Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭ್ಯಾಸ ಆರಂಭಿಸಿದರಾ ಹಿಟ್‌ಮ್ಯಾನ್ ರೋಹಿತ್? ಹೌದೆನ್ನುತ್ತಿದೆ ಫೋಟೋ!

Did India batsman Rohit Sharma just return to training?

ಮುಂಬೈ, ಜೂನ್ 25: ಸುಮಾರು 3 ತಿಂಗಳ ಬಳಿಕ ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಮತ್ತೆ ಮೈದಾನಕ್ಕಿಳಿದಿದ್ದಾರಾ? ಅಭ್ಯಾಸ ಶುರು ಮಾಡಿದ್ದಾರಾ? ಹೌದೆನ್ನುತ್ತಿದೆ ಇತ್ತೀಚಿನ ಫೋಟೋ. ಇನ್‌ಸ್ಟಾಗ್ರಾಮ್‌ನಲ್ಲಿ ಶರ್ಮಾ ಹಂಚಿಕೊಂಡಿರುವ ಫೋಟೋವೊಂದು ರೋಹಿತ್ ಮತ್ತೆ ಅಭ್ಯಾಸ ಆರಂಭಿಸಿರುವ ಸುಳಿವು ನೀಡುತ್ತಿದೆ.

ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ನಿಲುಗಡೆಯಾದಾಗಿನಿಂದ ಟೀಮ್ ಇಂಡಿಯಾದ ಕ್ರಿಕೆಟ್ ಆಟಗಾರರು ಮೈದಾನಕ್ಕಿಳಿದು ಅಭ್ಯಾಸ ನಡೆಸಿಲ್ಲ. ಆದರೆ ಇತ್ತೀಚೆಗೆ ರೋಹಿತ್ ತಂಡದ ಸಹ ಆಟಗಾರ ಚೇತೇಶ್ವರ್ ಪೂಜಾರ ನೆಟ್‌ ಅಭ್ಯಾಸ ನಡೆಸಿದ್ದರು. ಇದೀಗ ರೋಹಿತ್ ಕೂಡ ಅಭ್ಯಾಸ ಶುರು ಮಾಡಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.

'ಕೆಲವು ಕೆಲಸಗಳನ್ನು ಮುಗಿಸಿ ಉದ್ಯಾನವನಕ್ಕೆ ಮರಳಿರುವುದು ಖುಷಿ ತಂದಿದೆ. ಬಹಳ ಕಾಲದ ಬಳಿಕ ಮತ್ತೆ ಹೊಸ ಅನುಭವವಾದಂತೆ ನನಗೆ ಭಾಸವಾಗುತ್ತಿದೆ,' ಎಂದು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್ ಬರೆದುಕೊಂಡಿದ್ದರು. ಹಾಗಂತ ರೋಹಿತ್ ತಾನು ಅಭ್ಯಾಸ ನಡೆಸಿರುವ ತಾಣ ಯಾವುದು ಅಂತ ತಿಳಿಸಿಲ್ಲ. ಆದರೆ ಚಿತ್ರ ಗಮನಿಸಿದರೆ ಅದು ಕ್ರಿಕೆಟ್ ಗ್ರೌಂಡ್‌ನಂತೆ ಕಾಣುತ್ತದೆ.

Did India batsman Rohit Sharma just return to training?

ಕಳೆದ ತಿಂಗಳು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಜೊತೆಗಿನ ಸಂವಾದದ ವೇಳೆ ರೋಹಿತ್, 'ನನ್ನಿಂದ ಸಾಧ್ಯವಾದಷ್ಟರ ಮಟ್ಟಿಗೆ ನಾನು ಅಭ್ಯಾಸ ನಡೆಸುತ್ತಿದ್ದೇನೆ. ಆದರೆ ನಾನು ಚೆಂಡು ಹೊಡೆಯುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮಗೆ ಗೊತ್ತಿರುವಂತೆ ನನಗೆ ದೊಡ್ಡ ಹೊಡೆತಗಳಿಷ್ಟ. ನಾನು ಈಗ ಅಭ್ಯಾಸ ಮಾಡುತ್ತಿರುವ ಈ ಸಣ್ಣ ಜಾಗ ನನಗೆ ಸಾಲುತ್ತಿಲ್ಲ,' ಎಂದಿದ್ದರು.

Story first published: Friday, June 26, 2020, 9:46 [IST]
Other articles published on Jun 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+