T20 World Cup 2024: ನ್ಯೂಯರ್ಕ್ ಅಂಗಳದಲ್ಲಿ ಸೆಟ್ಲ್ ಆಗದ ವಿರಾಟ್ ಕೊಹ್ಲಿ; ಬಿಸಿಸಿಐಗೆ ಈ ಬಗ್ಗೆ ಮೊದಲೇ ಗೊತ್ತಿತ್ತಾ?
ಜೂನ್ 13 ಗುರುವಾರ, ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್‌ವಿರಾಟ್ ಕೊಹ್ಲಿ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅಗ್ರ ರನ್ ಸ್ಕೋರರ್ ಆಗಲಿದ್ದಾರೆ ಎಂದು ಹಲವು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು.
ಆದರೆ ಐಪಿಎಲ್ 2024ರಲ್ಲಿ ಅಬ್ಬರಿಸಿದ್ದ ಕೊಹ್ಲಿ, ನ್ಯೂಯಾರ್ಕ್‌ನ ಪಿಚ್‌ಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಇದರಿಂದ ಎರಡು ತಿಂಗಳ ಹಿಂದೆ ಎದ್ದ ಊಹಾಪೋಹಗಳು ನಿಜವಾಗುವಂತಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಐಪಿಎಲ್‌ಗೂ ಮುನ್ನವೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರಾಟ್ ಕೊಹ್ಲಿ ಅವರನ್ನು ಈ ಮೆಗಾ ಟೂರ್ನಿಯಿಂದ ಕೈಬಿಡಲು ಮುಂದಾಗಿತ್ತು ಎಂಬ ವರದಿಗಳು ಇದೀಗ ಮುನ್ನೆಲೆಗೆ ಬಂದಿವೆ. ಈ ವರ್ಷದ ಆರಂಭದಲ್ಲಿ ಬಿಸಿಸಿಐ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಿತ್ತು. ಅದೇ ಸಮಯದಲ್ಲಿ ವಿರಾಟ್ ಟಿ20 ವಿಶ್ವಕಪ್ ಆಡುವುದಿಲ್ಲ ಎಂಬ ಸುದ್ದಿಯೊಂದು ಸಂಚಲನ ಮೂಡಿಸಿತ್ತು.
ವರದಿಗಳ ಪ್ರಕಾರ, ವಿರಾಟ್ ಕಡಿಮೆ ರನ್‌ಗಳಿಗೆ ಔಟಾಗಲು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಪಿಚ್‌ಗಳೇ ಕಾರಣ. ಈ ಪಿಚ್‌ಗಳಲ್ಲಿ ವಿರಾಟ್ ಅವರ ಬ್ಯಾಟಿಂಗ್ ತಂತ್ರವು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಈ ಎಲ್ಲಾ ಊಹಾಪೋಹಗಳನ್ನು ಮೌನಗೊಳಿಸಿದ್ದರು. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೊಹ್ಲಿ ಟಾಪ್ ರನ್ ಸ್ಕೋರರ್ ಆಗಿದ್ದರು. ಬಳಿಕ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದ ಭಾರತ ತಂಡದಲ್ಲಿ ವಿರಾಟ್ ಹೆಸರನ್ನು ಸೇರಿಸಲಾಗಿತ್ತು.
ಕೊಹ್ಲಿಗೆ ಆರಂಭಿಕನಾಗಿ ಸಿಕ್ಕಿಲ್ಲ ಯಶಸ್ಸು
ವಿರಾಟ್ ಕೊಹ್ಲಿ ಹೆಚ್ಚಾಗಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ 2024ರ ಟಿ20 ವಿಶ್ವಕಪ್‌ನಲ್ಲಿ ತಂಡದ ಸಂಯೋಜನೆಯನ್ನು ಸರಿಹೊಂದಿಸಲು, ವಿರಾಟ್‌ಗೆ ಹೊಸ ಪಾತ್ರವನ್ನು ನೀಡಲಾಗಿದೆ.
ವಿರಾಟ್ ಕೊಹ್ಲಿ ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಓಪನಿಂಗ್ ಮಾಡಿದ್ದಾರೆ. ಮೂರೂ ಪಂದ್ಯಗಳಿಂದ ವಿರಾಟ್ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಪಾಕಿಸ್ತಾನವನ್ನು ಹೊರತುಪಡಿಸಿ, ಯುಎಸ್ಎ ಮತ್ತು ಐರ್ಲೆಂಡ್ ವಿರುದ್ಧವೂ ವಿರಾಟ್ ಎರಡಂಕಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ.
ಯುಎಸ್‌ಎ ವಿರುದ್ಧವೂ ಕೈಕೊಟ್ಟ ಕೊಹ್ಲಿ
ಸತತ ಎರಡು ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದ ವಿರಾಟ್ ಕೊಹ್ಲಿ ಅವರಿಂದ ಅಮೇರಿಕಾ ವಿರುದ್ಧ ಒಂದು ಅದ್ಭುತ ಇನ್ನಿಂಗ್ಸ್ ಆಡುವ ನಿರೀಕ್ಷೆಗಳಿದ್ದವು. ಆದರೆ ಈ ಪಂದ್ಯದಲ್ಲಿ ಕೊಹ್ಲಿ ಖಾತೆ ತೆರೆಯುವಲ್ಲಿಯೂ ಯಶಸ್ವಿಯಾಗಲಿಲ್ಲ. ಇನ್ನೊಂದೆಡೆ ರೋಹಿತ್ ಶರ್ಮಾ ಕೂಡ 3 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.
ಇದಾದ ನಂತರ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕ ಮತ್ತು ಶಿವಂ ದುಬೆ ಅವರ ಸ್ಪೋಟಕ ಇನ್ನಿಂಗ್ಸ್‌ನ ನೆರವಿನಿಂದ ಟೀಮ್ ಇಂಡಿಯಾ ಗೆದ್ದು ಸೂಪರ್-8ರಲ್ಲಿ ಸ್ಥಾನ ಪಡೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications