Border-Gavaskar Trophy 2024: ಪೂಜಾರ-ರಹಾನೆಗೆ ಬದಲಿ ಆಟಗಾರರನ್ನು ಹೆಸರಿಸಿದ ದಿನೇಶ್ ಕಾರ್ತಿಕ್
ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಕಟ್ಟಲು ಸಿದ್ಧತೆಗಳು ಆರಂಭವಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ ಸತತ ಮೂರನೇ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೇಲೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣ್ಣಿಟ್ಟಿದ್ದಾರೆ.
ಕಾಂಗೂರು ನೆಲದಲ್ಲಿ ಟೆಸ್ಟ್ ಸರಣಿ ಭಾರತಕ್ಕೆ ಅಷ್ಟು ಸುಲಭವಲ್ಲ. ಏಕೆಂದರೆ ಭಾರತ ಈ ಬಾರಿ ಯುವ ಪಡೆಯೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಗಲೇ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಬಲಿಷ್ಠ ಟೀಮ್ ಇಂಡಿಯಾ ರೆಡಿ ಮಾಡಲು ಹಲವು ಪ್ರಯೋಗಗಳನ್ನು ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡದ ಹೇಗಿರಲಿದೆ ಎಂದು ಎಲ್ಲರೂ ಕುತೂಹಲಗೊಂಡಿದ್ದಾರೆ.

ರಹಾನೆ-ಪೂಜಾರ ಗೆಲುವಿನ ರೂವಾರಿಗಳು
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್‌ಗಳ ಸರಣಿಯು ನವೆಂಬರ್ 22 ರಂದು ಪ್ರಾರಂಭವಾಗಲಿದೆ. ಕಳೆದ ಎರಡು ಸರಣಿಗಳಲ್ಲಿ ಭಾರತ ತವರಿನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಭಾರತದ ಈ ಎರಡು ಗೆಲುವುಗಳಲ್ಲಿ ಅಂಜಿಕ್ಯಾ ರಹಾನೆ ಮತ್ತು ಚೇತೇಶ್ವರ ಪೂಜಾರ ಪಾತ್ರ ಮರೆಯುವಂತಿಲ್ಲ.
2018-19ರ ಸರಣಿ ಗೆಲುವಿನ ವೇಳೆ ಚೇತೇಶ್ವರ ಪೂಜಾರ ಭಾರತ ತಂಡದ ಬ್ಯಾಟಿಂಗ್ ಲೈನ್‌ಅಪ್‌ನ ಬೆನ್ನೆಲುಬಾಗಿದ್ದರು. ಈ ಸರಣಿಯಲ್ಲಿ ಅವರು 521 ರನ್ ಗಳಿಸಿದ್ದರು. ಮತ್ತೊಂದೆಡೆ, ಅಜಿಂಕ್ಯ ರಹಾನೆ 2020-21ರ ಸರಣಿಯಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶತಕ ಬಾರಿಸುವ ಮೂಲಕ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.
ಇಂತಹ ಪರಿಸ್ಥಿತಿಯಲ್ಲಿ ರಹಾನೆ ಮತ್ತು ಚೇತೇಶ್ವರ ಅವರನ್ನು ತಂಡದಿಂದ ಕೈ ಬಿಡುವುದು ಭಾರತಕ್ಕೆ ಸುಲಭದ ಮಾತಲ್ಲ. ಆದರೆ ಹಲವು ದಿನಗಳಿಂದ ಈ ಇಬ್ಬರಿಗೂ ಅವಕಾಶ ಸಿಗದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಈ ಇಬ್ಬರಿಗೆ ಬದಲಿ ಆಟಗಾರರನ್ನು ಹೆಸರಿಸಿದ್ದಾರೆ.
ರಹಾನೆ ಮತ್ತು ಪೂಜಾರಗೆ ಬದಲಿ ಆಟಗಗಾರರು
ಭಾರತ ಟೆಸ್ಟ್ ತಂಡಕ್ಕೆ ಶಕ್ತಿ ತುಂಬಲು ರಹಾನೆ ಮತ್ತು ಪೂಜಾರ ಬದಲಿಗೆ ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್ ಅವರನ್ನು ಕಾರ್ತಿಕ್ ಹೆಸರಿಸಿದ್ದಾರೆ. ಮುಂಬರುವ ಪ್ರವಾಸದಲ್ಲಿ ಗಿಲ್ ಮತ್ತು ಸರ್ಫರಾಜ್ ಹಿರಿಯ ಆಟಗಾರರನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕ್‌ಬಜ್‌ನ 'ಹೆಸ್ಬಿ ವಿತ್ ಡಿಕೆ' ಕಾರ್ಯಕ್ರಮದಲ್ಲಿ ಮಾತನಾಡಿರುವ ಕಾರ್ತಿಕ್, "ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್ ಇಬ್ಬರೂ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆ ಇಬ್ಬರಲ್ಲಿ ಒಬ್ಬರು ಖಂಡಿತವಾಗಿಯೂ ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ. ಅವರಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬಹುದು. ಈ ಇಬ್ಬರು ಅಜಿಂಕ್ಯ ಮತ್ತು ಪೂಜಾರ ಸ್ಥಾನವನ್ನು ತುಂಬುತ್ತಾರಾ ಎಂಬುದು ಆಸ್ಟ್ರೇಲಿಯಾ ಪ್ರವಾಸ ತಿಳಿಯಲಿದೆ" ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications