ಗೌತಮ್ ಗಂಭೀರ- ವಿರಾಟ್ ಕೊಹ್ಲಿ ಸಂಬಂಧ ಒಡೆದ ಹಾಲು ? ವಿಡಿಯೋ ವೈರಲ್
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯ ರಾಂಚಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 17 ರನ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಅಬ್ಬರಿಸಿದರು. ಅಲ್ಲದೆ ಇವರ ಸೊಗಸಾದ ಆಟದ ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಶೀತಲ ಸಮರ ಮುಂದುವರೆದಿದಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣ ಆ ಒಂದು ವಿಡಿಯೋ.
ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ, ಕೋಚ್ ಗೌತಮ್ ಗಂಭೀರ್ ಅವರ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿರಾಟ್ ತಮ್ಮ ಜೇಬಿನಿಂದ ಮೊಬೈಲ್ ಫೋನ್ ತೆಗೆದು ಅದನ್ನು ಬಳಸಲು ಪ್ರಾರಂಭಿಸುತ್ತಾರೆ.
ಹಾಗೆ ಡ್ರೆಸ್ಸಿಂಗ್ ಕೋಣೆಯೊಳಗೆ ಹೋದ್ರು. ಆಗ ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ಕೋಚ್ ಗೌತಮ್ ಗಂಭೀರ್ ಅವರನ್ನು ವಿರಾಟ್ ಕೊಹ್ಲಿ ನಿರ್ಲಕ್ಷಿಸಿದ್ರಾ? ಎಂಬ ಸಂಶಯ ಮೂಡುತ್ತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ನಡುವೇ ಮೊದಲು ಶೀತಲ ಸಮರ ಇತ್ತು. ಇದು ಐಪಿಎಲ್ ವೇಳೆಯಲ್ಲಿ ಎಲ್ಲರಿಗೂ ತಿಳಿದಿತ್ತು. ಉಭಯ ಸ್ಟಾರ್ ಆಟಗಾರರು ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳ ಪರ ಆಡುವಾಗ, ತೀವ್ರ ವಾಗ್ವಾದ ನಡೆದಿತ್ತು. ಆದರೆ ಟೀಮ್ ಇಂಡಿಯಾದ ಕೋಚ್ ಆದ ಬಳಿಕ ಕೋಚ್ ಹಾಗೂ ವಿರಾಟ್ ಕೊಹ್ಲಿ ಅವರ ಸಂಬಂಧ ಉತ್ತಮವಾಗಿದೆ ಎಂದು ಕಾಣುತ್ತಿತ್ತು. ಆದರೆ ಭಾನುವಾರ ವೈರಲ್ ಆದ ವಿಡಿಯೋ ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಸಂಬಂಧ ಕೋಚ್ ಗೌತಮ್ ಗಂಭೀರ್ ಜೊತೆ ಚೆನ್ನಾಗಿಲ್ಲ ಎಂಬ ವರದಿಗಳು ಹರಿದಾಟುತ್ತಿವೆ. ಟಿ20 ಕ್ರಿಕೆಟ್ ಹಾಗೂ ಟೆಸ್ಟ್ ಪಂದ್ಯಗಳಿಗೆ ವಿರಾಟ್, ರೋಹಿತ್ ನಿವೃತ್ತರಾದ ಬಳಿಕ ಉಭಯ ಆಟಗಾರರು ಏಕದಿನ ಪಂದ್ಯಗಳತ್ತ ಚಿತ್ತ ನೆಟ್ಟಿದ್ದಾರೆ. ರೊ-ಕೊ ಜೋಡಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಆಡುವ ಬಯಕೆಯನ್ನು ಹೊಂದಿದ್ದಾರೆ. ಇನ್ನು ಮೊದಲ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮೌನ ಎದ್ದು ಕಂಡಿತ್ತು.
ಶತಕ ವೀರನಿಗೆ ಅಭಿನಂದಿಸಿದ ಕೋಚ್
ಇದಕ್ಕೂ ಮೊದಲ ವಿರಾಟ್ ಕೊಹ್ಲಿ ಶತಕ ಬಾರಿಸಿ ಪೆವಿಲಿಯನ್‌ಗೆ ಮರಳಿದಾಗ ಕೋಚ್ ಗೌತಮ್ ಗಂಭೀರ್ ಅವರು ಅವರನ್ನು ತಬ್ಬಿಕೊಂಡು ಅಭಿನಂದಿಸಿದರು. ಪಂದ್ಯದ ಬಳಿಕ ಈ ಸ್ಕ್ರೀನ್ ಶಾಟ್‌ಗಳು ಸಹ ಸಖತ್ ವೈರಲ್ ಆಗಿವೆ. ಗಂಭೀರ್ ಮತ್ತು ಕೊಹ್ಲಿ ನಡುವಿನ ಸಂಬಂಧವು ಹೆಚ್ಚು ಹಳಸಿಲ್ಲ ಎಂಬುದು ಈ ಫೋಟೋಗಳು ತೋರಿಸಿದಂತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications