ರಣಜಿ ಟ್ರೋಫಿ: ಮೊದಲೆರಡು ಪಂದ್ಯಗಳಿಗೆ ದೆಹಲಿಗೆ ನಾಯಕನ ಆಯ್ಕೆ

ನವದೆಹಲಿ, ಡಿಸೆಂಬರ್ 05: 2019-20ನೇ ಸಾಲಿನ ರಣಜಿ ಟ್ರೋಫಿಯ ಪಂದ್ಯಗಳಿಗೆ 15 ಸದಸ್ಯರ ದೆಹಲಿ ತಂಡವನ್ನು ಪ್ರಕಟಿಸಲಾಗಿದೆ. ಮೊದಲೆರಡು ಪಂದ್ಯಗಳಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಧ್ರುವ್ ಶೋರೆ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಧ್ರುವ್ ಶೋರೆ ನಾಯಕರಾಗಿದ್ದರೆ, ಎಡಗೈ ಆಟಗಾರ ನಿತೀಶ್ ರಾಣಾ ಅವರು ತಂಡಕ್ಕೆ ಉಪ ನಾಯಕರಾಗಿದ್ದಾರೆ. ಅನುಜ್ ರಾವತ್ ವಿಕೆಟ್ ಕೀಪರ್ ಆಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟರ್ ನವದೀಪ್ ಸೈನಿ ಅವರು ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ತಂಡವನ್ನು ಪ್ರಕಟಿಸಿದ ದೆಹಲಿ ಅಂಡ್ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್(ಡಿಡಿಸಿಎ), ಪ್ರಷ್ನು ವಿಜಯನ್, ಸಾರಂಗ್ ರಾವತ್, ಕ್ಷಿತಿಜ್ ಶರ್ಮ ಹಾಗೂ ಕರಣ್ ದಾಗರ್ ಅವರನ್ನು ಸ್ಟ್ಯಾಂಡ್ ಬೈ ಆಗಿ ಹೆಸರಿಸಲಾಗಿದೆ ಎಂದು ಆಯ್ಕೆದಾರರ ಸಮಿತಿಯ ಮುಖ್ಯಸ್ಥ ಅತುಲ್ ವಾಸನ್ ಹೇಳಿದರು.
ಆಯ್ಕೆ ಸಮಿತಿಯ ಅನಿಲ್ ಭಾರದ್ವಾಜ್, ಕೋಚ್ ಕೆ ಭಾಸ್ಕರ್ ಪಿಳ್ಳೈ, ಸುಮಿತ್ ನರ್ವಾಲ್(ಕ್ರಿಕೆಟ್ ನಿರ್ವಹಣೆ ವೀಕ್ಷಕ), ನಾಯಕ ಶೋರೆ ಹಾಗೂ ಸಂಚಾಲಕ ಸಂಜಯ್ ಭಾರದ್ವಾಜ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೇರಳ ವಿರುದ್ಧ ಡಿಸೆಂಬರ್ 9 ರಿಂದ 12ರ ತನಕ ತನ್ನ ಮೊದಲ ಪಂದ್ಯವನ್ನು ದೆಹಲಿ ಆಡಲಿದೆ.
ದೆಹಲಿ ತಂಡ ಇಂತಿದೆ: ಧ್ರುವ್ ಶೋರೆ (ನಾಯಕ), ನಿತೀನ್ ರಾಣಾ(ಉಪ ನಾಯಕ), ಕುನಾಲ್ ಚಾಂಡೆಲಾ, ಅನುಜ್ ರಾವತ್, ಜಾಂಟಿ ಸಿಧು, ಲಲಿತ್ ಯಾದವ್, ಶಿವಂ ಶರ್ಮ, ವಿಕಾಶ್ ಮಿಶ್ರಾ, ತೇಜಸ್ ಬರೋಕಾ, ಪ್ರದೀಪ್ ಸಾಂಗ್ವಾನ್, ನವದೀಪ್ ಸೈನಿ, ಪವನ್ ಸುಯಾಲ್, ಕುವರ್ ಬಿಧುರಿ, ಹಿತೇನ್ ದಲಾಲ್, ಶಿವಾಂಕ್ ವಶಿಷ್ಠ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications