Digvesh Rathi: 5 ಎಸೆತಗಳಲ್ಲಿ 5 ವಿಕೆಟ್ ಪಡೆದ ಎಲ್‌ಎಸ್‌ಜಿ ಪ್ಲೇಯರ್: ವಿಡಿಯೋ ವೈರಲ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿರುವ ಪ್ರತಿಭೆಗಳು ವಿಶ್ವದೆಲ್ಲಡೆ ಸದ್ದು ಮಾಡ್ತಾ ಇರುತ್ತಾರೆ. ಹಾಗೆ ಐಪಿಎಲ್ ಪ್ರತಿ ವರ್ಷವೂ ಹಲವು ಯುವ ಆಟಗಾರರ ಹುಟ್ಟಿಗೆ ಕಾರಣವಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಿದ ಯುವ ಆಟಗಾರರ ಪಟ್ಟಿಯಲ್ಲಿ ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ಆಯುಷ್ ಮಾತ್ರೆ ಹಾಗೂ ದಿಗ್ವೇಶ್ ರಾಠಿ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುವ ದಿಗ್ವೇಶ್ ರಾಠಿ ಯಂತೂ ಅಭಿಮಾನಿಗಳಿ ಫೆವರೀಟ್ ಪ್ಲೇಯರ್. ಇವರು ವಿಕೆಟ್ ಪಡೆದ ಬಳಿಕ ಮಾಡುವ ನೋಟ್‌ಬುಕ್ ಸೆಲೆಬ್ರೇಷನ್ ಸಖತ್ ಸದ್ದು ಮಾಡಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿದ್ದ ಹೆಸರುಗಳಲ್ಲಿ ದಿಗ್ವೇಶ್ ರಾಠಿ ಸಹ ಒಬ್ಬರು. ಇವರು ಐಪಿಎಲ್‌ನಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ ಪ್ರತಿಭೆ. ಇವರು ಐಪಿಎಲ್‌ನಲ್ಲಿ ಆಡಿದ 13 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈಗ ಪ್ರಾಂತೀಯ ಪಂದ್ಯಗಳಲ್ಲೂ ಸದ್ದು ಮಾಡಿದ್ದಾರೆ.

ದಿಗ್ವೇಶ್ ರಾಠಿ ಸದ್ಯ ರೀಜನಲ್ ಲೇವಲ್ ಟೂರ್ನಿಗಳನ್ನು ಆಡುತ್ತಿದ್ದಾರೆ. ಈ ವೇಳೆಯೂ ದಿಗ್ವೇಶ್ ತಮ್ಮ ಅಮೋಘ ಸ್ಪಿನ್ ದಾಳಿಯನ್ನು ಪ್ರದರ್ಶಿಸಿ ಮಿಂಚಿದ್ದಾರೆ. ಇವರು ಈ ಪಂದ್ಯದಲ್ಲಿ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಬಗ್ಗೆ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯಂಕಾ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
5 ಎಸೆತಗಳಲ್ಲಿ 5 ವಿಕೆಟ್
ನನಗೆ ಒಂದು ವಿಡಿಯೋ ಸಿಕ್ಕಿದೆ. ಈ ವಿಡಿಯೋದಲ್ಲಿ ದಿಗ್ವೇಶ್ ರಾಠಿ ಒಂದು ರೀಜನಲ್ ಪಂದ್ಯದಲ್ಲಿ 5 ಎಸೆತಗಳಲ್ಲಿ 5 ವಿಕೆಟ್ ಪಡೆದು ಬೀಗಿದ್ದಾರೆ. ಇದು ಅವರಲ್ಲಿರುವ ಪ್ರತಿಭೆಯ ಒಂದು ಝಲಕ್ ಅಷ್ಟೇ. ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಉದಯೋನ್ಮುಖ ತಾರೆಯನ್ನಾಗಿ ಮಾಡಿದೆ.
ಈ ಪಂದ್ಯದಲ್ಲಿ ದಿಗ್ವೇಶ್ ರಾಠಿ ಸತತ ಐದು ವಿಕೆಟ್ ಸೇರಿದಂತೆ ಒಟ್ಟು 7 ವಿಕೆಟ್ ಪಡೆದು ಬೀಗಿದ್ದಾರೆ. ಈ ವಿಡಿಯೋದಲ್ಲೂ ಲೀಗ್‌ನ ಹೆಸರು ಕಂಡು ಬಂದಿಲ್ಲ. ಆದರೆ ಎಲ್‌ಎಸ್‌ಜಿ ಓನರ್ ಮಾಡಿರುವ ಟ್ವೀಟ್‌ನಲ್ಲಿ ರೀಜನಲ್ ಮ್ಯಾಚ್ ಎಂದು ತಿಳಿಯುತ್ತದೆ. ರಾಠಿ ಸತತ ಐದು ವಿಕೆಟ್ ಪಡೆದಾಗ, ನಾಲ್ವರು ಬ್ಯಾಟರ್‌ಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

ದಿಗ್ವೇಶ್ ರಾಠಿ ಐಪಿಎಲ್‌ನಲ್ಲಿ ತಮ್ಮ ವಿಭಿನ್ನ ಸೆಲೆಬ್ರೇಷನ್ ಮೂಲಕವೇ ಹೆಸರು ಮಾಡಿದ್ದರು. ಇವರು ತಾವು ವಿಕೆಟ್ ಪಡೆದ ತಕ್ಷಣ ನೋಟ್ ಬುಕ್ ಸೆಲೆಬ್ರೇಷನ್ ಮಾಡುತ್ತಿದ್ದರು. ಇದರ ಪರಿಣಾಮ ಅವರಿಗೆ ಒಂದು ಪಂದ್ಯದ ನಿಷೇಧವನ್ನು ಹೇರಲಾಗಿತ್ತು. ಪ್ರಸಕ್ತ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪ್ಲೇ ಆಫ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ. ಆಡಿದ 14 ಪಂದ್ಯಗಳಲ್ಲಿ ಎಲ್‌ಎಸ್‌ಜಿ ಕೇವಲ 6 ಗೆಲುವನ್ನು ಮಾತ್ರ ದಾಖಲಿಸಿದೆ. ಈ ಮೂಲಕ ಲಕ್ನೋ ತಂಡ ಏಳನೇ ಸ್ಥಾನೀಯವಾಗಿ ಐಪಿಎಲ್‌ಗೆ ಗುಡ್ ಬಾಯ್ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications