ಆಸ್ಟ್ರೇಲಿಯಾ ಸದ್ಯ ಶ್ರೀಲಂಕಾ ಪ್ರವಾಸ ಬೆಳೆಸಿದೆ. ಈ ವೇಳೆ ಮೊದಲು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಬಳಿಕ ಏಕದಿನ ಸರಣಿ ನಡೆಯಲಿದೆ. ಈಗಾಗಲೇ ಶ್ರೀಲಂಕಾ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಸೋತಿದೆ. ಪ್ರವಾಸಿ ಆಸ್ಟ್ರೇಲಿಯಾ 23 ವರ್ಷಗಳ ಲಂಕಾ ನೆಲದಲ್ಲಿ ಜಯ ಸಾಧಿಸಿದೆ. ಎರಡನೇ ಪಂದ್ಯಕ್ಕೆ ವೇದಿಕೆ ಸಜ್ಜಾಗುತ್ತಿದೆ. ಈ ಪಂದ್ಯಕ್ಕೂ ಗಾಲೆಯ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವಹಿಸಲಿದೆ. ಗುರುವಾರದಿಂದ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ವೇಳೆ ಶ್ರೀಲಂಕಾದ ಸ್ಟಾರ್ ಬ್ಯಾಟರ್ ಒಬ್ಬ ನಿವೃತ್ತಿ ಘೋಷಿಸಿದ್ದಾರೆ.
ಶ್ರೀಲಂಕಾ ತಂಡದ ಪರ ದಶಕಗಳಿಗಿಂತಲೂ ಹೆಚ್ಚು ಕಾಲ ಬ್ಯಾಟ್ ಮಾಡಿರುವ ಸ್ಟಾರ್ ದಿಮುತ್ ಕರುಣರತ್ನೆ ಕ್ರಿಕೆಟ್ ತಮ್ಮ ಸುಧೀರ್ಘ ಕ್ರಿಕೆಟ್ ಜೀವನಕ್ಕೆ ಗುಡ್ ಬಾಯ್ ಹೇಳಿದ್ದಾರೆ. ಗಾಲೆಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯ ಇವರ ಟೆಸ್ಟ್ ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯ ಆಗಿರಲಿದೆ. ಇದೇ ಪಂದ್ಯದಲ್ಲಿ ದಿಮುತ್ ಕರುಣರತ್ನೆ ಮತ್ತೊಂದು ದಾಖಲೆಯನ್ನು ಸಹ ಬರೆಯಲಿದ್ದರೆ. ದಿಮುತ್ ಕರುಣರತ್ನೆ ತಮ್ಮ ಟೆಸ್ಟ್ ವೃತ್ತಿ ಜೀವನದ ನೂರನೇ ಪಂದ್ಯದಲ್ಲಿ ನಿವೃತ್ತಿ ಪಡೆಯಲಿದ್ದಾರೆ. ಇವರು ಲಂಕಾ ಪರ 8 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ದಿಮುತ್ ಕರುಣರತ್ನೆನಿವೃತ್ತಿಯ ಬಗ್ಗೆ ಶ್ರೀಲಂಕಾದ ಪ್ರಸಿದ್ಧ ಪತ್ರಿಕೆ 'ಡೈಲಿ ಎಫ್‌ಟಿ' ವರದಿ ಪ್ರಕಟಿಸಿದೆ. ದಿಮುತ್ ಕರುಣರತ್ನೆ 100 ಟೆಸ್ಟ್ ಆಡಿದ ಬಳಿಕ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ದೂರ ಸರಿಯುವುದಾಗಿ ಹೇಳಿದ್ದಾರೆ. ನಿವೃತ್ತಿಯ ಬಳಿಕ ದಿಮುತ್ ಕರುಣರತ್ನೆ ಶ್ರೀಲಂಕಾ ಬಿಟ್ಟು ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬುದನ್ನು ಇದೇ ವೇಳೆ ಅವರು ಬಹಿರಂಗ ಪಡಿಸಿದ್ದಾರೆ. ದಿಮುತ್ ಕರುಣರತ್ನೆ ಫೆಬ್ರವರಿ 14 ರಿಂದ 16ರ ವರೆಗೆ ನಡೆಯಲಿರುವ ಮೇಜರ್ ಕ್ಲಬ್ ಮೂರು ದಿನಗಳ ಟೂರ್ನಮೆಂಟ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ.
"ನಿವೃತ್ತಿಗೆ ಇದು ಸರಿಯಾದ ಸಮಯ. ಒಂದು ವರ್ಷಕ್ಕೆ ನಾಲ್ಕು ಟೆಸ್ಟ್ ಆಡಿದರೆ ಫಾರ್ಮ್ ಕಾಯ್ದುಕೊಳ್ಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಟೆಸ್ಟ್ ಪಂದ್ಯ ಆಡಬೇಕಾಗುತ್ತಿದೆ. ಇನ್ನು ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕೊನೆಯ ಪಂದ್ಯ ಫೆ.6 ರಂದು ನಡೆಯುವುದರಿಂದ ಇದೇ ಸರಿಯಾದ ಸಮಯವನ್ನು ನಾನು ನಿವೃತ್ತಿ ಪಡೆಯುತ್ತಿದ್ದೇನೆ ಎಂದು ದಿಮುತ್ ತಿಳಿಸಿದ್ದಾರೆ.

ದಿಮುತ್ ಕರುಣರತ್ನೆ ಅಮೋಘ ವೃತ್ತಿ ಜೀವನವನ್ನು ಹೊಂದಿದ್ದಾರೆ. 2011ರಲ್ಲಿ ಇವರು ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವರು ಒಟ್ಟು 99 ಟೆಸ್ಟ್ ಪಂದ್ಯಗಳಲ್ಲಿ ಲಂಕಾ ಪರ ಕಣಕ್ಕೆ ಇಳಿದಿದ್ದು 7172 ರನ್ ಸಿಡಿಸಿದ್ದಾರೆ. ಈ ವೇಳೆ 16 ಶತಕ, 39 ಅರ್ಧಶತಕ ಸಿಡಿಸಿದ್ದಾರೆ. ಇವರು ಏಕದಿನ ಕ್ರಿಕೆಟ್‌ನಲ್ಲಿ 50 ಪಂದ್ಯಗಳನ್ನು ಆಡಿದ್ದು 1 ಶತಕ ಹಾಗೂ 11 ಅರ್ಧಶತಕಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.