IPL 2025: ದಿನೇಶ್ ಕಾರ್ತಿಕ್ ಸ್ಥಾನ ತುಂಬ್ತಾರಾ ಮುಂಬೈಕರ್!
ಆಗಸ್ಟ್ 1 ಗುರುವಾರ, ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರೀ ಕುತೂಹಲ ಮೂಡಿಸಿದೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಪ್ರತಿ ತಂಡಗಳು ತಲಾ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿದೆ.
ಈಗಾಗಲೇ ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ಘಟಾನುಘಟಿ ಆಟಗಾರರನ್ನು ಬೆಡ್ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಸಿವೆ. ಜೊತೆಗೆ ಯಾವ ನಾಲ್ಕು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬುದು ಕೆಲ ಫ್ರಾಂಚೈಸಿಗಳನ್ನು ಚಿಂತೆಗೀಡು ಮಾಡಿದೆ.

ಈ ವರ್ಷ 2024ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪ್ರಮುಖ ಬದಲಾವಣೆವೊಂದನ್ನು ಮಾಡಿತ್ತು. ರೋಹಿತ್ ಶರ್ಮಾ ಅವರಿಂದ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ಹಸ್ತಾಂತರಿಸಲಾಗಿತ್ತು. ಇದು ಹಿಟ್‌ಮ್ಯಾನ್ ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು.
ಮತ್ತೊಂದೆಡೆ ಮುಂಬೈ ತಂಡದಲ್ಲಿ ಆಟಗಾರರು ಕೂಡ ಕಳಪೆ ಪ್ರದರ್ಶನ ನೀಡಿದ್ದರು. ಅದರಲ್ಲೂ ಎಂಐ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಇಶಾನ್ ಕಿಶನ್ ವಿಶೇಷವಾದುದ್ದನ್ನು ಮಾಡುವಲ್ಲಿ ವಿಫಲವಾಗಿದ್ದರು. ಜೊತೆಗೆ ರೋಹಿತ್ ಶರ್ಮಾ ಕೂಡ ಹಲವು ಬಾರಿ ಡಕ್ ಔಟ್ ಆಗಿದ್ದರು.
ಆದರೆ ಕಳೆದ ಕೆಲವು ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಸೂರ್ಯಕುಮಾರ್ ಯಾದವ್ ಭಾರತಕ್ಕೆ ಟಿ20 ನಾಯಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೂರ್ಯ ಕೂಡ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ತಂಡದ ನಾಯಕನಾಗುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಈ ಬಾರಿ ಎಂಐ ಫ್ರಾಂಚೈಸಿ ಯಾವೆಲ್ಲಾಆಟಗಾರರನ್ನು ತಂಡದಿಂದ ಹೊರ ಇಡುತ್ತದೆ ಎಂಬುದು ಚರ್ಚೆ ಆಗುತ್ತಿದೆ. ಈ ಸಾಲಿನಲ್ಲಿ ಇಶಾನ್ ಕಿಶನ್ ಮುಂಚೂಣಿಯಲ್ಲಿದ್ದು, ಇವರನ್ನು ಫ್ರಾಂಚೈಸಿ ಹೊರಗಿಡುವ ಸಾಧ್ಯತೆ ಇದೆ.
ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ ಬೆಂಗಳೂರು (ಆರ್‌ಸಿಬಿ) ತಂಡ ಇಶಾನ್ ಕಿಶಾನ್ ಅವರನ್ನು ಬಿಡ್ ಮಾಡಲು ಎಲ್ಲ ಸಿದ್ಧತೆ ನಡೆಸಿದೆ. 2024ರ ಐಪಿಎಲ್ ಬಳಿಕ ಆರ್‌ಸಿಬಿ ವಿಕೆಟ್ ಕೀಪರ್ ಮತ್ತು ಸ್ಪೋಟಕ ಬ್ಯಾಟರ್ ದಿನೇಶ್ ಕಾರ್ತಿಕ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದರು. ಹೀಗಾಗಿ ಆರ್‌ಸಿಬಿ ಯುವ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಹುಡುಕಾಟದಲ್ಲಿದ್ದು, ತಂಡಕ್ಕೆ ಇಶಾನ್ ಕಿಶನ್ ಕರೆ ತರುವ ದೊಡ್ಡ ಯೋಜನೆ ರೂಪಿಸಿದೆ.
ಒಂದು ವೇಳೆ ಇಶಾನ್ ಕಿಶನ್ ಆರ್‌ಸಿಬಿ ಸೇರಿಕೊಂಡರೆ, ತಂಡಕ್ಕೆ ಅಪಾರ ಶಕ್ತಿ ಸಿಕ್ಕಂತಾಗುತ್ತದೆ. ಅಲ್ಲದೆ ಮುಂಬರುವ ಐಪಿಎಲ್‌ನಲ್ಲಿ ಫಾಪ್ ಡು ಪ್ಲೆಸಿಸ್ ಆಡುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಎಡಗೈ ಬ್ಯಾಟರ್ ಆಗಿರುವುದರಿಂದ ಆರ್‌ಸಿಬಿಗೆ ಆರಂಭಿಕನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿಬಹುದು.
ಇದು ಸಾಧ್ಯವಾಗದೆ ಇದ್ದಲ್ಲಿ, ಮೂರ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಮೂಲಕ ಆರ್‌ಸಿಬಿ ಬ್ಯಾಟಿಂಗ್ ಬಲ ಹೆಚ್ಚಿಸಬಹುದು. ಎಂಐ ಪರ ಇಶಾನ್ ಕಿಶನ್ ಏಕಾಂಗಿಯಾಗಿ ಆಡಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಜೊತೆಗೆ ವಿಕೆಟ್ ಕೀಪಿಂಗ್‌ನಲ್ಲಿಯೂ ಕಿಶನ್ ಮಿಂಚಿದ್ದಾರೆ. ಹೀಗಾಗಿ ನಿವೃತ್ತಿ ಘೋಷಿಸಿರುವ ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಇಶಾನ್ ಕಿಶನ್ ಸೂಕ್ತ ಆಟಗಾರರಾಗಿದ್ದಾರೆ. ಹೀಗಾಗಿ ಡಿಕೆ ಜಾಗಕ್ಕೆ ಇಶಾನ್ ಕಿಶನ್ ಅವರನ್ನು ಕರೆ ತರುವ ಚಿಂತನೆಯಲ್ಲಿ ಆರ್‌ಸಿಬಿ ಫ್ರಾಂಚೈಸಿ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications