Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Dhruv Jurel: ತವರಿನಲ್ಲಿ ಜುರೇಲ್‌ ಭರ್ಜರಿ ಪ್ರದರ್ಶನ: ಪಂತ್‌ ದಾಖಲೆ ಮೀರಿಸಿದ ಧ್ರುವ್

ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳ ನಡುವಣ 2 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಅಹಮದಾಬಾದ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್ ಮೊದಲು ಬ್ಯಾಟ್ ಮಾಡಿ 162 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ ಆರಂಭಿಸಿದ್ದು 2 ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿದೆ. ಎರಡನೇ ದಿನಕ್ಕೆ ಕನ್ನಡಿಗ ಕೆಎಲ್ ರಾಹುಲ್ ಹಾಗೂ ನಾಯಕ ಶುಭಮನ್‌ ಗಿಲ್‌ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ವೇಳೆ ಸ್ಟಾರ್‌ ಆಟಗಾರರು ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ. ಈ ಸಾಲಿಗೆ ವಿಕೆಟ್‌ ಕೀಪರ್ ಧ್ರುವ್ ಜುರೇಲ್‌ ಸಹ ಸೇರಿಕೊಳ್ಳುತ್ತಾರೆ.

ವೆಸ್ಟ್‌ ಇಂಡೀಸ್‌ ತಂಡವನ್ನು 162 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾದ ಬೌಲರ್ಸ್‌ ಮಹತ್ವದ ಪಾತ್ರವನ್ನು ವಹಿಸಿದರು. ಈ ವೇಳೆ ಮೊಹಮ್ಮದ್‌ ಸಿರಾಜ್‌ 4, ಜಸ್ಪ್ರಿತ್ ಬುಮ್ರಾ 3 ವಿಕೆಟ್‌ ಕಬಳಿಸಿ ಮಿಂಚಿದರು. ಇವರಿಬ್ಬರೂ ಈ ಪ್ರದರ್ಶನದ ಮೂಲಕ ವೈಯಕ್ತಿಕ ಸಾಧನೆಯನ್ನು ಸಹ ಮಾಡಿದರು. ವಿಕೆಟ್‌ ಕೀಪರ್‌ ಧ್ರುವ್ ಜುರೇಲ್‌ ಸಹ ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ. ಅಲ್ಲದೆ ರಿಷಭ್‌ ಪಂತ್‌ ಅವರಿಗೆ ಮಾಡಲಾಗದ ಸಾಧನೆಯನ್ನು ಮಾಡಿ ಬೀಗಿದ್ದಾರೆ.

Dhruv Jurel s Record Joins MS Dhoni Nayan Mongia with 4 Catches in Home Test Innings

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಧ್ರುವ್ ಜುರೇಲ್‌ ಕಮಾಲ್‌ ವಿಕೆಟ್‌ ಕೀಪಿಂಗ್ ಪ್ರದರ್ಶಿಸಿದ್ದಾರೆ. ಇವರು ಸ್ಟಂಪ್‌ಗಳ ಹಿಂದೆ 4 ಕ್ಯಾಚ್‌ ಪಡೆದು ಬೀಗಿದ್ದಾರೆ. ಇನ್ನು ಈ ಮೂಲಕ ದಾಖಲೆಯನ್ನು ಸಹ ಬರೆದಿದ್ದಾರೆ. ತವರಿನಲ್ಲಿ ಟೆಸ್ಟ್‌ ಪಂದ್ಯವನ್ನು ಆಡುವಾಗ ಒಂದೇ ಇನಿಂಗ್ಸ್‌ನಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ಕ್ಯಾಚ್‌ ಪಡೆದ 7ನೇ ಭಾರತೀಯ ಆಟಗರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಹಾಗೂ ನಯನ್‌ ಮೊಗಿಂಯಾ ಇದ್ದಾರೆ.

ಧೋನಿ, ಮೊಂಗಿಯಾಗೆ ಅಗ್ರ ಸ್ಥಾನ

ಮಾಹಿ 2011ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧವೇ 5 ಕ್ಯಾಚ್‌ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇನ್ನು ನಯನ್‌ ಮೊಂಗಿಯಾ 1999ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ 5 ಕ್ಯಾಚ್‌ ಪಡೆದಿದ್ದರು. ಇವರನ್ನು ಬಿಟ್ಟರೆ ತವರಿನಲ್ಲಿ ನಾಲ್ಕು ಕ್ಯಾಚ್‌ ಪಡೆದ ಆಟಗಾರರೆಂದರೆ ಸೈಯದ್ ಕಿರ್ಮಾನ್, ಬುದ್ಧಿ ಕುನೇಂದ್ರನ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಪಾರ್ಥಿವ್ ಪಟೇಲ್, ವೃದ್ಧಿಮಾನ್ ಸಹಾ ಮತ್ತು ಈಗ ಧ್ರುವ್ ಜುರೆಲ್.

ತವರಿನಲ್ಲಿ ನಡೆದ ಪಂದ್ಯದಲ್ಲಿ ರಿಷಭ್‌ ಪಂತ್‌ ಅತಿ ಹೆಚ್ಚು ಅಂದರೆ 3 ಕ್ಯಾಚ್‌ ಪಡೆದಿದ್ದಾರೆ. ಆದರೆ ಭಾರತದ ಪರ ವಿಕೆಟ್ ಕೀಪರ್ ಆಗಿ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಕ್ಯಾಚ್ ಗಳನ್ನು ಪಡೆದ ದಾಖಲೆಯನ್ನು ರಿಷಭ್ ಪಂತ್ ಮತ್ತು ಎಂಎಸ್ ಧೋನಿ ಜಂಟಿಯಾಗಿ ಹೊಂದಿದ್ದಾರೆ. ಧೋನಿ ಕಿವೀಸ್‌ ವಿರುದ್ಧ, ಪಂತ್‌ ಆಸೀಸ್‌ ವಿರುದ್ಧ ಒಂದೇ ಇನಿಂಗ್ಸ್‌ನಲ್ಲಿ 6 ಕ್ಯಾಚ್‌ಗಳನ್ನು ಪಡೆದಿದ್ದಾರೆ.

Story first published: Friday, October 3, 2025, 8:16 [IST]
Other articles published on Oct 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+