಜ್‌ 15 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾಗಿದ್ದಾರೆ.

ಜುರೇಲ್‌ ಶತಕ

ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದಿದ್ದ ಧ್ರುವ್ ಜುರೇಲ್‌ ತಮ್ಮಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಅನಾವರಣ ಮಾಡಿದ್ದಾರೆ. ಇವರು 175 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 132 ರನ್‌ ಬಾರಿಸಿದ್ದಾರೆ. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳ್ತಾ ಇದ್ದರೂ ಸಹ ಧೃತಿ ಗೆಡದೆ ಬ್ಯಾಟ್ ಮಾಡಿದ ಧ್ರುವ್ ಜುರೇಲ್‌ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಮಗೂ ಅವಕಾಶ ನೀಡಿ ಎಂಬಂತೆ ಬ್ಯಾಟ್ ಮಾಡಿದ್ದಾರೆ.

Dhruv Jurel s magnificent 132 saves India A against South Africa A in unofficial Test

ಟೀಮ್ ಇಂಡಿಉಯಾದ ಉಪನಾಯಕ ರಿಷಭ್‌ ಪಂತ್ ಗಾಯಕ್ಕೆ ತುತ್ತಾಗಿದ್ದಾಗ, ಇವರಿಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡಲಾಗಿತ್ತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಂಡಿರುವ ಧ್ರುವ್ ಜುರೇಲ್ ಭರವಸೆ ಮೂಡಿಸಿದ್ದರು. ಆದರೆ ರಿಷಭ್‌ ಪಂತ್‌ ಬರುತ್ತಲೇ ಇವರು ಬೆಂಚ್ ಕಾಯಬೇಕಾಗುತ್ತದೆ. ಆದರೆ ದಕ್ಷಿಣ ಆಫ್ರಿಕಾ "ಎ" ವಿರುದ್ಧ ನೀಡಿರುವ ಪ್ರದರ್ಶನ ಇವರನ್ನು ತಂಡದಲ್ಲಿ ಸ್ಥಾನ ನೀಡುವಂತೆ ಹೇಳುತ್ತಿದೆ. ಇವರಿಗೆ ನವೆಂಬರ್ 14 ರಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡುವ ಅವಕಾಶ ಲಭಿಸುತ್ತದಾ ಕಾದು ನೋಡಬೇಕಿದೆ.

ಧ್ರುವ್ ಜುರೇಲ್‌ ಆಡಿದ 7 ಟೆಸ್ಟ್‌ ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 430 ರನ್‌ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 1 ಅರ್ಧಶತಕ ಸೇರಿದೆ. ಇವರು ಮಧ್ಯಮ ಕ್ರಮಾಂಕದಲ್ಲೂ ತಂಡಕ್ಕೆ ಆಧಾರವಾಗಬಲ್ಲ ಬ್ಯಾಟರ್‌. ಇವರಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಗುರುತಿಸಿ ಅವರಿಗೆ ಅವಕಾಶ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ರಿಷಭ್ ಪಂತ್ ಅವರು ವಿಕೆಟ್‌ ಕೀಪರ್‌ ಆಗಿ ತಂಡದಲ್ಲಿ ಸ್ಥಾನ ಪಡೆದರೆ, ಮತ್ತೆ ಧ್ರುವ್ ಜುರೇಲ್ ಅವರು ಬೆಂಚ್ ಕಾಯಬೇಕಾಗುತ್ತದೆ. ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ಆಟಗಾರನನ್ನು ಬಳಸಿಕೊಂಡರೆ ಒಳ್ಳೆಯದು ಎಂಬ ಭಾವನೆ ಅಭಿಮಾನಿಗಳದ್ದಾಗಿದೆ.

Story first published: Thursday, November 6, 2025, 20:45 [IST]
Other articles published on Nov 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+