FIDE Women's Chess World Cup: ದಿವ್ಯಾ ದೇಶಮುಖ್ ಚಾಂಪಿಯನ್
2025 ರ FIDE ಮಹಿಳಾ ಚೆಸ್ ವಿಶ್ವಕಪ್‌ನಲ್ಲಿ ಕೊನೆರು ಹಂಪಿ ಅವರನ್ನು ಸೋಲಿಸುವ ಮೂಲಕ 19 ವರ್ಷದ ದಿವ್ಯಾ ದೇಶಮುಖ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಸೋಮವಾರ ನಡೆದ ಟೈಬ್ರೇಕರ್ ಪಂದ್ಯದಲ್ಲಿ ದಿವ್ಯಾ ದೇಶಮುಖ್ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದರು. ಇವರು ಫೈನಲ್ ಪಂದ್ಯದಲ್ಲಿ ಭಾರತದವರೆ ಆದ ಕೋನೇರು ಹಂಪಿ ಅವರನ್ನು ಸೋಲಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ.
ಜಾರ್ಜಿಯಾದ ಬಟುಮಿಯಲ್ಲಿ ಕಳೆದ ಮೂರು ವಾರಗಳಿಂದ ಮಹಿಳಾ ಚೆಸ್ ವಿಶ್ವಕಪ್ ನಡೆಯುತ್ತಿತ್ತು. ಈ ಟೂರ್ನಿಯಲ್ಲಿ ದಿವ್ಯಾ ದೇಶಮೂಖ್ ಸ್ಥಿರ ಪ್ರದರ್ಶನ ನೀಡಿ ಫೈನಲ್‌ಗೆ ತಲುಪಿ ಇತಿಹಾಸ ನಿರ್ಮಿಸಿದ್ದರು. ಇದೇ ಟೂರ್ನಿಯ ಮತ್ತೊಂದು ಸೆಮಿಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತದ ಸ್ಟಾರ್ ಮಹಿಳಾ ಚೆಸ್ ಆಟಗಾರ್ತಿ ಕೋನೇರು ಹಂಪಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದರು. ಈ ಇಬ್ಬರಲ್ಲೂ ಯಾರೇ ಗೆದ್ದರೂ ಪ್ರಶಸ್ತಿ ಭಾರತಕ್ಕೆ ಬರುವುದು ಕನ್ಫರ್ಮ್ ಆಗಿತ್ತು. ಆದರೆ ಈ ಬಾರಿ ಯುವ ಆಟಗಾರ್ತಿ ಆಟ ಮೇಲಾಯಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಂಪಿ ನಿರಾಸೆ ಅನುಭವಿಸಿದರು.

2025 ರ FIDE ಮಹಿಳಾ ಚೆಸ್ ವಿಶ್ವಕಪ್ ಫೈನಲ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ದಿವ್ಯ ಕೊನೆಯ ಹಾಗೂ ಟೈಬ್ರೇಕರ್‌ನಲ್ಲಿ ಕಪ್ಪು ದಳಗಳಿಂದ ಆಟವನ್ನು ಆರಂಭಿಸಿದರು. ಭಾನುವಾರ ನಡೆದಿದ್ದ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಆರಂಭದಲ್ಲಿ ದಿವ್ಯಾ ಯೋಚಿಸಿ ಆಟವಾಡಿದರು. ಆಮೇಲೆ ಹಂಪಿ ಅವರ ತಂತ್ರವನ್ನು ಮೆಟ್ಟಿ ನಿಂತು ಅಂಕಗಳನ್ನು ಗಳಿಸಿದರು. ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಸೋಮವಾರ ನಡೆದ ಟೈಬ್ರೇಕರ್‌ನಲ್ಲಿ ದಿವ್ಯಾ ಸಮಯೋಚಿತ ಆಟವನ್ನು ಆಡಿ ಪ್ರಶಸ್ತಿ ಗೆದ್ದ ಬೀಗಿದರು.
ಟ್ರೈಬ್ರೇಕರ್ ಪಂದ್ಯ ನಡೆಯುವುದು ಹೇಗೆ?
ಟ್ರೈಬ್ರೇಕರ್‌ನಲ್ಲಿ ಎರಡು ಪಂದ್ಯಗಳನ್ನು ಆಡಲಾಗುತ್ತದೆ. ಪ್ರತಿ ಪಂದ್ಯ 15 ನಿಮಿಷದ್ದಾಗಿರುತ್ತದೆ. ಪ್ರತಿ ನಡೆಗೆ 10 ಸೆಕೆಂಡ್‌ಗಳ ಸಮಯವನ್ನು ನಿಗಿದಿ ಮಾಡಲಾಗುತ್ತದೆ. ಈ ಹಂತದಲ್ಲೂ ಸ್ಕೋರ್ ಸಮನಾದಾದ ಮತ್ತೆ 10 ನಿಮಿಷಗಳ 2 ಗೇಮ್ ಆಡಿಸಲಾಗುತ್ತದೆ.
ಭಾರತದ ಭರವಸೆಯ ಆಟಗಾರ್ತಿ ದಿವ್ಯಾ ದೇಶಮುಖ್, ಫೈನಲ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆ ಭಾವುಕರಾದರು. ಹಂಪಿ ಪಂದ್ಯ ಮುಗಿಯುತ್ತಿದ್ದಂತೆ ಕೈ ಕುಲುಕಿದಾಗ ದಿವ್ಯಾ ಕಣ್ಣುಗಳ ಅಂಚಿನಲ್ಲಿ ನೀರು ತುಂಬಿತ್ತು. ಬಳಿಕ ಅಲ್ಲಿಯೇ ಇದ್ದ ತಾಯಿಯನ್ನು ತಬ್ಬಿಕೊಂಡು ಆನಂದ ಭಾಷ್ಪಾ ಸುರಿಸಿದರು. ಈ ಗೆಲುವಿನೊಂದಿಗೆ ದಿವ್ಯಾ ಮುಡಿಗೆ ಗ್ರ್ಯಾಂಡ್ ಮಾಸ್ಟರ್ ಪಟ್ಟ ಒಲಿದಿದೆ. ಹಂಪಿ, ಹರಿಕಾ, ವೈಶಾಲಿ ಬಳಿಕ ಈ ಪ್ರಶಸ್ತಿಯನ್ನು ಗೆದ್ದ ನಾಲ್ಕನೇಯ ಭಾರತೀಯ ಆಟಗಾರ್ತಿ ಎಂಬ ಹಿರಿಮೆ ದಿವ್ಯಾ ಪಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications