ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ವಿಶ್ವಕಪ್ ಭವಿಷ್ಯದ ಬಗ್ಗೆ ಗೌತಮ್ ಗಂಭೀರ್ ಹೇಳಿಕೆ

Difficult For Dhoni To Make A Comeback If Ipl Is Postponed - Gambhir

ಐಪಿಎಲ್ ಮುಂದೂಡಿಕೆ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಧೋನಿ ವಿಚಾರವಾಗಿ ಅನೇಕ ಮಾಜಿ ಕ್ರಿಕೆಟಿಗರು ವಿಶ್ಲೇಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈಗ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಕೂಡ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಈ ವರ್ಷ ನಡೆಯದಿದ್ದರೆ ಮುಂದಿನ ವಿಶ್ವಕಪ್‌ಗೆ ಧೋನಿಯನ್ನು ಆಯ್ಕೆಮಾಡುವುದು ಆಯ್ಕೆಗಾರರಿಗೂ ಕಷ್ಟಕರವಾಗಲಿದೆ ಎಂದಿದ್ದಾರೆ ಗಂಭೀರ್. ಧೋನಿ ಬದಲಿಗೆ ತಂಡದಲ್ಲಿ ಕೆಎಲ್ ರಾಹುಲ್ ಆ ಸ್ಥಾನಕ್ಕೆ ಸೂಕ್ತ ಎಂದು ಗಂಭೀರ್ ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಯುವಿ-ಧೋನಿ ಭಾರತ ತಂಡವನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ ಪಾಕ್ ಮಾಜಿ ವೇಗಿಯುವಿ-ಧೋನಿ ಭಾರತ ತಂಡವನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ ಪಾಕ್ ಮಾಜಿ ವೇಗಿ

ಸ್ಟಾರ್‌ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಂಭೀರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಳೆದ ಒಂದು ಒಂದೂವರೆ ವರ್ಷದಿಂದ ಕ್ರಿಕೆಟ್ ಆಡದಿರುವ ಕಾರಣ ಧೋನಿಯನ್ನು ಯಾವ ಆಧಾರದಲ್ಲಿ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಮರುಪ್ರಶ್ನಿಸಿದ ಗೌತಮ್ ಗಂಭೀರ್, ಐಪಿಎಲ್ ನಡೆಯದಿದ್ದರೆ ಕಮ್‌ಬ್ಯಾಕ್ ಮಾಡುವುದು ಧೋನಿಗೆ ಕಷ್ಟ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಬಗ್ಗೆ ಗಂಭೀರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆತನೋರ್ವ ಬಹು ಆಯಾಮವುಳ್ಳ ಕ್ರಿಕೆಟಿಗ ಎಂದಿದ್ದಾರೆ. ಧೋನಿ ಸ್ಥಾನಕ್ಕೆ ರಾಹುಲ್ ಅತ್ಯಂತ ಸೂಕ್ತ ಆಟಗಾರ. ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಟೀಮ್ ಇಂಡಿಯಾಗೆ ಉತ್ತಮ ಕೊಡುಗೆಯನ್ನು ನೀಡಲಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲಿ ಧೋನಿಯಷ್ಟು ಉತ್ಕೃಷ್ಟಮಟ್ಟದಲ್ಲಿಲ್ಲದಿದ್ದರೂ ಆತನೋರ್ವ ಉಪಯುಕ್ತ ಆಟಗಾರ ಎಂದು ರಾಹುಲ್ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ವಿಚಿತ್ರ ಬ್ಯಾಟಿಂಗ್ ಶೈಲಿಯ ರಹಸ್ಯ ಬಹಿರಂಗ ಪಡಿಸಿದ ಸ್ಟೀವ್ ಸ್ಮಿತ್ವಿಚಿತ್ರ ಬ್ಯಾಟಿಂಗ್ ಶೈಲಿಯ ರಹಸ್ಯ ಬಹಿರಂಗ ಪಡಿಸಿದ ಸ್ಟೀವ್ ಸ್ಮಿತ್

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಳೆದ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಕಮ್‌ಬ್ಯಾಕ್‌ಗೆ ಸಿದ್ಧವಾಗಿದ್ದರು ಧೋನಿ. ಆದರೆ ಕೊರೊನಾ ವೈರಸ್‌ನ ಕಾರಣಕ್ಕೆ ಟೂರ್ನಿ ಅತಂತ್ರವಾಗಿದ್ದು ಧೋನಿ ಕ್ರಿಕೆಟ್ ಭವಿಷ್ಯವೂ ಪ್ರಶ್ನಾರ್ಥಕವಾಗಿದೆ.

Story first published: Monday, April 13, 2020, 19:06 [IST]
Other articles published on Apr 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X