ಸೆಹ್ವಾಗ್ ರನ್ನು ದಿಗ್ಗಜ ರಿಚರ್ಡ್ಸ್ ಗೆ ಹೋಲಿಸಿ ಧೋನಿ ಟ್ವೀಟ್
ಬೆಂಗಳೂರು, ಅ.20: ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆರಂಭಿಕ ಆಟಗಾರರ ಪೈಕಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಭಾರತದ ವೀರೇಂದ್ರ ಸೆಹ್ವಾಗ್ ಅವರ ನಿವೃತ್ತಿ ಘೋಷಣೆ ಬಳಿಕ ಅವರ ಅಭಿಮಾನಿಗಳು ಟ್ವೀಟ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಸ್ಫೋಟಕ ಬ್ಯಾಟ್ಸ್ ಮನ್ ಸೆಹ್ವಾಗ್ ರನ್ನು ಅಸಲಿ ಮಾಸ್ಟರ್ ಬ್ಲಾಸ್ಟರ್ ವಿಂಡೀಸ್ ನ ವಿವಿಯನ್ ರಿಚರ್ಡ್ಸ್ ಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ.
ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಸೆಹ್ವಾಗ್ ಅವರು ನಿವೃತ್ತಿ ಘೋಷಿಸಿದ್ದಲ್ಲದೆ, ನಿವೃತ್ತಿ ಬಗ್ಗೆ ನಿರ್ಧರಿಸಿದ್ದೇಕೆ ಎಂಬುದನ್ನು ಎರಡು ಪುಟಗಳ ಪತ್ರದಲ್ಲಿ ವಿವರಿಸಿದ್ದಾರೆ.
ನನಗೆ ಸರಿ ಅನ್ನಿಸಿದ್ದನ್ನು ನಾನು ಮಾಡುತ್ತಾ ಬಂದೆ. ನನ್ನ ಆಟಕ್ಕೆ ದೇವರು ಬೆಂಬಲ ನೀಡುತ್ತಾ ಬಂದಿದ್ದರು. ನಾನು ಅಂದುಕೊಂಡಂತೆ ಆಡಲು ಸಾಧ್ಯವಾಗದ ಕಾರಣ ನಿವೃತ್ತಿಯ ನಿರ್ಧಾರಕ್ಕೆ ಬರಬೇಕಾಯಿತು ಎಂದು ನಿವೃತ್ತಿಯ ಕಾರಣ ಹೇಳಿದ್ದಾರೆ.[ಹುಟ್ಟುಹಬ್ಬದ ದಿನದಂದೇ ನಿವೃತ್ತಿ ಘೋಷಣೆ]
ಆದರೆ, 37ನೇ ಹುಟ್ಟುಹಬ್ಬದ ದಿನದಂದು ನಿವೃತ್ತಿ ಘೋಷಿಸಿರುವುದರಿಂದ ಖುಷಿ ದುಃಖ ಎರಡನ್ನೂ ನಾವು ಅನುಭವಿಸುತ್ತಿದ್ದೇವೆ. ಐಪಿಎಲ್ ನಲ್ಲಾದರೂ ನೀವು ಆಡಬಹುದಾಗಿತ್ತು ಎಂದು ಆನೇಕ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ವಿಶ್ವದ ಅನೇಕ ಕ್ರಿಕೆಟ್ ಸಂಸ್ಥೆ, ಕ್ರಿಕೆಟರ್ಸ್ ಕೂಡಾ ಸೆಹ್ವಾಗ್ ಅವರ ನಿವೃತ್ತಿ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ #ThankYouSehwag ಟ್ರೆಂಡಿಂಗ್ ನಲ್ಲಿದೆ.

ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ
ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಸೋಮವಾರ ರಾತ್ರಿಯಿಂದ ಸೆಹ್ವಾಗ್ ನಿವೃತ್ತಿ ಘೋಷಣೆ ಸುದ್ದಿ ಹಬ್ಬಿತ್ತು. ದುಬೈನಲ್ಲಿದ್ದ ಸೆಹ್ವಾಗ್ ಅವರು ಭಾರತಕ್ಕೆ ಬಂದು ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ನಂತರ ಈ ಸುದ್ದಿ ಸುಳ್ಳು ಎಂದಿದ್ದರು. ಈಗ ಟ್ವೀಟ್ ಮಾಡಿ ನಿವೃತ್ತಿ ಘೋಷಿಸಿರುವುದಾಗಿ ಹೇಳಿದ್ದಾರೆ.
ರಿಚರ್ಡ್ಸ್ ಬ್ಯಾಟಿಂಗ್ ನೋಡಿಲ್ಲ ಸೆಹ್ವಾಗ್ ನೋಡಿದ್ದೇನೆ
ವಿವಿಯನ್ ರಿಚರ್ಡ್ಸ್ ಬ್ಯಾಟಿಂಗ್ ನೋಡಿಲ್ಲ ಸೆಹ್ವಾಗ್ ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಉತ್ತಮ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸೆಹ್ವಾಗ್ ಶ್ರೇಷ್ಠ ಆಟಗಾರ ಎಂದು ಟ್ವೀಟ್ ಮಾಡಿದ್ದಾರೆ.
ಸೆಹ್ವಾಗ್ ರಂತೆ ಬ್ಯಾಟಿಂಗ್ ಊಹೆಗೆ ನಿಲುಕದ್ದು
ಸೆಹ್ವಾಗ್ ರಂತೆ ಬ್ಯಾಟಿಂಗ್ ಊಹೆಗೆ ನಿಲುಕದ್ದು, ಅವರ ಬ್ಯಾಟಿಂಗ್ ಶೈಲಿ ಹಾಗೂ ಆಡುವಾಗಿನ ಮನಸ್ಥಿತಿ ನಾವು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ.
ಸೆಹ್ವಾಗ್ ರಂತೆ ಬ್ಯಾಟಿಂಗ್ ಊಹೆಗೆ ನಿಲುಕದ್ದು
ಸೆಹ್ವಾಗ್ ರಂತೆ ಬ್ಯಾಟಿಂಗ್ ಊಹೆಗೆ ನಿಲುಕದ್ದು, ಅವರ ಬ್ಯಾಟಿಂಗ್ ಶೈಲಿ ಹಾಗೂ ಆಡುವಾಗಿನ ಮನಸ್ಥಿತಿ ನಾವು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ.
ಬಿಸಿಸಿಐ ಅಧಿಕೃತ ಶುಭ ಸಂದೇಶ
ಬಿಸಿಸಿಐ ತನ್ನ ಅಧಿಕೃತ ಶುಭ ಸಂದೇಶದಲ್ಲಿ ಸೆಹ್ವಾಗ್ ರನ್ನು ಹಾಡಿ ಹೊಗಳಿದೆ.
ಐಪಿಎಲ್ ನಲ್ಲಾದರೂ ಆಡಬಹುದಾಗಿತ್ತಲ್ಲಾ?
ಐಪಿಎಲ್ ನಲ್ಲಾದರೂ ಆಡಬಹುದಾಗಿತ್ತಲ್ಲಾ? ಏಕೆ ಹೀಗೆ ಮಾಡಿದ್ರೆ ಎಂದು ಪ್ರಶ್ನಿಸಿದ ಅಭಿಮಾನಿಗಳು.
ಸೆಹ್ವಾಗ್ ಬ್ಯಾಟಿಂಗ್ ಶೈಲಿ ಹೀಗಿರುತ್ತದೆ
ಸೆಹ್ವಾಗ್ ಬ್ಯಾಟಿಂಗ್ ಶೈಲಿ ಹೀಗಿರುತ್ತದೆ ನೋಡಿ...
ಕೋಚ್ ಆರ್ ಶ್ರೀಧರ್ ಟ್ವೀಟ್
ಕೋಚ್ ಆರ್ ಶ್ರೀಧರ್ ಟ್ವೀಟ್ ಮಾಡಿ ಸೆಹ್ವಾಗ್ ಅವರ ಇನ್ನಿಂಗ್ಸ್ ನೆನಪಿಸಿಕೊಂಡಿದ್ದಾರೆ.
ಹುಟ್ಟುಹಬ್ಬದ ದಿನವೇ ಈ ಘೋಷಣೆ ಏಕೆ?
ಹುಟ್ಟುಹಬ್ಬದ ದಿನವೇ ಈ ಘೋಷಣೆ ಏಕೆ? ಖುಷಿಪಡುವುದೇ ಅಥವಾ ದುಃಖಿಸಬೇಕೆ?
ಕ್ರಿಕೆಟ್ ನಲ್ಲಿ ಸೆಹ್ವಾಗ್ ಯುಗಾಂತ್ಯ
ಕ್ರಿಕೆಟ್ ಲೋಕದ ಅದ್ಭುತ ಆಟಗಾರ ಸೆಹ್ವಾಗ್ ಯುಗಾಂತ್ಯ.
ಸೆಹ್ವಾಗ್ ಆಟ ನೋಡುವುದೇ ಆನಂದ ಎಂದ ಸಚಿನ್
ಸೆಹ್ವಾಗ್ ಆಟ ನೋಡುವುದೇ ಆನಂದ, ಅದಕ್ಕಾಗಿ ಒಳ್ಳೆ ಸೀಟಿಗಾಗಿ ಕಿತ್ತಾಡಬೇಕಾಗಿತ್ತು. ಸೆಹ್ವಾಗ್ ಅವರ ವೃತ್ತಿ ಬದುಕು ಅದ್ಭುತ ಎಂದ ದಿಗ್ಗಜ ಸಚಿನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications