Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಸುದೀರ್ಘ ಕಾಲದ ವಿರಾಮದ ನಂತರ ಅಬ್ಯಾಸಕ್ಕಿಳಿದ ಕೊಹ್ಲಿ ಪ್ರತಿಕ್ರಿಯೆ

Didnt Feel Like That: Kohli On Having A Net Session After 5 Months

ಐಪಿಎಲ್ 13ನೇ ಆವೃತ್ತಿಗಾಗಿ ಎಲ್ಲಾ ತಂಡದ ಆಟಗಾರರು ಕೂಡ ಅಬ್ಯಾಸಕ್ಕೆ ಇಳಿದಿದ್ದಾರೆ. ಆರ್‌ಸಿಬಿ ತಂಡವೂ ಕೂಡ ಕ್ವಾರಂಟೈನ್ ಮುಗಿಸಿ ಕೆಲ ದಿನಗಳಿಂದ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಈ ಬಗ್ಗೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು ಬಹಳ ಕಾಲದ ಬಳಿಕ ಆಟಕ್ಕಿಳಿದರೂ ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ.

ಸುದೀರ್ಘ ಕಾಲ ಕ್ರಿಕೆಟ್‌ನಿಂದ ದೂರವಿದ್ದರೂ ಕೂಡ ನನಗೆ ಆ ರೀತಿಯ ಅನುಭವ ಆಗುತ್ತಿಲ್ಲ, ಐದು ತಿಂಗಳ ವಿರಾಮದ ಬಳಿಕ ನಾನು ನೆಟ್ ಅಭ್ಯಾಸವನ್ನು ನಡೆಸಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ಮಾರ್ಚ್‌ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಕೊಹ್ಲಿ ಕೊನೆಯದಾಗಿ ನೆಟ್ ಅಭ್ಯಾಸಲ್ಲಿ ತೊಡಗಿದ್ದರು. ಆ ಪಂದ್ಯ ಮಳೆಗೆ ರದ್ದಾದರೆ ಬಳಿಕ ಕೊರೊನಾ ವೈರಸ್ ಕಾರಣದಿಂದಾಗಿ ಟೂರ್ನಿಯನ್ನೇ ರದ್ದುಗೊಳಿಸಲಾಯಿತು.

ಆರ್‌ಸಿಬಿಯ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ವಿರಾಟ್ ಕೊಹ್ಲಿ ಮಾತನಾಡುತ್ತಾ "ಐದು ತಿಂಗಳ ಹಿಂದೆ ನಾನು ಕೊನೆಯದಾಗಿ ನೆಟ್ ಅಭ್ಯಾಸವನ್ನು ನಡೆಸಿದ್ದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಅಂದು ಅಭ್ಯಾಸವನ್ನು ನಡೆಸಿದ್ದೆವು ಆದರೆ ಮಳೆಯಿಂದ ರದ್ದಾಗಿತ್ತು. ಬಳಿಕ ಲಕ್ನೋಗೆ ತೆರಳಿದ್ದೆವು, ಅಲ್ಲಿಂದ ಮತ್ತೆ ವಾಪಾಸ್ಸಾಗಿದ್ದೆವು" ಎಂದು ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್‌ನಲ್ಲು ಅತೀ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಖ್ಯಾತಿಯನ್ನು ಪಡೆದಿದ್ದಾರೆ. ಆರ್‌ಸಿಬಿ ಪರವಾವಿ ವಿರಾಟ್ ಕೊಹ್ಲಿ 177 ಪಂದ್ಯಗಳನ್ನು ಆಡಿದ್ದು 5412 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಈವರೆಗೆ ಒಂದು ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ.

ಇನ್ನು ಇತ್ತೀಚೆಗೆ ವಿರಾಟ್ ಕೊಹ್ಲಿ ಆರ್‌ಸಿಬಿ ಜೊತೆಗಿನ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡಿದ್ದರು. ನಾನು ಯಾವುದೇ ಕ್ಷಣದಲ್ಲೂ ಆರ್‌ಸಿಬಿಯನ್ನು ತೊರೆಯುವ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಆರ್‌ಸಿಬ ಮ್ಯಾನೇಜ್‌ಮೆಂಟ್ ಹಾಗೂ ಅಭಿಮಾನಿಗಳು ತನ್ನನ್ನು ಅತ್ಯಂತ ಪ್ರೀತಿಯಿಂದ ನೊಡಿಕೊಂಡಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದರು.

Story first published: Friday, September 4, 2020, 16:55 [IST]
Other articles published on Sep 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+