ತಂಡದಿಂದ ಮಿಥಾಲಿ ಹೊರಗಿಟ್ಟಿದ್ದನ್ನು ಪ್ರಶ್ನಿಸುವಂತಿಲ್ಲ ಎಂದ ಡಯಾನಾ!

ನವದೆಹಲಿ, ನವೆಂಬರ್ 26: ಐಸಿಸಿ ಮಹಿಳಾ ವಿಶ್ವ ಟಿ20 ಸೆಮಿಫೈನಲ್‌ನಲ್ಲಿ ಆಡುವ 11 ಆಟಗಾರರ ತಂಡದಿಂದ ಮಿಥಾಲಿ ರಾಜ್ ಅವರನ್ನು ಹೊರಗಿಟ್ಟಿದ್ದನ್ನು ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ಸದಸ್ಯೆ, ಭಾರತ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಸಮರ್ಥಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ವೇಳೆ ಅನುಭವಿ ಆಟಗಾರ್ತಿ ಮಿಥಾಲಿ ಅವರನ್ನು ಬೆಂಚ್‌ಪ್ಲೇಯರ್ ಆಗಿಸಲಾಗಿತ್ತು. ಆ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತಲ್ಲದೆ, ಚೊಚ್ಚಲ ಐಸಿಸಿ ಪ್ರಶಸ್ತಿ ಗೆದ್ದುಕೊಳ್ಳುವ ಕನಸನ್ನು ನೆಲಕ್ಕೆ ಕೆಡವಿಕೊಂಡಿತ್ತು.
ಭಾರತ ಸೋತ ಬಳಿಕ ಈ ಪ್ರಕರಣ ವಿವಾದಕ್ಕೆ ಗುರಿಯಾಗಿತ್ತು. ಮಿಥಾಲಿಯನ್ನು ಆಡಿಸಿದ್ದರೆ ಭಾರತ ತಂಡ ಒಂದೋ ಗೆಲ್ಲುತ್ತಿತ್ತು. ಇಲ್ಲಿದಿದ್ರೆ ಎದುರಾಳಿಗೆ ಪ್ರಬಲ ಪೈಪೋಟಿಯನ್ನಾದ್ರೂ ನೀಡುವ ಸಾಧ್ಯತೆಯಿತ್ತು ಎಂಬ ಮಾತುಗಳು ಕ್ರೀಡಾವಲಯದಲ್ಲಿ ಕೇಳಿ ಬಂದಿತ್ತು.

ಯಾರೂ ಪ್ರಶ್ನಿಸುವಂತಿಲ್ಲ
ಕ್ರೀಡಾಭಿಮಾನಿಗಳ, ಕ್ರೀಡಾ ಪರಿಣಿತರ ಅಭಿಪ್ರಾಯವನ್ನು ಅಲ್ಲಗೆಳೆದಿರುವ ಎಡುಲ್ಜಿ ನಡೆ, ತಂಡ ನಿರ್ವಹಣಾ ಸಮಿತಿಗೆ ಗುರಾಣಿ ಹಿಡಿಯುತ್ತಿದ್ದಾರೋ ಅನ್ನೋ ಅನುಮಾನಕ್ಕೀಡುಮಾಡುವಂತಿದೆ. ಯಾಕೆಂದರೆ ತಂಡ ನಿರ್ವಹಣಾ ಸಮಿತಿಯ ನಿರ್ಧಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಡಯಾನಾ ಹೇಳಿದ್ದಾರೆ.

ಕೌರ್ ಉತ್ತಮ ನಾಯಕಿಯಲ್ಲ
ಮಿಥಾಲಿಯನ್ನು ತಂಡದಿಂದ ಹೊರಗಿಟ್ಟಿದ್ದನ್ನು ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಸಮರ್ಥಿಸಿಕೊಂಡಿದ್ದರು. ಆದರೆ ಅನಂತರ ಕೌರ್ ಬಗ್ಗೆಯೇ ಅಸಮಾಧಾನ ಕೇಳಿ ಬಂದಿತ್ತು. ಕೌರ್ ಒಬ್ಬಳು ಸುಳ್ಳಿನ ವಂಚಕಿ, ಹಠ ಸಾಧಿಸುವಾಕೆ ಜೊತೆಗೆ ಆಕೆ ಉತ್ತಮ ನಾಯಕಿಗೂ ಯೋಗ್ಯತೆ ಇಲ್ಲದವಳು ಎಂದು ಮಿಥಾಲಿ ರಾಜ್ ಅವರ ಕೋಚ್ ಅನ್ನಿಶಾ ಗುಪ್ತಾ ಹೇಳಿದ್ದರು.

ಒಂದು ವೇಳೆ ಗೆದ್ದಿದ್ದರೆ?
'ಆಡುವ 11 ಆಟಗಾರರ ತಂಡವನ್ನು ನಾವು ಪ್ರಶ್ನಿಸುವಂತಿಲ್ಲ. ಅವತ್ತಿನದ್ದು ನಿಜವಾಗಿ ಗೆಲ್ಲುವ ತಂಡವಾಗಿತ್ತು. ಆದರೆ ಸೋತಿತು. ಒಂದು ವೇಳೆ ಆ ಪಂದ್ಯವನ್ನು ಗೆದ್ದಿದ್ದರೆ ಈ ವಿವಾದವೇ ಹುಟ್ಟುತ್ತಿರಲಿಲ್ಲ' ಎಂದು ಡಯಾನಾ ತಂಡ ನಿರ್ವಹಣಾ ಸಮಿತಿಯ ತಪ್ಪಿಗೆ ತೇಪೆ ಹುಯ್ದಿದ್ದಾರೆ.

ಜೋಹ್ರಿಗೂ ಕ್ಲೀನ್ ಚಿಟ್ ಕೊಟ್ಟಿದ್ದ ಡಯಾನಾ
ಇಂಟರ್‌ವ್ಯೂವ್‌ಗೆ ಬರಹೇಳಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಅನಾಮಧೇಯಳೊಬ್ಬಳು ಘಟನೆಯನ್ನು ಎಳೆಎಳೆಯಾಗಿ ವಿವರಿಸಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಮೇಲೆ ಮೀಟೂ ಆರೋಪ ಮಾಡಿದ್ದರು. ಆದರೆ ಆ ಆರೋಪವನ್ನು ಸಾರಾಸಗಟ ತಳ್ಳಿ ಹಾಕಿದ್ದ ಡಯಾನಾ, ಜೋಹ್ರಿ ತನ್ನ ಕರ್ತವ್ಯದಲ್ಲಿ ಮುಂದುವರೆಯಲು ದಾರಿ ಮಾಡಿದ್ದರು. ಹೀಗಾಗಿಯೇ ಡಯಾನಾ, ಬಿಸಿಸಿಯಲ್ಲಿನ ತಪ್ಪುಗಳನ್ನು ಮುಚ್ಚಿ ಹಾಕುತ್ತಿದ್ದಾರೋ ಎಂಬ ಅನುಮಾನಕ್ಕೆ ಎಡೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications