For Quick Alerts
ALLOW NOTIFICATIONS  
For Daily Alerts
 

IITian Baba: ಭಾರತ ಟಿ20 ವಿಶ್ವಕಪ್ ಗೆಲ್ಲಲು ಐಐಟಿಯನ್ ಬಾಬಾ ಕಾರಣನಾ?

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭವಾಗಿದೆ. ದಿನನಿತ್ಯ ಲಕ್ಷಾಂತರ ಸಾಧುಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಮತ್ತೊಂದೆಡೆ ಮಹಾಕುಂಭದಲ್ಲಿ ಇತ್ತೀಚಿಗೆ ಐಐಟಿ ಬಾಬಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಮುಂಬೈನ ಐಐಟಿ ಏರೋಸ್ಪೇಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿರುವ ಅಭಯ್ ಸಿಂಗ್ ಎನ್ನುವ ಯುವಕ ಸಾಧು ಆಗಿದ್ದಾರೆ. ಹೀಗಾಗಿ ಅವರಿಗೆ ಐಐಟಿ ಬಾಬಾ ಎಂಬ ಹೆಸರು ಬಂದಿದೆ. ಇದೀಗ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಭಾರತ ಟಿ20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆಲ್ಲಲು ಅವರೇ ಕಾರಣ ಎಂದು ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದ 2024ರ ಟಿ20 ವಿಶ್ವಕಪ್ ಟೂನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ 7 ರನ್‌ಗಳಿಂದ ಸೋಲಿಸಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಐತಿಹಾಸಿ ಕ್ಷಣಕ್ಕೆ ಐಐಟಿ ಬಾಬಾ ನಾನೇ ಕಾರಣ ಎನ್ನುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

Did Team India win T20 World Cup by IITian Baba

ಮಾಧ್ಯಮವೊಂದರ ಸಂದರ್ಶನದಲ್ಲಿ ಐಐಟಿ ಬಾಬಾ ಅವರಿಗೆ ನೀವು ಕ್ರಿಕೆಟ್ ಪಂದ್ಯಗಳನ್ನು ನೋಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಹೌದು, ನಾನು ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನು ನೋಡಿದ್ದೇನೆ. ನಾನು 2024ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಗೆಲ್ಲುವಂತೆ ಮಾಡಿದ್ದೇನೆ. ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ಮಾಡಬೇಕು ಎಂದು ನಾನು ಪದೇ ಪದೇ ಹೇಳುತ್ತಿದ್ದೆ, ಆದರೆ ರೋಹಿತ್ ಶರ್ಮಾ ಹಾಗೆ ಮಾಡಿದರು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಗೆಲ್ಲಿಸಿದ್ದೇಗೆ?

ಐಐಟಿ ಬಾಬಾ ಕೂಡ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಲು ಹೇಗೆ ಸಹಾಯ ಮಾಡಿದರು ಎಂಬುದನ್ನು ವಿವರಿಸಿದ್ದಾರೆ. ನೀವು ಇಲ್ಲಿ ಕುಳಿತಿರುವಾಗ, ಸಿಗ್ನಲ್‌ನೊಂದಿಗೆ ಸಂಪರ್ಕವನ್ನು ಸಂಪರ್ಕಿಸಬೇಕು . ಸಿಗ್ನಲ್ ಲೈವ್ ಆಗಿದ್ದರೆ, ಶಕ್ತಿಯು ಅದೇ ರೂಪದಲ್ಲಿ ಬರುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈಗ ಆ ಶಕ್ತಿ ಹೇಗೆ ತಲುಪಿತು?. ನಿಜ ಹೇಳಬೇಕಾದರೆ, ಕ್ಯಾಮೆರಾ ಈ ಶಕ್ತಿಯನ್ನು ತನ್ನೊಳಗೆ ಹೀರಿಕೊಳ್ಳುತ್ತದೆ. ಆದರೆ ನೀವು ಪಂದ್ಯವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದೀರಿ ಮತ್ತು ಈ ನಡುವೆ ಮಾಹಿತಿಯನ್ನು ರವಾನಿಸಲಾಗುತ್ತಿದೆ. ಇದನ್ನು ತಾಂತ್ರಿಕ ಭಾಷೆಯಲ್ಲಿ ಕೋಡ್-ಡಿಕೋಡಿಂಗ್ ಎಂದೂ ಕರೆಯಬಹುದು ಎಂದು ತಿಳಿಸಿದ್ದಾರೆ.

ಭಾರತ ಮೊದಲ ಬಾರಿಗೆ 2007ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಇದಾದ ನಂತರ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾ 17 ವರ್ಷಗಳ ಕಾಲ ಕಾಯಬೇಕಾಯಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಐಸಿಸಿ ಟ್ರೋಫಿ ಬರವನ್ನು ನೀಗಿಸಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಂದೂ ಪಂದ್ಯವನ್ನು ಸೋಲದೆ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿತ್ತು.

Story first published: Tuesday, January 21, 2025, 23:03 [IST]
Other articles published on Jan 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+